ಬೀದರ.24.ಮಾರ್ಚ್.25:- ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಆಚರಣೆ ಮಾಡಲಾಯಿತು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪುರುಷರು ಮತ್ತು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸರಿ ಸಮಾನರಾಗಿ ನಡೆದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಪ್ರಾಚಾರ್ಯ ಲಕ್ಷ್ಮಣ ಕಾಂಬಳೆ ಹೇಳಿದರು.
‘ಹೆಣ್ಣು ಸಮಾಜದ ಕಣ್ಣು. ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ ಎಂಬ ಹೇಳಿಕೆಗಳು ಹೆಣ್ಣಿನ ಮಹತ್ವದ ಕುರಿತು ಮಾಹಿತಿ ನೀಡುತ್ತವೆ’ ಎಂದರು.
ಡಾ. ಜೈಶ್ರೀ ಪಿ. ಮಾತನಾಡಿ, ‘ಮಹಿಳೆಯರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಮಹಿಳೆಯರು ತಮಗೆ ದೊರೆಯುತ್ತಿರುವ ಅವಕಾಶಗಳಿಗಾಗಿ ಅಂಬೇಡ್ಕರ್ ಅವರಿಗೆ ಸದಾ ಚಿರಋಣಿಯಾಗಿರಬೇಕು’ ಎಂದು ಹೇಳಿದರು.
ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕ ರಘುನಂದನ ಮಾತನಾಡಿದರು.
ಎಲ್ಲ ಮಹಿಳಾ ಸಿಬ್ಬಂದಿ ವರ್ಗದವರಿಗೆ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಮುಖರಾದ ಬಸವರಾಜೇಶ್ವರಿ ನಾಗಮ್ಮ ಬಂಗರಗಿ, ವಿಜಯಲಕ್ಷ್ಮಿ, ಸ್ವಪ್ನ, ತುಪ್ಪದ ವೀರಣ್ಣ, ಹೇಮಾವತಿ ಪಾಟೀಲ, ರವಿ ಮೇಟಿ, ಸಹನಾ, ಸಿಂಧು ಉಪಸ್ಥಿತರಿದ್ದರು.
ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ಪ್ರಾಚಾರ್ಯ ಲಕ್ಷ್ಮಣ ಕಾಂಬಳೆ ಇದ್ದರು
ರಾಜ್ಯ ಸರ್ಕಾರ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26 ನೇ ಸಾಲಿನಲ್ಲಿ ಯು.ಪಿ.ಎಸ್.ಸಿ. ನಾಗರಿಕ ಸೇವೆ ಮತ್ತು ಬ್ಯಾಂಕಿಂಗ್…
2025-26 ಪ್ರಸಕ್ತ ಸಾಲಿನ ಅಲ್ಪಸಂಖ್ಯಾತರ ಇಲಾಖೆವತಿಯಿಂದ ಬೆಂಗಳೂರು ಹಜ್ ಭವನದಲ್ಲಿ ವಸತಿಯುತ ತರಬೇತಿ ಅಥವಾ ಶಿಷ್ಯವೇತನದೊಂದಿಗೆ ಪ್ರತಿಷ್ಠಿತ ಸಂಸ್ಥೆಯ ಮೂಲಕ…
ಉಚಿತ ತರಬೇತಿ ಮತ್ತು ಊಟ ವಸತಿ ಸಹಿತ.ನಾನಾ ತರಬೇತಿಗಳಿಗೆ ಅರ್ಜಿ ಆಹ್ವಾನ ಗ್ರಾಮೀಣ ಕೌಶಲ ಎಂದರೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ…
2025-26ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಬಿಐಇಆರ್‍ಟಿ ಪ್ರಾಥಮಿಕ ನಾನಾ ತಾತ್ಕಾಲಿಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಗ್ರ…
2025-26ನೇ ಸಾಲಿನ ಸಂಪೂರ್ಣ ಗ್ರಾಮ ಪಂಚಾಯತಿ ಆಸ್ತಿ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಲು ಕೊನೆಯ ದಿನಾಂಕ 30-06- 2025,…
ಬೆಂಗಳೂರು.16.ಜೂನ್.25:- ರಾಜ್ಯದಲ್ಲಿ 2025-26ನೇ ಸಾಲಿಗೆ ಸಂಘ ಸಂಸ್ಥೆ'ಗಳಿಗೆ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ…