ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತ* ಮಾಡುವುದೇ ಮುಖ್ಯ ಗುರಿ-ಸಚಿವ ಈಶ್ವರ ಖಂಡ್ರೆ


ಬೀದರ.12.ಜೂನ್.25:- ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತನಾಗಿ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ ಈಶ್ವರ ಖಂಡ್ರೆ ಅವರು ಹೇಳಿದರು.


ಅವರು ರವಿವಾರ ಭಾಲ್ಕಿಯ ಸಂಸದರ ಕಛೇರಿ ಎದುರುಗಡೆ ನಡೆದ ಭಾಲ್ಕಿ ತಾಲೂಕಿನಲ್ಲಿ ವಿವಿಧ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ತಿಳುವಳಿಕೆ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.


2013-18ರಲ್ಲಿ ತಾವು ಸಚಿವರಾಗಿದ್ದಾಗ ಭಾಲ್ಕಿ ತಾಲೂಕನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ 25,000 ಮನೆಗಳ ಹಕ್ಕು ಪತ್ರ ನೀಡಲಾಗಿತ್ತು, ಆದರೆ ಕಾರಣಾಂತರಗಳಿಂದ ಪೂರ್ಣಗೊಳ್ಳಲಿಲ್ಲ, ಅದು ಈ ಅವಧಿಯಲ್ಲಿ ಪೂರ್ಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ.

ನಮ್ಮ ಸರ್ಕಾರವು ಬಡವರ ಅಭಿವೃದ್ಧಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷೀ ಯೋಜನೆಯ ಅಡಿಯಲ್ಲಿ ಮನೆಯ ಮುಖ್ಯಸ್ಥೆಗೆ ಪ್ರತಿ ತಿಂಗಳು ಪ್ರತಿ 2000 ರೂಪಾಯಿ ನೀಡಲಾಗುತ್ತಿದೆ. ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಹಾಗೂ ಗೃಹ ಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತಿದೆ.

ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿ ಮಾಡುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಾಲ್ಕಿ ತಾಲೂಕಿಗೆ ಒಟ್ಟು 8000 ಮನೆಗಳು ಮಂಜೂರು ಆಗಿವೆ. ಅದರಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ 7000 ಮನೆ ಮತ್ತು ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 1000 ಮನೆಗಳು ಮಂಜೂರಾಗಿವೆ. ಜನರಿಗೆ ಅವಶ್ಯಕವಿರುವ ಅನ್ನ, ವಸತಿ, ಶಿಕ್ಷಣ, ಆರೋಗ್ಯ ಮುಂತಾದವುಗಳನ್ನು ನೀಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಂಸದ ಸಾಗರ ಈಶ್ವರ ಖಂಡ್ರೆ ಮಾತನಾಡಿ, ಮಳೆ, ಗಾಳಿ, ಬಿಸಿಲುಗಳಿಂದ ರಕ್ಷಿಸಲು ಒಂದು ಮನೆ ಅವಶ್ಯಕವಾಗಿದೆ.

ಕೇವಲ ಭಾಲ್ಕಿ ಮಾತ್ರವಲ್ಲದೆ ಇಡೀ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ವಸತಿ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದವರಿಗೆ 1,20,000 ರೂ. ಹಾಗೂ ಪಜಾತಿ/ಪ.ಪಂಗಡ ವರ್ಗದವರಿಗೆ 1,75,000 ರೂ. ಮನೆ ನಿರ್ಮಾಣ ಹಣವನ್ನು ನೀಡಲಾಗುತ್ತಿದೆ . ಈ ಹಣದಲ್ಲಿ ಉತ್ತಮವಾದ ಮನೆ ನಿರ್ಮಾಣ ಕಷ್ಟವಾಗುತ್ತದೆ.

ಆದ್ದರಿಂದ ಒಂದು ಮನೆ 5 ರಿಂದ 7 ಲಕ್ಷದ ವರೆಗೆ ಹಣ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನಿನ್ನೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ರೈಲ್ವೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಭಾಲ್ಕಿ ತಾಲೂಕಿನ ವಿವಿಧ ಗ್ರಾಮಗಳ ಫಲಾನುಭವಿಗಳಿಗೆ ಮನೆ ಮಂಜೂರಾತಿ ತಿಳುವಳಿಕೆ ಪಾತ್ರವನ್ನು ವಿತರಿಸಲಾಯಿತು .


ಈ ಸಂದರ್ಭದಲ್ಲಿ ಭಾಲ್ಕಿ ತಹಸಿಲ್ದಾರ್ ಸೇರಿದಂತೆ ಇತರೆ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

5 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

9 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

11 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

11 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

11 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

11 hours ago