ಭಾರತೀಯ ರೈಲ್ವೇ’ಯಲ್ಲಿ 6238 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ |

ಭಾರತೀಯ ರೈಲ್ವೇ ಇಲಾಖೆಯು 6,238 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 28 ಆಗಿದೆ .ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯಲಿದೆ ಎಂದು ಕೂಡಾ ಹೇಳಲಾಗಿದೆ. 

ಜೂನ್ 28 ರಿಂದ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದೆ.

ಹುದ್ದೆ ವಿವರ: ಒಟ್ಟು ಹುದ್ದೆಗಳು 6,238

ಟೆಕ್ನಿಕಲ್ ಗ್ರೇಡ್ 1 ಸಿಗ್ನಲ್ – 183
ಟೆಕ್ನಿಕಲ್ ಗ್ರೇಡ್ -3 – 6,055

ವಿದ್ಯಾರ್ಹತೆ:

ಟೆಕ್ನಿಕಲ್ ಗ್ರೇಡ್ 1 ಸಿಗ್ನಲ್ ಹುದ್ದೆಗೆ ಅಭ್ಯರ್ಥಿಗಳು ಡಿಪ್ಲೊಮಾ, ಬಿಎಸ್ಸಿ, ಬಿಇ ಅಥವಾ ಬಿಟೆಕ್ ಪದವಿ

ಟೆಕ್ನಿಕಲ್ ಗ್ರೇಡ್ 3- 10ನೇ ತರಗತಿ, ಐಟಿಐ ಅಥವಾ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 33 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಕೆ:

ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಪ.ಜಾ, ಪ.ಪಂಡ, ಮಹಿಳಾ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕ ಮತ್ತು ಇತರ ಅಭ್ಯರ್ಥಿಗಳಿಗೆ 500 ರೂ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ತಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ಐದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.

ವೇತನ:

ಟೆಕ್ನಿಕಲ್ ಗ್ರೇಡ್ 1 ಸಿಗ್ನಲ್ ಹುದ್ದೆಗೆ ಮಾಸಿಕ 29,200 ರೂ ಮಾಸಿಕ

ಟೆಕ್ನಿಕಲ್ ಗ್ರೇಡ್ 3 ಹುದ್ದೆಗೆ: 19,900 ರೂ ಮಾಸಿಕ

ಈ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಜೂ 28ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 28 ಆಗಿದೆ. ಅರ್ಜಿಶುಲ್ಕ ಪಾವತಿಗೆ ಕೊನೆಯ ದಿನಾಂಕ ಜುಲೈ 30 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು http://indianrailways.gov.in ಭೇಟಿ ನೀಡಿ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 28, 2025 ರವರೆಗೆ ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಒಟ್ಟು ಹುದ್ದೆಗಳ ಸಂಖ್ಯೆ 6238.

ಅರ್ಜಿ ಶುಲ್ಕ

ಎಸ್ಸಿ, ಎಸ್ಟಿ, ಮಾಜಿ ಸೈನಿಕರು, ಪಿಡಬ್ಲ್ಯೂಡಿ, ಮಹಿಳೆಯರು, ಟ್ರಾನ್ಸ್ಜೆಂಡರ್ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 250 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇತರ ವರ್ಗಗಳಿಗೆ ಅರ್ಜಿ ಶುಲ್ಕ 500 ರೂ.

ವಯಸ್ಸಿನ ಮಿತಿ

ಟೆಕ್ನಿಷಿಯನ್ ಗ್ರೇಡ್-1 ಗೆ ನಿಗದಿಪಡಿಸಲಾದ ವಯಸ್ಸಿನ ಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 33 ವರ್ಷಗಳು. ಅದೇ ಸಮಯದಲ್ಲಿ, ಟೆಕ್ನಿಷಿಯನ್ ಗ್ರೇಡ್ 3 ರ ವಯಸ್ಸಿನ ಮಿತಿಯನ್ನು ಗರಿಷ್ಠ 30 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಎಸ್ಸಿ/ಎಸ್ಟಿಗೆ 5 ವರ್ಷಗಳು, ಒಬಿಸಿಗೆ 3 ವರ್ಷಗಳು ಮತ್ತು ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಈ ರೀತಿ ನಡೆಯಲಿದೆ

CBT ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಒಟ್ಟು 100 ಅಂಕಗಳನ್ನು ಹೊಂದಿರುತ್ತದೆ. ಇದರಲ್ಲಿ 100 ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತಪ್ಪು ಉತ್ತರಕ್ಕೆ 1/3 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

prajaprabhat

Recent Posts

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

48 minutes ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

55 minutes ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

1 hour ago

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

8 hours ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

8 hours ago

ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧನಿದ್ದರೇ ಮಾತ್ರ ವ್ಯಾಪಾರದಲ್ಲಿ ಯಶಸ್ಸು – ಸಿದ್ದಣ್ಣ

ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ…

8 hours ago