ಕೊಪ್ಪಳ.13.ಆಗಸ್ಟ್ 25 : ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿನ ಎನ್.ಜಿ.ಓ ಕಾಲೋನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರೀಡಿಂಗ್ ಸೆಂಟರ್, ಮುಖ್ಯಗ್ರಂಥಾಲಯಾಧಿಕಾರಿ ಕಛೇರಿಯಲ್ಲಿ ಮಂಗಳವಾರ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.
ಭಾರತೀಯ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿದ ಮುಖ್ಯಗ್ರಂಥಾಲಯಾಧಿಕಾರಿ ಯಮನೂರಪ್ಪ ಅವರು ಮಾತನಾಡಿ, ಪದ್ಮಶ್ರೀ ಡಾ. ಎಸ್.ಆರ್.ರಂಗನಾಥನ್ ರವರ ಪೂರ್ಣ ಹೆಸರು ಶಿಯ್ಯಾಳಿ ರಾಮಾಮೃತ ರಂಗನಾಥನ್. ಇವರು 12 ಆಗಸ್ಟ್ 1892ರಲ್ಲಿ ತಮಿಳುನಾಡಿನ ತಂಜಾವೂರು ಜಿಲ್ಲೆಯ ಶಿಯ್ಯಾಳಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ರಾಮಾಮೃತ ಅಯ್ಯರ್, ತಾಯಿ ಸೀತಾಲಕ್ಷ್ಮಿ, ಮೂಲತಃ ಡಾ. ಎಸ್.ಆರ್. ರಂಗನಾಥನ್ ರವರು ತಮ್ಮನ್ನು ಗುರುತಿಸಿಕೊಂಡಿದ್ದು ಒಬ್ಬ ಗಣಿತ ಪ್ರಾಧ್ಯಾಪಕರಾಗಿ. ನಂತರದ ದಿನಗಳಲ್ಲಿ ಶೈಕ್ಷಣಿಕ ವಿದ್ಯಾಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದರು.
ಈ ಸೇವೆ ಅವರನ್ನು ಗ್ರಂಥಾಲಯಗಳ ಬಗ್ಗೆ ಚಿಂತಿಸುವoತೆ ಮಾಡಿ ಮುಂದೆ ಗ್ರಂಥಾಲಯ ವಿಜ್ಞಾನಕ್ಕೆ ಮಹತ್ತರ ಕೂಡುಗೆ ನೀಡುವಂತೆ ಮಾಡಿತು. ಅವರು ಗ್ರಂಥಾಲಯ ವಿಜ್ಞಾನಕ್ಕೆ ಹಲವಾರು ಮಹತ್ವದ ಕೂಡುಗೆಗಳನ್ನು ನೀಡಿದ್ದಾರೆ. ಅವುಗಳೆಂದರೆ. ಗ್ರಂಥಾಲಯದ ಪಂಚಸೂತ್ರಗಳು, ದ್ವಿಬಿಂದು ವರ್ಗೀಕರಣ, ಸೂಚೀಕರಣ ಪರಾಮರ್ಶನ ಸೇವೆಗಳು ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಉಮಾ ಹಳ್ಯಾಳ, ವಿಜಯಲಕ್ಷ್ಮೀ ವಡ್ಡಟ್ಟಿ, ನಾಗರಾಜನಾಯಕ ಡೊಳ್ಳಿನ ನಿರೂಪಿಸಿದರು, ಕೊಟ್ರಪ್ಪ ಬಿ. ವಂದಿಸಿದರು.
ವಿವಿಧೆಡೆ ಗ್ರಂಥಪಾಲಕರ ದಿನಾಚರಣೆ:* ಕೊಪ್ಪಳ ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿಯಲ್ಲಿ ಸೇರಿದಂತೆ ಕೊಪ್ಪಳದ ಗಣೇಶ ನಗರದಲ್ಲಿರುವ ಮುಖ್ಯ ಶಾಖೆಯಲ್ಲಿ ಮತ್ತು ಗಂಗಾವತಿ ಶಾಖಾ ಗ್ರಂಥಾಲಯದಲ್ಲಿ ಹಾಗೂ ಜಿಲ್ಲೆಯ ವಿವಿಧೆಡೆ ಗ್ರಂಥಪಾಲಕ ದಿನಾಚರಣೆಯು ನಡೆಯಿತು.
ಬೆಂಗಳೂರು.13.ಆಗಸ್ಟ್.25:-2025-26ನೇ ಸಾಲಿಗೆ ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ "ಮೀಡಿಯಾ ಕಿಟ್" ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಪತ್ರಕರ್ತರನ್ನು…
ಬೆಂಗಳೂರು.13.ಆಗಸ್ಟ್.25:- ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳು ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ…
ಚಿಕ್ಕಬಳ್ಳಾಪುರ.13.ಆಗಸ್ಟ್.25:- ಇಂದು ನಗರದಲ್ಲಿ ಮಹಾನಾಯಕ ಅಂಬೇಡ್ಕರ್ ಸೇನೆ ಅಧ್ಯಕ್ಷ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು ದಲಿತ ನಾಯಕ ಹಾಗೂ ಮಾಜಿ ಶಾಸಕ…
ಕೊಪ್ಪಳ.13.ಆಗಸ್ಟ್.25: ವಿದೇಶಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ `ಸ್ಟಡಿ ಅಬ್ರಾಡ್' ಕಾರ್ಯಕ್ರಮಕ್ಕೆ ಭಾಗವಹಿಸಲಿಚ್ಛೀಸುವ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು…
ಬೆಂಗಳೂರು.13.ಆಗಸ್ಟ್.25:- ರಾಜ್ಯಾದ್ಯಂತ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ವೇಳೆ 'DJ' ನಿಷೇಧ ಮುಂಜಾಗ್ರತಾ ಕ್ರಮವಾಗಿ…
ಕೊಪ್ಪಳ.13.ಆಗಸ್ಟ್.25: ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾಧನೆ ಜರುಗಿತು. ಆರಾಧನೆಯ ಕೊನೆಯ ದಿನವಾಗಿದ್ದರಿಂದ ಮಧ್ಯಾಹ್ನ ನಡೆದ…