ಬೀದರ.07.ಏಪ್ರಿಲ್.25:- ಮಕ್ಕಳ ಉತ್ತಮ ಗುಣಮಟ್ಟದ ಚಿಕಿತ್ಸೆಗೆ ಬ್ರಿಮ್ಸ್ ಆಸ್ಪತ್ರೆಗೆ ಕೇಂದ್ರ ಸರ್ಕಾರವು ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ನೀಡಿದೆ ಎಂದು ಬೀದರ ಬ್ರೀಮ್ಸ್ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಯೋಗಿ ಬಾಳಿ ಅವರು ತಿಳಿಸಿದ್ದಾರೆ.
ಮುಸ್ಕಾನ್ (MusQan) ಮಹತ್ವಕಾಂಕ್ಷಿಯ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಇದರಡಿಯಲ್ಲಿ ನವಜಾತ ಶಿಶುವಿನಿಂದ ಹಿಡಿದು 12 ವರ್ಷದ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಗುರಿ ಹೊಂದಿರುತ್ತದೆ.
ಈ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದ 04 ವಿಭಾಗಗಳಾದ ಹೊರರೋಗಿ ವಿಭಾಗ/ಒಳ ರೋಗಿ ವಿಭಾಗ, ನವಜಾತ ಶಿಶು ತೀವ್ರ ನಿಗಾ ಘಟಕ ಮತ್ತು ಅಪೌಷ್ಟಿಕ ಮಕ್ಕಳ ಪುರ್ನವಸತಿ ವಿಭಾಗಗಳನ್ನು ರಾಷ್ಟ್ರೀಯ ಮಾನದಂಡಗಳನ್ವಯ, ಬೇರೆ ರಾಜ್ಯದಿಂದ, ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವತಿಯಿಂದ ನಿಯೋಜನೆಗೊಳಿಸಲಾದ ಮೌಲ್ಯಮಾಪಕರು ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ 02 ದಿನಗಳ ಕಾಲ ಮೌಲ್ಯಮಾಪನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿರುತ್ತಾರೆ.
ಕೇಂದ್ರ ಸರ್ಕಾರವು ವರದಿಯನ್ನು ಕೂಲಂಕೂಷವಾಗಿ ಪರೀಶಿಲಿಸಿ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ನೀಡಿರುತ್ತದೆ.ಈ ಪ್ರಮಾಣ ಪತ್ರ ಪಡೆಯಲು 70 ಪ್ರತಿಶತ ಅಂಕಗಳು ಬೇಕಾಗಿರುತ್ತದೆ. ಬೀದರ ಜಿಲ್ಲಾ ಆಸ್ಪತ್ರೆಯು ಶೇ.88.68% ರಷ್ಟು ಅಂಕಗಳು ಗಳಿಸಿರುತ್ತವೆ ತಿಳಿಸಿದ್ದಾರೆ.
ಬ್ರಿಮ್ಸ್ ಸಂಸ್ಥೆಯು ಈ ಅಡಿಯಲ್ಲಿ ಬೀದರ ಜನತೆಗೆ ಚಿಕ್ಕಮಕ್ಕಳ ಅಂದರೆ, ಹುಟ್ಟಿದ ನವಜಾತ ಶಿಶುವಿನಿಂದ 12 ವರ್ಷದ ಮಕ್ಕಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನಮ್ಮ ಸಂಸ್ಥೆಯಲ್ಲಿ ಕೊಡಲಾಗುತ್ತದೆ. ಹೊರರೋಗಿ ಮತ್ತು ಒಳರೋಗಿ ವಿಭಾಗದ ಮಕ್ಕಳಿಗೆ ಉಚಿತ ಲಸಿಕೆ, ಮತ್ತು ಅಪೌಷಿಕ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದರ ಸದುಪಯೋಗ ಜಿಲ್ಲೆಯ ಜನತೆ ತೆಗೆದುಕೊಳ್ಳಬೇಕೆಂದರು.
ಮುಸ್ಕಾನ್ (MusQan) ಕಾರ್ಯಕ್ರಮವು ಒಂದು ಮಹತ್ವಕಾಂಕ್ಷಿಯ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಈ ಪ್ರಮಾಣಪತ್ರ ಪಡೆಯುವುದಕ್ಕೆ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಶಾಂತಲಾ ಕೌಜಲಗಿ ಅವರ ಪ್ರಯತ್ನ ಸಹಕಾರಿಯಾಗಿರುತ್ತದೆ.
ಈ ಬ್ರಿಮ್ಸ್ ಬೋಧಕ ಆಸ್ಪತ್ರೆಗೆ ಮುಸ್ಕಾನ್ ರಾಷ್ಟ್ರೀಯ ಪ್ರಮಾಣ ಪತ್ರ ಪಡೆದಿದ್ದಕ್ಕಾಗಿ ಸಂಸ್ಥೆಯ ನಿರ್ದೇಶಕಾರದ ಡಾ. ಶಿವಕುಮಾರ ಶೆಟಕಾರ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಹಮ್ಮದ್ ಅಹಮ್ಮದುದ್ದೀನ್ ಹರ್ಷ ವ್ಯಕ್ತಪಡಿಸಿದ್ದಾರೆಂದು ಅವರು ತಿಳಿಸಿದ್ದಾರೆ.
ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…
ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ…
ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…
ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…
ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…
ಬಂಧುಗಳೇ, ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…