ಬೀದರ.13.ಫೆಬ್ರುವರಿ.25: -ಇಂದು ಬೆಂಗಳೂರಿನ ಶೆರ್ಟನ್ ಹೋಟೆಲ್‍ನ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಎಸ್.ಬಿರಾದಾರ ಅವರು ಅಮೇರಿಕಾದ ಬ್ರಿಡ್ಜ್‍ವಾಟರ್ ಸ್ಟೇಟ್ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ.ಫ್ರೆಡ್ರಿಕ್ ಕ್ಲಾರ್ಕ್ ಅವರೊಂದಿಗೆ ಹಲವಾರು ಶೈಕ್ಷಣಿಕ ಸಹಕಾರಿ ಕ್ಷೇತ್ರದ ಒಪ್ಪಂದಗಳಿಗೆ ಪರಸ್ಪರ ಸಹಿ ಹಾಕಿದರು.
ಬೀದರ ವಿಶ್ವವಿದ್ಯಾಲಯ ಹಾಗೂ ಅಮೇರಿಕಾದ ಬ್ರ್ರಿಡ್ಜ್‍ವಾಟರ್ ವಿಶ್ವವಿದ್ಯಾಲಯಗಳ ಈ ಐತಿಹಾಸಿಕ ಒಪ್ಪಂದದಿಂದಾಗಿ ಉಭಯ ವಿಶ್ವವಿದ್ಯಾಲಯಗಳ ಶಿಕ್ಷಣ, ಸಂಶೋಧನೆ, ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿನೂತನ ಯುಗ ಆರಂಭವಾಗುತ್ತದೆ ಎನ್ನಲಾಗಿದೆ. ಪರಸ್ಪರ ತಂತ್ರಜ್ಞಾನದ ವಿಚಾರ ವಿನಿಮಯ, ಜಂಟಿಯಾಗಿ ಪದವಿ ಕಾರ್ಯಕ್ರಮಗಳ ವಿನಿಮಯಗಳಿಗೆ ಅನುಕೂಲವಾಗುತ್ತದೆ.
ಎರಡೂ ವಿಶ್ವವಿದ್ಯಾಲಯಗಳ ಅಧ್ಯಾಪಕರ ವಿನಿಮಯದಿಂದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹೊಸ ಆಯಾಮ ದೊರೆಯಲಿದೆ.
ವಿದ್ಯಾರ್ಥಿಗಳಿಗೆ ಆಧುನಿಕ ಶೈಲಿಯ ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ದಾಪುಗಾಲಿಡಲು ಪೂರಕವಾಗುತ್ತದೆ. ಈ ಐತಿಹಾಸಿಕ ಒಪ್ಪಂದದಿಂದಾಗಿ ಶೈಕ್ಷಣಿಕ, ಸಾಂಸ್ಕøತಿಕ, ಸಂಶೋಧನೆ, ಅಭಿವೃದ್ಧಿ ಕ್ಷೇತ್ರಗಳಲ್ಲಿ ಮಹತ್ವದ ಮೈಲುಗಲ್ಲಾಗಲಿದೆ ಎಂದು ಉಭಯ ಮುಖ್ಯಸ್ಥರು ಒಡಂಬಡಿಕೆಯ ಮಹತ್ವ ಕುರಿತು ಚರ್ಚಿಸಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಈ ಎರಡೂ ವಿಶ್ವವಿದ್ಯಾಲಯಗಳ ಒಪ್ಪಂದ ಇಂದಿನ ಆಧುನಿಕ, ತಂತ್ರಜ್ಞಾನದ, ವೇಗದ ಯುಗದಲ್ಲಿ ತುಂಬಾ ಅವಶ್ಯಕ ಹಾಗೂ ಮಹತ್ವದ್ದಾಗಿದೆ ಎಂದರು.
ನೂತನ ಬೀದರ ವಿಶ್ವವಿದ್ಯಾಲಯವು ಈಗಾಗಲೇ ಅನೇಕ ಶೈಕ್ಷಣಿಕ ಹಾಗೂ ಕೌಶಲ್ಯ ಕೇಂದ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಅವುಗಳಲ್ಲಿ ಕೇಂದ್ರ ಸರ್ಕಾರದ ತಂತ್ರಜ್ಞಾನ ಕೌಶಲ್ಯದ ಸೀಪೆಟ್ ಹಾಗೂ ತಂಜಾವೂರಿನ ನಿಫ್ಟೆಮ್ ಉದ್ಯಮಶೀಲತಾ ಕೇಂದ್ರಗಳೊಂದಿಗಿನ ಮಹತ್ವದ ಒಪ್ಪಂದಗಳಾಗಿವೆ. ಪ್ರಸ್ತುತ ಅಮೇರಿಕಾದ ಬ್ರಿಡ್ಜ್‍ವಾಟರ್ ವಿಶ್ವವಿದ್ಯಾಲಯದೊಂದಿಗೆ ಬೀದರ ವಿಶ್ವವಿದ್ಯಾಲಯದ ಶೈಕ್ಷಣಿಕ ಕ್ಷೇತ್ರದ ಒಪ್ಪಂದ ತುಂಬಾ ಅವಿಸ್ಮರಣೀಯವಾಗಿದೆ.
ಈ ಒಪ್ಪಂದದ ಸಂದರ್ಭದಲ್ಲಿ ಬಿಎಸ್‍ಯುನ ಉಪಾಧ್ಯಕ್ಷರಾದ ಡಾ.ಉಮಾ ಶರ್ಮಾ, ಡಾ.ಜಬ್ಬಾರ ಹಾಗೂ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಒಪ್ಪಂದ ಕಾರ್ಯಕ್ರಮವನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ.ಕೆ.ರವಿ ಅವರು ಯಶಸ್ವಿಯಾಗಿ ಸಂಯೋಜಿಸಿ ನಡೆಸಿಕೊಟ್ಟರು.
ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…
ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…
ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…
ಬೀದರ.09.ಆಗಸ್ಟ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡಾ ರಸ್ತೆ, ಬೀದರಿನಲ್ಲಿ ಆಗಸ್ಟ್.12 ರಿಂದ…
ಬೀದರ.09.ಆಗಸ್ಟ್.25:- ಗೌರವಾನ್ವಿತ ಕರ್ನಾಟ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಅವರ ನಿರ್ದೇಶನದಂತೆ ದಿನಾಂಕ: 13-09-2025 ರಂದು ರಾಷ್ಟ್ರೀಯ ಲೋಕ…
ಬೀದರ.09.ಆಗಸ್ಟ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಬೀದರ ಇವರುಗಳ…