ಬೋರಳ ಗ್ರಾಮದಲ್ಲಿ ಜೇತವನ ಬುದ್ಧವಿಹಾರ ನಾಮಫಲಕ ಉದ್ಘಾಟನೆ:

ಬೋರಳ ಗ್ರಾಮದಲ್ಲಿ ಜೇತವನ ಬುದ್ಧವಿಹಾರ ನಾಮಫಲಕ ಉದ್ಘಾಟನೆ:

ಔರಾದ: ತಾಲೂಕಿನ ಬೋರಳ ಗ್ರಾಮದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿವಾ೯ಣ ದಿನದ ನಿಮಿತ್ತ ಗ್ರಾಮದ ಗೌತಮ ನಗರದ ಪರಿಸರದಲ್ಲಿರುವ ಜೇತವನ ಬುದ್ಧ ವಿಹಾರಕ್ಕಾಗಿ ಮಿಸಲಿಟ್ಟ ಸ್ಥಳದಲ್ಲಿ ಜೇತವನ ಬುದ್ಧ ವಿಹಾರ ನಾಮಫಲಕವನ್ನು ತಾಲೂಕಿನ ಶಾಸಕರಾದ ಪ್ರಭು ಬಿ ಚವ್ಹಾಣ ಅವರು ಉದ್ಘಾಟಿಸಿದರು. ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬುದ್ಧ ಭಾರತದ ಆದಿಗುರು, ಮಹಾ ತಂದೆ. ಭಾರತದ ಚರಿತ್ರೆಯಲ್ಲಿ ಮಿನುಗುವ ಮಹಾತಾರೆಯಾಗಿದ್ದಾರೆ.

ಆ ಮಹಾತ್ಮನ ವಿಹಾರ ನಿಮಾ೯ಣವಾಗುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈ ಸ್ಥಳ ಪ್ರಸಿದ್ಧ ಬುದ್ಧವಿಹಾರವಾಗಿ ಬದಲಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕಿನ ತಹಸೀಲ್ದಾರ್ ಮಲಶೆಟ್ಟೀ ಚಿದ್ರೆ ಅವರು ಮಾತನಾಡಿ. ಬಾಬಾಸಾಹೇಬರು ಶಿಕ್ಷಣ ಎಂಬ ಬಹುದೊಡ್ಡ ಅಸ್ತ್ರವನ್ನು ನಮಗೆ ನಿಡಿದ್ದಾರೆ ಇದನ್ನು ಬಳಸಿ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು. ಅವರ ಮಹಾಪರಿನಿವಾ೯ಣ ದಿನದಂದು ಅವರ ಫೋಟೋಗೆ ಪೂಜೆ ಮಾಡಿ ಮನೆಗೆ ಹೊಗೊ ಪರಿಪಾಠ ಹೊಗಬೇಕು. ಈ ದಿನದಂದು ಬಾಬಾಸಾಹೇಬರ ವಿಚಾರಗಳು ಹಾಗೂ ಅವರ ಕನಸು ನನಸು ಮಾಡಲು ಪಣ ತೊಡಬೆಕು ಎಂದು ಹೇಳಿದರು.

ಭಾರತಿಯ ಬೌದ್ಧ ಮಹಾಸಭಾದ ತಾಲೂಕಾ ಅಧ್ಯಕ್ಷರಾದ ಸೋಪಾನ ಡೊಂಗ್ರೆ ಮಾತನಾಡಿ ಬಾಬಾಸಾಹೇಬರು ಭಾರತದ ಭಾಗ್ಯವಿಧಾತಾ ಆಗಿದ್ದಾರೆ ಈ ಮಾತು ಎಲ್ಲರು ತಿಳಿಕೊಳ್ಳಬೇಕಾದ ಅವಶ್ಯಕತೆ ಇದೆ. ಎಲ್ಲಾ ಜಾತಿ, ಎಲ್ಲಾ ಸಮುದಾಯ, ಎಲ್ಲಾ ಧಮ೯ದ ಜನರು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಫಲಾನುಭವಿಗಳಾಗಿದ್ದಾರೆ ಹಾಗಾಗಿ ಬಾಬಾಸಾಹೇಬರನ್ನು ಒಂದು ಜಾತಿಗೆ ಸಿಮಿತ ಮಾಡುವುದು ತಪ್ಪು ಎಂದು ಹೇಳಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ, ಎಜುಕೇಶನ್ ಆಂಡ್ ರಿಸಚ೯ ಸೆಂಟರ್ ಬೋರಳನ ಅಧ್ಯಕ್ಷರಾದ ಶಿವಾಜಿರಾವ್ ಬೋರಳೆ ಅವರು ವಹಿಸಿದರು. ಶಿವಾಜಿರಾವ ಪಾಟಿಲ್ ಮುಂಗನಾಳ, ಶಾಲಿವಾನ ಪನ್ನಾಳೆ, ಧೋಂಡಿಬಾ ನರೋಟೆ, ಪ್ರಕಾಶ ಕೋಟೆ, ನಿವತಿ೯ರಾವ ಪಾಟಿಲ್, ಮೋಹನ ಕಾಂಬ್ಳೆ ಗ್ರಾಮ ಪಂಚಾಯತ್ ಸದಸ್ಯರಾದ ಸಮೃತ್ ಪಾಟಿಲ್,ಬಜರಂಗ್ ಪಾಂಡ್ರೆ,ಮಹಾದೇವ ಮಚಕುರಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರು ರಾಜೆಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ನಂದಾದೀಪ ಬೋರಳೆ ನಿರೂಪಿಸಿದರು.

prajaprabhat

View Comments

Recent Posts

ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.

Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…

10 hours ago

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

19 hours ago

ಮಕ್ಕಳ ಮಾಹಿತಿ ಗೌಪ್ಯವಾಗಿಡಲು ಸೂಚನೆ

ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…

24 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

24 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

1 day ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

1 day ago