ಬೇಸಿಗೆ ಶಿಬಿರ ಆಯೋಜನೆ: ಹೆಸರು ನೋಂದಾಯಿಸಿಲು ಮನವಿ

ಬೀದರ.15.ಮೇ.25:- ವಿದ್ಯಾರ್ಥಿಗಳಿಗೆ ಸೃಜನಾತ್ಮಕತೆ ಹಾಗೂ ವೈಜ್ಞಾನಿಕ ಚಿಂತನಾಭಿವೃದ್ಧಿಗೆ ಸಹಾಯವಾಗುವ ಉದ್ದೇಶದಿಂದ 7ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ತಿಗಳಿಗೆ ದಿನಾಂಕ: 15-05-2025 ರಿಂದ 24-05-2025 ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲ್ಲೂಕಾ ಹಂತದಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ, ಚಿತ್ರಕಲೆ, ರಾಕೆಟ್ ತಯ್ಯಾರಿಕೆ ಹಾಗೂ ಖಗೋಳಶಾಸ್ತçದ ಮೇಲೆ ಹ್ಯಾಂಡ್ಸ್ ಆನ್ ತರಬೇತಿಯನ್ನು ಪರಣಿತ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗುತ್ತಿದೆ.


ಶಿಬಿರಗಳ ನಡೆಯುವ ಸ್ಥಳಗಳ ಹಾಗೂ ನೋಡಲ್ ಅಧಿಕಾರ ಮೊಬೈಲ್ ವಿವರ: ಔರಾದ (ಬಿ) ಆದರ್ಶ ವಿದ್ಯಾಲಯದಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಜಿ.ಆರ್.ಸಿ.ಔರಾದ.ಬಿ (ಮೊ.7483503360), ಬಸವಕಲ್ಯಾಣ ಸರ್ಕಾರಿ (ಬಾಲಕರ) ಪ್ರೌಢ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಜಿ.ಆರ್.ಸಿ. ಬಸವಕಲ್ಯಾಣ (ಮೊ.9071317625), ಭಾಲ್ಕಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಜಿ.ಆರ್.ಸಿ. ಭಾಲ್ಕಿ (ಮೊ.8971687267), ಬೀದರ ಕೋರ ಸೈನ್ಸ್ ಆಕ್ಟಿವಿಟಿ ಸೆಂಟರ್ ಹಮೀಲಾಪುರ ರಸ್ತೆ ಬೀದರ (ಅಗಸ್ತç ಪೌಂಡೇಶನ)ದಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಬಿ.ಆರ್.ಸಿ. (ಮೊ. 7259254577) ಹಾಗೂ ಹುಮನಾಬಾದ ತಾಲ್ಲೂಕಿನ ಸರ್ಕಾರಿ (ಬಾಲಕರ) ಪ್ರೌಢ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ನೋಡಲ್ ಅಧಿಕಾರಿ ಬಿ.ಆರ್.ಸಿ. ಹುಮನಾಬಾದ (ಮೊ.9986891973) ಅವರುಗಳು ನೀಡಲಿದ್ದಾರೆ.


ಪ್ರಯುಕ್ತ ಜಿಲ್ಲೆಯ ಆಯಾ ತಾಲ್ಲೂಕಿನ ಕೇಂದ್ರಗಳಲ್ಲಿ ರಚಿಸಲಾದ ಬೇಸಿಗೆ ಶಿಬಿರಗಳಿಗೆ 7ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ನೋಂದಾಯಿಸಿಕೊAಡು ಸದರಿ ಶಿಬಿರ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

prajaprabhat

Recent Posts

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

2 hours ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

5 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

5 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

5 hours ago

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

12 hours ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

12 hours ago