ಬೀದರ.30.ಜುಲೈ.25:- 2025-26ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹೂಕೋಸು, ಹಸಿ ಮೆಣಸಿನಕಾಯಿ (ನೀ), ಶುಂಠಿ ಹಾಗೂ ಮಾವು ಬೆಳೆಗಳಿಗೆ ವಿಮೆ ನೊಂದಣಿ ಮಾಡಲು ದಿನಾಂಕ: 11-08-2025 ಕೊನೆಯ ದಿನಾಂಕವಾಗಿದೆ ಎಂದು ಬೀದರ (ಜಿಲ್ಲಾ ಪಂಚಾಯತ) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆ ಸಾಲ ಪಡೆಯದ ಮತ್ತು ಬೆಳೆ ಸಾಲ ಪಡೆದ ರೈತರು ವಿಮೆ ನೊಂದಾಯಿಸಿಕೊಳ್ಳಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂಘೋಷಿತ ದೃಡೀಕರಣ ಪತ್ರ ಒಳಗೊಂಡಂತೆ ತಮ್ಮ ಸಮೀಪದ ಬ್ಯಾಂಕ್ ಶಾಖೆಗೆ ಸಂಪರ್ಕಿಸುವುದು. ಹವಾಮಾನ ಅಂಶಗಳಾದ ಮೆಳೆ ಪ್ರಮಾಣ, ಗಾಳಿಯ ವೇಗ, ಆಧ್ರ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿ ಮೆಟ್ರಿಕ್ ಮೆಳೆಮಾಪನ ಕೇಂದ್ರಗಳಲ್ಲಿ ದಾಖಲಿಸು ಅಂಶಗಳ ಆಧಾರದ ಮೇಲೆ ವಿಮೆ ನಷ್ಟವನ್ನು ತಿರ್ಮಾನಿಸಲಾಗುತ್ತದೆ.
ಬೀದರ ಜಿಲ್ಲೆಗೆ ಎಐಸಿ ವಿಮಾ ಕಂಪನಿ ಆಯ್ಕೆಯಾಗಿದ್ದು, ಬೆಳೆಗಳ ಹೆಸರು ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ: ಹೂಕೋಸು ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 62,000 ರೂ. ಪಾವತಿಸಬೇಕಾದ ವಿಮಾ ಕಂತಿನ ದರ 3,100 ರೂ.., ಹಸಿ ಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 71,000 ರೂ., ಪಾವತಿಸಬೇಕಾದ ವಿಮಾ ಕಂತಿನ ದರ 3,550 ರೂ., ಶುಂಠಿ ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 1,30,000 ರೂ. ಪಾವತಿಸಬೇಕಾದ ವಿಮಾ ಕಂತಿನ ದರ 6,500 ರೂ.., ಹಾಗು ಮಾವು ಬೆಳೆಗೆ ಪ್ರತಿ ಹೆಕ್ಟೇರಿಗೆ ವಿಮಾ ಮೊತ್ತ 80,000 ರೂ. ಪಾವತಿಸಬೇಕಾದ ವಿಮಾ ಕಂತಿನ ದರ 4,000 ರೂ..
ಪ್ರಸ್ತುತ ಸಾಲಿನಲ್ಲಿ ಯೋಜನೆವಾರು ಮತ್ತು ಬೆಳೆವಾರು ವಿವರಗಳನ್ನು ಆನ್‍ಲೈನ್ ಪೋರ್ಟಲ್ (www.samrakshane.karnataka.gov.in) ಮೂಲಕ ನೊಂದಾಯಿಸಲು ಎಲ್ಲಾ ಬ್ಯಾಂಕ್‍ನ ಶಾಖೆಗಳಲ್ಲಿ ಸದರಿ ಸೌಲಭ್ಯಗಳ ಒದಗಿಸಲಾಗಿದ್ದು ತಮ್ಮ ಹತ್ತಿರ ಬ್ಯಾಂಕ ಶಾಖೆಗಳಲ್ಲಿ ವಿಮೆ ಮಾಡಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಹಾಗೂ ತಮ್ಮ ಗ್ರಾಮ ಪಂಚಾಯತಗೆ ಅನುಮೋದನೆಯಾದ ಬೆಳೆಗಳ ಬಗ್ಗೆ ತಿಳಿಯಲು ತಮಗೆ ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಕಛೇರಿಗಳಿಗೆ / ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂರ್ಪಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ದೆಹಲಿ.01.ಆಗಸ್ಟ್.25:- ಮುಜಫರ್‌ಪುರದಿಂದ ಅಹಮದಾಬಾದ್‌ನ ಸಬರಮತಿ ಬಿಜಿ ನಿಲ್ದಾಣಕ್ಕೆ ಚಲಿಸುತ್ತಿದ್ದ ಜನಸಾಧಾರಣ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಇಂದು ಕಾನ್ಪುರದ ಭೌರ್‌ಪುರದ…
ಹೊಸ ದೆಹಲಿ.01.ಆಗಸ್ಟ್.25:- ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಇಂದು ಮಾತನಾಡಿ, ಹಬ್ಬದ ದಟ್ಟಣೆಯ ಸಮಯದಲ್ಲಿ "ಸ್ಥಳದಲ್ಲೇ ಜನದಟ್ಟಣೆ ಕಡಿಮೆ…
ಬೀದರ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ, ಶಿಥಿಲ ಶಾಲಾ ಕಟ್ಟಡ ದುರಸ್ತಿ,ಬೀದರ.01.ಆಗಸ್ಟ.25:- ಬೀದರ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ, ಶಿಥಿಲ ಶಾಲಾ ಕಟ್ಟಡ…
ಬೀದರ.01.ಆಗಸ್ಟ್.25:- ಯುವಕರು ಮಧ್ಯಪಾನ, ತಂಬಾಕು, ಗುಟುಕಾ ಹಾಗೂ ಇನ್ನಿತರ ದುಶ್ಚಟಗಳಿಗೆ ಮಾರುಹೋಗದೇ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಬೀದರ ತೋಟಗಾರಿಕಾ ಮಹಾವಿದ್ಯಾಲಯದ…
ಬೀದರ.01.ಆಗಸ್ಟ್.25- ಬಸವಕಲ್ಯಾಣದ ನಾರಾಯಣಪೂರದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 11ನೇ ತರಗತಿಯ ಖಾಲಿಯಿರುವ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವಿದ್ಯಾರ್ಥಿಗಳು ರಾಜ್ಯ…
ಬೀದರ.01.ಆಗಸ್ಟ್25:- ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ…