ರಾಯಚೂರು.05.ಜುಲೈ.25: ರಾಯಚೂರು ಜಿಲ್ಲೆ ಕಾರಟಗಿ. ತಾಲ್ಲೂಕಿನ ಬೆನ್ನೂರು ಗ್ರಾಮದ 31ನೇ ವಿತರಣಾ ಕಾಲುವೆ ದಾರಿಯ ತೆರವು ಕಾರ್ಯ ನಡೆಯುತ್ತಿದ್ದು, ಇದರಿಂದ ಕಾಲುವೆ ಮುಚ್ಚುವ ಹುನ್ನಾರ ನಡೆದಿದೆ ಎಂದು ಬೆನ್ನೂರು ಗ್ರಾಮ ಮತ್ತು ಬೆನ್ನೂರು ತಾಂಡಾದ ನಿವಾಸಿಗಳು ಆರೋಪಿಸಿದ್ದಾರೆ.
ಬೆನ್ನೂರು ಗ್ರಾಮದ 31ನೇ ವಿತರಣಾ ಕಾಲುವೆಯ ದಾರಿಯನ್ನು ಕಿತ್ತು ಹಾಕುತ್ತಿರುವುದರಿಂದ ಗ್ರಾಮಸ್ತರ ಹೊಲಗಳಿಗೆ ಹಾಗೂ ತಾಂಡಾದ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತುಂಬಾ ತೊಂದರೆ ಆಗುತ್ತಿದೆ.
ತಾಂಡದ ಜನರಿಗೆ ಇರುವುದು ಇದು ಒಂದೇ ದಾರಿ. ಅದರಲ್ಲೂ ಅದು ಹದಿಗೆಟ್ಟಿದೆ. ಆದರೆ, ಈ ದಾರಿಯನ್ನು ಬೆನ್ನೂರ ನಿವಾಸಿ ಕುರಿ ಆಂಬಣ್ಣ ತಂದೆ ಯಂಕಪ್ಪ ಕುರಿ ಸಾ. ಬೆನ್ನೂರು ಎಂಬುವವರು ತಮ್ಮ ಹೊಲದ ಬದುವಿಗಾಗಿ ರಸ್ತೆಯ ಮಣ್ಣನ್ನು ತಿವಿದು ತಮ್ಮ ಹೊಲಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಅದಲ್ಲದೆ ತಮ್ಮ ಹೊಲವನ್ನು ಅಗಲ ಮಾಡಿಕೊಳ್ಳುತ್ತಿದ್ದಾರೆ. ಹಾಗೆ ದಾರಿಯನ್ನು ಅತಿಕ್ರಮಿಸಿ, ರಸ್ತೆ ಗಾತ್ರವನ್ನು ಚಿಕ್ಕದಾಗಿಸುತ್ತಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಮತ್ತು ಆದಷ್ಟು ಬೇಗ ಈ ರಸ್ತೆಯನ್ನು ಅಭಿವೃದ್ಧಿ ಮಾಡಿಸಿಕೊಡಬೇಕೆಂದು ಬೆನ್ನೂರು ತಾಂಡಾದ ನಿವಾಸಿಗಳು ಆಗ್ರಹಿಸಿದ್ದಾರೆ.
ವರದಿ: ಪ್ರಕಾಶ್ ಚವ್ಹಾಣ.6360535469
ಮೈಸೂರು.05.ಜುಲೈ.25:- ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷಕ್ಕೆ ಅತಿಥಿ ಅಧ್ಯಾಪಕರ ಹುದ್ದೆಗೆ, ಯುಜಿಸಿ ಮಾನದಂಡಗಳ ಪ್ರಕಾರ ಅರ್ಹ ಅರ್ಹತೆಗಳನ್ನು ಹೊಂದಿರುವ…
ಬೆಂಗಳೂರು.05.ಜುಲೈ.25:- ಕರ್ನಾಟಕ ರಾಜ್ಯ ರೇಷ್ಮೆ ಇಲಾಖೆಯು 2025ನೇ ಸಾಲಿನಲ್ಲಿ 2,492ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ…
ಬಾಗಲಕೋಟೆ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ಸೆಳೆಯಲು ಭಾರಿ ಪ್ರಯಾಸ ಪಡಬೇಕು. ಆದರೆ, ಬಾಗಲಕೋಟೆಯ ನವನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ…
ಬೆಂಗಳೂರು.05.ಜುಲೈ.25:- ರಾಜ್ಯಾಧ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ-3 ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ನಿಗಮದ KSRTC ಬಸ್ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಅವಕಾಶ…
ಬೆಂಗಳೂರು.05.ಜುಲೈ .25:- ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಸಂಚರಿಸುವಂತ ಪ್ರಯಾಣಿಕರಿಗೆ ಕೆಲವೊಂದು ಬಸ್ಸುಗಳಲ್ಲಿ ಟಿಕೆಟ್ ದರದಲ್ಲಿ ರೌಂಡಪ್ ಎನ್ನುವ ಹೆಚ್ಚುವರಿ…
ಬೆಂಗಳೂರು.04.ಜುಲೈ.25: 26 ನವೆಂಬರ್ 2024 ರಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡುವುದನ್ನು ಮರೆತಿದ್ದ ಅಧಿಕಾರಿಯನ್ನು…