ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ ಜಾಗ ಮೂಲ ಖಾತೆದಾರಾದ ದಿ.ರಂಗಮ್ಮನವರ ಹೆಸರಿಗೆ ಬರುವ ಮೂಲಕ ರಾಜ್ಯ ಒಕ್ಕಲಿಗ ಸಂಘಕ್ಕೆ ದೊಡ್ಡ ಜಯ ಸಿಕ್ಕಂತಾಗಿದ್ದು ಈ ಜಾಗದಲ್ಲಿ ಕೆಂಪೇಗೌಡ ಒಕ್ಕಲಿಗರ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಕೆಂಪೇಗೌಡ ಆಸ್ಪತ್ರೆ ಅದ್ಯಕ್ಷರಾದ ಎಚ್.ಎನ್.ಅಶೋಕ್ ಹೇಳಿದರು.
ಶನಿವಾರ ಪಟ್ಟಣದ ಹೊಸಪೇಟೆಯ ಬಮೂಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ದಿ.ರಂಗಮ್ಮನವರು ಪತಿ ಕೃಷ್ಣಪ್ಪ ರವರಿಗೆ ಸೇರಿದ 96 ಎಕರೆ 35 ಗುಂಟೆ ಜಮೀನನ್ನು ರಂಗಮ್ಮನವರ ಸಹೋದರ ಅಳಿಯನಿಗೆ ನೀಡಿ ವಿಲ್ ಮುಖಾಂತರ ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಗೆ ನೀಡಿದ್ದು ಇದರಲ್ಲಿ 44 ಎಕರೆ ಜಮೀನನ್ನು ಭೂಗಳ್ಳರು ಟ್ರಸ್ಟ್ ನ ಆಸ್ತಿಯೇ ಅಲ್ಲವೆಂದು ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದರು ಕಂದಾಯ ಇಲಾಖೆಯ ದಕ್ಷ ಅಧಿಕಾರಿಯಿಂದ 44 ಎಕರೆ ರಂಗಮ್ಮರವರ ಹೆಸರಿಗೆ ಮೂಲ ಖಾತೆ ಬರುವಂತೆ ಮಾಡಿದ್ದು ನನ್ನು ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಆಯ್ಕೆ ಮಾಡಿದ ಕುಲ ಬಾಂಧವರಿಗೆ ನ್ಯಾಯಾಲಯದ ಮುಖೇನ ಹಲವು ವರ್ಷಗಳ ಸಮಸ್ಯೆಯಾಗಿದ್ದ ಸಜ್ಜೇಪಾಳ್ಯ ಜಮೀನನ್ನು ಮೂಲ ಖಾತೆದಾರರ ಹೆಸರಿಗೆ ಕೊಡಿಸುವ ಮೂಲಕ ಬಹು ದೊಡ್ಡ ಗೆಲುವನ್ನು ಸಾಧಿಸಿದಂತಹ ಖುಷಿ ನನಗಿದೆ. ಈಗಿನ ಮಾರುಕಟ್ಟೆ ಬೆಲೆ ₹ 2 ಸಾವಿರ ಕೋಟಿಗೂ ಹೆಚ್ಚಿನ ಬೆಲೆಯಾಗಲಿದ್ದು ರಂಗಮ್ಮನವರ ಅಸೆಯಂತೆ ಬಡ ವಿದ್ಯಾರ್ಥಿಗಳಿಗೆ ವಿದ್ಯೆ ಕೊಡುವ ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಹೋರಾಟದಿಂದ ಒಕ್ಕಲಿಗರ ಸಂಘಕ್ಕೆ ಜಯ ಸಿಕ್ಕಂತಾಗಿದ್ದು ಇದಕ್ಕೆ ಕಾರಣೀಭೂತರಾದ ಒಕ್ಕಲಿಗರ ಸಂಘದ ಅಧ್ಯಕ್ಷರು ಉಪಾದ್ಯಕ್ಷರು 35 ಮಂದಿ ನಿರ್ದೇಶಕರು ಅರಕಲಗೂಡು ಶಾಸಕ ಎ.ಮಂಜುನಾಥ್,ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ,ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಕಂದಾಯ ಇಲಾಖೆಯ ಪ್ರಾದೇಶಿಕ ದಕ್ಷ ಅಧಿಕಾರಿಯಾದ ಆಮ್ಲನ್ ಆದಿತ್ಯ ಬಿಸ್ವಾಸ್ ಅವರ ನ್ಯಾಯಯುತ ತನಿಖೆಯಿಂದ ಮೂಲ ಮಾಲೀಕರಾದ ದಿ.ರಂಗಮ್ಮನವರ ಹೆಸರಿನಲ್ಲಿ ಪಹಣಿ ಬರುವಂತೆ ಮಾಡಿದ್ದು ಈ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಕೆಂಪೇಗೌಡ ಒಕ್ಕಲಿಗರ ವಿಶ್ವ ವಿದ್ಯಾಲಯ ಸ್ಥಾಪಿಸಿ ಒಕ್ಕಲಿಗ ಸಂಘಕ್ಕೆ ಹೆಸರು ಬರುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತೇವೆ ಎಂದು ಅಶೋಕ್ ಭರವಸೆ ನೀಡಿದರು.
ನಿರಂತರ ಹೋರಾಟದ ಫಲ ಜಯ ಸಿಕ್ಕಿದೆ : ಮಾಲಿಕತ್ವದ ಬಗ್ಗೆ ನಿರಂತರದ ಹೋರಾಟದ ಫಲವಾಗಿ ಇಂದು ಟ್ರಸ್ಟ್ ಹೆಸರಿನ ಮೂಲ ಖಾತೆದಾರರ ಹೆಸರಿಗೆ 44 ಎಕರೆ ಜಾಗ ಬಂದಿರುವುದು ಒಕ್ಕಲಿಗ ಜನಾಂಗಕ್ಕೆ ಸಿಕ್ಕ ಜಯವಾಗಿದ್ದು ಸರ್ವೆ ನಂಬರ್ 15 ಸಜ್ಜೇಪಾಳ್ಯ ಯಶವಂತಪುರ-2 ಬೆಂಗಳೂರಿನ ಈ ಜಾಗದ ಮಾಲಿಕತ್ವಕ್ಕಾಗಿ 2010ರಲ್ಲಿ ಉಚ್ಚ ನ್ಯಾಯಾಲಯ ವಿಭಾಗಿಯ ನ್ಯಾಯಮೂರ್ತಿ ಕುಮಾರ್ ರವರು ಮೂಲ ಮಾಲಿಕತ್ವ ಯಾರ ಹೆಸರಿಗೆ ಬರುತ್ತದೆ ಅವರಿಗೆ ಜಮೀನು ಬಿಟ್ಟು ಕೊಡುವಂತೆ ಆದೇಶ ನೀಡಿದ್ದು ರಾಜ್ಯ ಒಕ್ಕಲಿಗರ ಸಂಘ, ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಪರವಾಗಿ ನಾವು ಹೋರಾಟ ಮಾಡಿದ್ದು ವಿರುದ್ಧವಾಗಿ ಬಿ.ಪಿ.ಮಹೇಂದ್ರ ಪುಟ್ಟ ತಾಯಮ್ಮ ಮಾಲಿಕತ್ವದ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗಿ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಲಂಚ ಆಸೆಗೆ ಒಳಗಾಗಿ 2017ರಲ್ಲಿ ತಪ್ಪು ಆದೇಶ ನೀಡಿ ಮೂಲ ಮಾಲಿಕತ್ವರಾಗಿದ್ದ ರಂಗಮ್ಮನವರ ಹೆಸರನ್ನು 44 ಎಕರೆ 33 ಗುಂಟೆ ಜಾಗವನ್ನು ಕೈ ಬಿಟ್ಟ ಪರಿಣಾಮ ಬಿ.ಪಿ.ಮಹೇಶ್ ಪುಟ್ಟಯಮ್ಮನವರು ಈ ಜಾಗದಲ್ಲಿ ಬಿಡಿಎಯಿಂದ ಅನುಮತಿ ಪಡೆದು ₹ 55 ಕೋಟಿ ಹಣ ಕಟ್ಟಿ ಬಡಾವಣೆ ಮಾಡಲು ಹೊರಟಿದ್ದರು ವಕೀಲ ರವಿಶಂಕರ್ ರವರ ವಾದ ಮಂಡನೆ ಮೂಲಕ ರಂಗಮ್ಮನವರ ಹೆಸರಿಗೆ ಈಗ ಪಾಣಿ ಬಂದಿದ್ದು ನಾನು ಕೂಡ ಕೃಷ್ಣಪ್ಪ ರಂಗಮ್ಮ ಎಜುಕೇಶನ್ ಟ್ರಸ್ಟ್ ಧರ್ಮದರ್ಶಿಯಾಗಿ ಸರ್ಜೆಪಾಳ್ಯ ಉಳಿಸಿ ಸಮಿತಿಯ ಅಧ್ಯಕ್ಷರಾಗಿ ಹೋರಾಟ ಮಾಡಿದ ಪರಿಣಾಮ ಈಗ ₹ 2,000 ಕೋಟಿ ಬೆಲೆಬಾಳುವ ಜಾಗವನ್ನು ಉಳಿಸಿದ್ದು ರಾಜ್ಯ ಒಕ್ಕಲಿಗ ಸಂಘ ರಂಗಮ್ಮನವರ ಆಶಯದಂತೆ ಬಡವರಿಗೆ ವಿದ್ಯಾಭ್ಯಾಸ ಸಿಗುವ ನಿಟ್ಟಿನಲ್ಲಿ ದೊಡ್ಡ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ಎಚ್.ಎನ್.ಅಶೋಕ್ ತಿಳಿಸಿದರು.
ಟಿಎಪಿಸಿಎಂಎಸ್ ಮಾಜಿ? ಮಾಡಬಾಳ್ ನರೇಂದ್ರಕುಮಾರ್, ಆನಂದ್ ಭಾಗವಹಿಸಿದ್ದರು.ಕಂದಾಯ ಇಲಾಖೆಯಿಂದ ಮೂಲ ಖಾತೆದಾರರಾದ ದಿ.ರಂಗಮ್ಮನವರ ಹೆಸರಿಗೆ ಬಂದಿರುವ ಪಾಣಿ
ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…
ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾರ್ ನಲ್ಲಿದ್ದ ತಂದೆ ಮಗ…
ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…
ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…
ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…
ಬೆಂಗಳೂರು.10.ಆಗಸ್ಟ್.25:- ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ…