ಬೆಂಗಳೂರಿನ ನಮ್ಮ ಕ್ಲಿನಿಕ್ ಗಳಲ್ಲಿ 48 ಹುದ್ದೆ; ನೇರ ಸಂದರ್ಶನದ ದಿನಾಂಕ ಇಲ್ಲಿದೆ

ಬೆಂಗಳೂರು.16.ಮೇ.25:- ನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಮ್ಮ ಕ್ಲಿನಿಕ್ ಗಳಲ್ಲಿ 48 ಹುದ್ದೆಗಳು ಖಾಲಿ ಇದ್ದು, ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಆಯುಷ್ಮಾನ್ ಭಾರತ್ ಇನ್ ಫ್ರಾಸ್ಟ್ರಕ್ಚರ್ ಮಿಷನ್ ಯೋಜನೆ ಅಡಿಯಲ್ಲಿ ನಮ್ಮ ಕ್ಲಿನಿಕ್ ಗಳನ್ನು ನಡೆಸಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ, ಅತ್ತಿಬೆಲೆ, ಬೊಮ್ಮಸಂದ್ರ, ಚಂದಾಪುರ, ಜಿಗಣಿ, ಸರ್ಜಾಪುರ, ದೊಮ್ಮಸಂದ್ರ, ಆನೇಕಲ್, ಹುಣಸಮಾರನಹಳ್ಳಿ, ಮಾದನಾಯಕನಹಳ್ಳಿ, ಚಿಕ್ಕಬಾಣಾವರ ಸೇರಿ ಹಲವೆಡೆ ಕಾರ್ಯನಿರ್ವಹಿಸುವವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಮೇ 19ರಂದು ಸಂದರ್ಶನ ನಡೆಯಲಿದೆ.

19 ವೈದ್ಯಾಧಿಕಾರಿಗಳು, 16 ಶುಶ್ರೂಷಣಾಧಿಕಾರಿಗಳು ಹಾಗೂ 13 ಪ್ರಯೋಗಶಾಲೆ ತಂತ್ರಜ್ಞರ ಹುದ್ದೆಗಳು ಖಾಲಿ ಇವೆ. ವೈದ್ಯಾಧಿಕಾರಿಗಳಿಗೆ ಮಾಸಿಕ 60 ಸಾವಿರ ರೂಪಾಯಿ ವೇತನ ನೀಡಲಾಗುತ್ತದೆ. ಇನ್ನು, ಶುಶ್ರೂಷಣಾಧಿಕಾರಿಗಳಿಗೆ 18,714 ರೂ. ಹಾಗೂ ಪ್ರಯೋಗಶಾಲೆ ತಂತ್ರಜ್ಞರಿಗೆ 16,515 ರೂ. ಸಂಬಳ ನೀಡಲಾಗುತ್ತದೆ.

ವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಂಬಿಬಿಎಸ್ ಪಾಸಾಗಿರಬೇಕು. ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿ ಕೆಎಂಸಿ ನೋಂದಣಿ ಹೊಂದಿರಬೇಕು. ಶುಶ್ರೂಷಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್ಸಿ, ಜಿಎನ್‌ಎಂ ತರಬೇತಿ ಹಾಗೂ ಕೆಎಂಸಿ ನೋಂದಣಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಇರುವುದು ಕಡ್ಡಾಯವಾಗಿದೆ.

ಹುದ್ದೆ : ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ನಗರ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 48 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆ ಹುದ್ದೆಗಳ ಸಂಖ್ಯೆ
ವೈದ್ಯಾಧಿಕಾರಿಗಳು 19
ಶುಶ್ರೂಷಣಾಧಿಕಾರಿಗಳು 16
ಪ್ರಯೋಗಶಾಲಾ ತಂತ್ರಜ್ಞರು 13
ಶೈಕ್ಷಣಿಕ ಅರ್ಹತೆ :
• ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರತಕ್ಕದ್ದು.

• ಶುಶ್ರೂಷಣಾಧಿಕಾರಿಗಳು – ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿ.ಎಸ್.ಸಿ/ ಜಿ.ಎನ್.ಎಂ ತರಬೇತಿ ಹಾಗೂ ಕೆ.ಎನ್.ಸಿ ನೋಂದಣಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

• ಪ್ರಯೋಗಶಾಲಾ ತಂತ್ರಜ್ಞರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಕೋರ್ಸ್ ನಲ್ಲಿ ಉತ್ತೀರ್ಣ ಹೊಂದಿರಬೇಕು.

ವಯೋಮಾನ : ವೈದ್ಯಾಧಿಕಾರಿಗಳು ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಈ ಕೆಳಗಿನಂತೆ ವಯೋಮಾನ ನಿಗದಿಪಡಿಸಲಾಗಿದೆ.

• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ/ಪ.ಪಂಗಡ/ ಪ್ರ1ರ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ವೈದ್ಯಾಧಿಕಾರಿಗಳು – ಗರಿಷ್ಠ 60 ವರ್ಷ

ವೇತನ :

ವೈದ್ಯಾಧಿಕಾರಿಗಳು 60,000
ಶುಶ್ರೂಷಣಾಧಿಕಾರಿಗಳು 18,714
ಪ್ರಯೋಗಶಾಲಾ ತಂತ್ರಜ್ಞರು 16,515
ಆಯ್ಕೆ ವಿಧಾನ : ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ನೇರ ಸಂದರ್ಶನದ ಮೂಲಕ

ಸಂದರ್ಶನ ಸ್ಥಳ : ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೇಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು – 38

ಸಂದರ್ಶನ ನಡೆಯುವ ದಿನಾಂಕದ ವಿವರ :
ನೇರ ಸಂದರ್ಶನ ನಡೆಯುವ ದಿನಾಂಕ : ಮೇ 19, 2025 ಬೆಳಿಗ್ಗೆ 11.00 ಗಂಟೆಗೆ

ಪ್ರಯೋಗಶಾಲೆ ತಂತ್ರಜ್ಞರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಕೋರ್ಸ್ ಮುಗಿಸಿರಬೇಕು. ಅಲ್ಲದೆ, ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿ ನಡೆಸುವ ಪ್ರಯೋಗಶಾಲೆ ತಂತ್ರಜ್ಞತೆಯಲ್ಲಿ ಮೂರು ವರ್ಷದ ಕೋರ್ಸ್ ಮುಗಿಸಿರಬೇಕು. ಪ್ರಯೋಗಶಾಲೆ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರಬೇಕು.

ಮೇ 19ರಂದು ಸಂದರ್ಶನ ನಡೆಯಲಿದೆ. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು – 38ಗೆ ಹಾಜರಾಗಿ ಸಂದರ್ಶನ ನೀಡಬಹುದು. ಸಂದರ್ಶನಕ್ಕೆ ಹಾಜರಾಗುವವರು ಮೂಲ ದಾಖಲೆಗಳನ್ನು ಜೆರಾಕ್ಸ್ ಪ್ರತಿಯೊಂದಿಗೆ ತರುವುದು ಕಡ್ಡಾಯ ಎಂದು ತಿಳಿಸಲಾಗಿದೆ.

prajaprabhat

Recent Posts

ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ‘DJ’ ನಿಷೇಧ: ಸರ್ಕಾರ ಆದೇಶ

ಬೆಂಗಳೂರು.13.ಆಗಸ್ಟ್.25:- ರಾಜ್ಯಾದ್ಯಂತ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ವೇಳೆ 'DJ' ನಿಷೇಧ  ಮುಂಜಾಗ್ರತಾ ಕ್ರಮವಾಗಿ…

14 minutes ago

ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾಧನೆ ಜರುಗಿತು.

ಕೊಪ್ಪಳ.13.ಆಗಸ್ಟ್.25: ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾಧನೆ ಜರುಗಿತು. ಆರಾಧನೆಯ ಕೊನೆಯ ದಿನವಾಗಿದ್ದರಿಂದ ಮಧ್ಯಾಹ್ನ ನಡೆದ…

34 minutes ago

ಪದವಿ ಕಾಲೇಜು 310 ಪ್ರಾಂಶುಪಾಲರ ನೇಮಕಾತಿ ಶೀಘ್ರವೇ.

ಬೆಂಗಳೂರು.13.ಆಗಸ್ಟ.25:- ರಾಜ್ಯ ಸರ್ಕಾರ ಹೊಸ 310 ಪ್ರಾಂಶುಪಾಲರ ಹುದ್ದೆಗಳಿಗೆ  ಶೀಘ್ರವೇ ಅರ್ಹರಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ ಪ್ರಥಮ ದರ್ಜೆ ಕಾಲೇಜುಗಳಿಗೆ…

2 hours ago

ಅತಿಥಿ ಉಪನ್ಯಾಸಕರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವ ವಿದ್ಯಾಲಯವು (ಯುವಿಸಿಇ)/…

2 hours ago

ಯುಜಿಸಿ ಕರಡು ನಿಯಮ ಪುನರ್‌ಪರಿಶೀಲನೆಗೆ ಆಗ್ರಹ

ಶಿಕ್ಷಣ ವ್ಯವಸ್ಥೆಯ ಬದಲಾವಣೆಯು ಗುಣಮಟ್ಟವನ್ನು ದುರ್ಬಲಗೊಳಿಸಬಾರದು. ಆದ್ದರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತನ್ನ ಕರಡು ನಿಯಮಾವಳಿಗಳನ್ನು ಪುನರ್‌ ಪರಿಶೀಲಿಸಬೇಕು'…

10 hours ago

ಅಭಿ ಪಿಕ್ಚರ್ ಬಾಕಿ ಹೈ; ರಾಹುಲ್ ಗಾಂಧಿ ಹೇಳಿಕೆ ಕುತೂಹಲಕೆ ಕಾರಣ.

ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…

11 hours ago