ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ ಪರವಾಗಿಲ್ಲ, ನಮ್ಮ‌ ಕಲಬುರಗಿಯನ್ನು ಮೈಸೂರು, ಬೆಂಗಳೂರು ಮಾಡಿ ಸಾಕು. ಖರ್ಗೆ

ಯಾದಗಿರಿ.14.ಜೂನ್.25:- ಕೊಕಲ್ಯಾಣ ಕರ್ಣಾಟಕ ಆಭಿವೃದ್ಧಿ ಹೇಗೆ ಸಾಧ್ಯ ಅಧಿಕಾರಿಗಳು ಹಣವನ್ನು ಖರ್ಚು ಮಾಡುವುದಿಲ್ಲ ಎನ್ನುವ ಸಿದ್ದರಾಮಯ್ಯನವರ ಮಾತನ್ನು ಮುರಿದು, ಕಪ್ಪು ಚುಕ್ಕೆಯನ್ನು ತೊಳೆದು ಜನರ ಸೌಲಭ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಕೈಗೊಂಡು ಸರ್ಕಾರದ ಮಂತ್ರಿಗಳು ಮತ್ತು ಇಲ್ಲಿನ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಸೇರಿ ಲಕ್ಷಾಂತರ ಜನರನ್ನು ಸೇರಿಸಿದ್ದಕ್ಕಾಗಿ ವಿಶೇಷ ಧನ್ಯವಾದಗಳು ಸಲ್ಲಿಸುವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಂದು ಶನಿವಾರ ಯಾದಗಿರಿಯಲ್ಲಿ ಆರೋಗ್ಯ ಆವಿಷ್ಕಾರ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದಯವಿಟ್ಟು ಕಕ ಅನುದಾನದ ಹಣವನ್ನು ಬೇಗ ಖರ್ಚು ಮಾಡಿ, ಮತ್ತೆ ಸಿದ್ದರಾಮಯ್ಯನವರನ್ನು ಹಣ ಕೇಳಬೇಕು. ನಾನು ನೀನು ಎಂದು ಕಚ್ಚಾಡಿದರೆ, ಯಾವ ಕೆಲಸಗಳು ಆಗುವುದಿಲ್ಲ, 5000 ಕೋಟಿ ಹಣವನ್ನು ಉಪಯೋಗಿಸಿ, ಖರ್ಚು ಮಾಡಿ ತೋರಿಸಬೇಕು‌ ಎಂದರು.

ಶಿಕ್ಷಕರ ಕೊರತೆ ಕಾರಣ, ಏಳು ಜಿಲ್ಲೆಗಳ ಫಲಿತಾಂಶದಲ್ಲಿ ಕೊನೆಯ ಸ್ಥಾನಗಳಲ್ಲಿದೆ. ಇಲ್ಲಿನ ಶೈಕ್ಷಣಿಕ ಭಡ್ತಿ ಹೆಚ್ಚಾಗಲಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೌಕರಿಗಳ ಭಡ್ತಿ ಸರ್ಕಾರದ ಮಟ್ಟದಲ್ಲಿ ಹೆಚ್ವಾಗಬೇಕು. ನಮಗೆ, ನಿಮಗೆ ಆರ್ಥಿಕ ತೊಂದರೆ ಇಲ್ಲ ಎಂದು ಹೇಳಿದರು.

ಆರ್ಥಿಕ ಅನುಮತಿ ಸಿಎಂ ಅವರ ಕೈಯಲ್ಲಿಯೇ ಇರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ‌ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಕ್ಯಾಬಿನೆಟ್ ಪ್ರಸ್ತಾಪ ಮಾಡಿ ಎಂದು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ತಿಳಿಸಿದರು.

ಯಾವ ಜನರಿಗೆ ಸಮಸ್ಯೆ ಇದೆ, 15, 18 ಪ್ರತಿಶತ ಜನರಿಗಾಗಿ 82 ಪ್ರತಿಶತ ಜನರ ಮಕ್ಕಳಿಗೆ ನ್ಯಾಯ ಕೊಡಿಸದೆ ಹೋದರೆ, ನಮ್ಮ‌ನಿಮ್ಮ ಮಕ್ಕಳು ಬೀದಿ ಪಾಲಾಗುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರನ್ನು ಸಿಂಗಾಪುರ ಮಾಡಿಕೊಳ್ಳಿ ಪರವಾಗಿಲ್ಲ, ನಮ್ಮ‌ ಕಲಬುರಗಿಯನ್ನು ಮೈಸೂರು, ಬೆಂಗಳೂರು ಮಾಡಿ ಸಾಕು. ಸಿದ್ದರಾಮಯ್ಯನ ಮೈಸೂರು, ಶಿವಕುಮಾರ್ ಅವರ ಬೆಂಗಳೂರಿನ ರೀತಿ ಕಲಬುರಗಿ, ಕಲ್ಯಾಣ ಕರ್ನಾಟಕವನ್ನು ಮಾಡಿ ಎಂದು ಖರ್ಗೆ ಅವರು ನಗೆ ಚಟಾಕಿ ಹಾರಿಸಿದರು.

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

2 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

7 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

8 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

8 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

9 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

9 hours ago