13 ಡಿಸೆಂಬರ್24 ಬೀದರ್:- ಭಾಲ್ಕಿ ನಗರದ ಎಲ್ಲಾ ಆಹಾರ ಪದಾರ್ಥಗಳ ತಯಾರಕರು, ಮತ್ತು ಇತರೆ ಆಹಾರ ಪದಾರ್ಥಗಳ ಮಾರಾಟಗಾರರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ ಹಾಗೂ ಪರವಾನಿಗೆ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಬೀದರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗಳಾದ ಡಾ.ಸಂತೋಷ ಸೂಚಿಸಿದರು.
ಅವರು ಇಂದು ರೋಟರಿ ಕ್ಲಬ್ ಐಎಂಎ ಹಾಲ್ ಭಾಲ್ಕಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಪ್ರಕಾರ ಬೀದಿ ಬದಿ ವ್ಯಾಪಾರಿಗಳು, ಟಿ ಅಂಗಡಿಗಳು, ಜಿಲೇಬಿ ತಯಾರಕರು, ಚೈನಿಸ್ ಫಾಸ್ಟ ಪುಡ್, ಟೀಫಿನ್ ಸೆಂಟರ್, ಜುಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್ , ಚಾರ್ಟ ಭಂಡಾರ್‌ಗಳ ವಿಶೇಷ ನೋಂದಣಿ ಮತ್ತು ಪರವಾನಿಗೆ ಆಂದೋಲನ್ ಬಗ್ಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳು ಯಾವುದೆ ತರಹದ ಕೃತಕ ಪರ್ದಾಥಗಳನ್ನು, ಟೆಸ್‌ಟಿಂಗ ಪೌಡರಗಳ, ಪಾನಿಪೋರಿ ನೀರಿನಲ್ಲಿ ಸಿಟ್ರಸ್ ಹಾಗೂ ಬಾಳೆ ಹಣ್ಣುಗಳನ್ನು ರೈಪನಿಂಗ ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು ಹಾಗೂ ಒಂದು ವೇಳೆ ಕೃತಕ ಪರ್ದಾಗಳನ್ನು ಉಪೋಗಿಸಿದ ಪಕ್ಷದಲ್ಲಿ ತಮ್ಮ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವತಿಯಿಂದ ಸೂಕ್ತ ಕ್ರಮ ಕೈಗೂಳಲಾಗುವುದು. ವ್ಯಾಪಾರಿಗಳು ಸ್ವಚ್ಛೆತೆಯನ್ನು ಕಾಪಾಡುವುದು, ಹ್ಯಾಂಡ ಗ್ಲೋಸ್ ಮತ್ತು ಕ್ಯಾಪಗಳ ಬಳಕೆ ಮಾಡಲು ಅವರು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಭಾಲ್ಕಿ ಮಾಜಿ ಪೂರಸಭೆ ಅಧ್ಯಕ್ಷರು ಬಸವರಾಜ ವಂಕೆ, ಭಾಲ್ಕಿ ತಾಲ್ಲೂಕ ಆಹಾರ ಸುರಕ್ಷತಾ ಅಧಿಕಾರಿ ಸೋಮನಾಥ ತರನಳ್ಳೆ, ಔರಾದ(ಬಿ) ತಾಲೂಕಾ ಆಹಾರ ಸುರಕ್ಷತಾಧಿಕಾರಿ ಕಿಶೋರ ಕುಮಾರ, ವ್ಯಾಪಾರಿಗಳಾದ ನರಸಿಂಹ ರಾಘವೆಂದ್ರ ಬೇಕರಿ ಮತ್ತು ನಯುಮ ನುಮಾನ ಬೇಕರಿ ಸೇರಿದಂತೆ ಇತರರು ಉಪಸ್ಥಿತರಿದರು.
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…