ಬೀದರ.28.ಜೂನ್.25:- ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳು, ಜುಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್, ಟಿ ಅಂಗಡಿಗಳು, ಜಿಲೇಬಿ ತಯಾರಕರು, ಚೈನಿಸ್ ಫಾಸ್ಟ ಪುಡ್, ಟೀಫಿನ್ ಸೆಂಟರ್, ಚಾರ್ಟ ಭಂಡಾರ್‍ಗಳ ಇತರೆ ಆಹಾರ ಪದಾರ್ಥಗಳ ಮಾರಾಟಗಾರರಲ್ಲಿ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕಾಪಾಡಬೇಕೆಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಸಂತೋಷ ತಿಳಿಸಿದರು.
ಅವರಿಂದು ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ, ಆಯುಕ್ತರು ಬೆಂಗಳೂರು ಇವರ ಆದೇಶದ ಮೇರೆಗೆ ವಿಶೇಷ ಆಂದೋಲವನ್ನು ಹಮ್ಮಿಕೊಂಡು ಬೀದಿ ಬದಿ ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಗುತ್ತಿದೆಂದರು.
ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮ 2011ರನ್ವಯ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸುವುದು ಮತ್ತು ತಾಲೂಕಾ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸುವುದರ ಮುಖಾಂತರ ಆಹಾರ ಸುರಕ್ಷತೆ ಮತ್ತು ಔಷದ ಆಡಳಿತದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ 50 ನೋಂದಣಿ ಮಾಡಿಸುವುದು. (ನೋಂದಣಿಗೆ 100 ರೂ. ಪರವಾನಿಗೆಗೆ 2000 & ತಯಾರಕರಿಗೆ 3000 ರೂ ಮಾತ್ರ) ಪರವಾನಿಗೆ ಹಾಗೂ ನೋಂದಣಿ ಮಾಡಿಸಲು ಬ್ರೋಕರ ಅಥವಾ ಅಧಿಕಾರಿಗಳನ್ನು ಹಣ ನೀಡದೆ ತಾವೆ ಆನ್ ಲೈನ ಮುಂಖಾಂತರ ಪಡೆದುಕೋಳ್ಳಿ ಎಂದು ತೀಳಿಸಲಾಗಿದೆ ಹಾಗೂ ಸ್ವಚ್ಛೆತೆಯನ್ನು ಕಾಪಾಡುವುದು ಅಡುಗೆ ತಯಾರಕರ ವೈದ್ಯಕಿಯ ಪ್ರಮಾಣ ಪತ್ರ ಮತ್ತು ಡ್ರೆಸ್ ಕೋಡ ಹ್ಯಾಂಡ ಗ್ಲೋಸ್, ಕ್ಯಾಪಗಳನ್ನು ಕಡ್ಡಾಯವಾಗಿ ಬಳಕೆ ಮಾಡಲು ತಿಳಿಸಿದರು.
ಅದೇ ರೀತಿ ಬೀದರ ಜಿಲ್ಲೆಯ ಇಂದು ಎಲ್ಲಾ ತಾಲೂಕುಗಳಿಂದ ಓಟ್ಟು 70 ಬೀದಿ ಬದಿ ವ್ಯಾಪಾರಿಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ರಾಯಚೂರು.13.ಆಗಸ್ಟ.25:- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು…
ರಾಯಚೂರು.13.ಆಗಸ್ಟ್.25: 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ…
ರಾಯಚೂರು.13.ಆಗಸ್ಟ್.25: ಸಮಾಜದ ಪ್ರತಿಯೊಬ್ಬರು ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅರೋಲಿ…
ಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿ: ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ ಸೂಚನೆ ರಾಯಚೂರು.13.ಆಗಸ್ಟ್.25: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಾಲ-ಕಾಲಕ್ಕೆ…
ಕೊಪ್ಪಳ.13.ಆಗಸ್ಟ್.25 ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ…
ಕೊಪ್ಪಳ.13.ಆಗಸ್ಟ್.25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 19 ರಂದು ಬೆಳಿಗ್ಗೆ 10…