ಬೀದರ.23.ಏಪ್ರಿಲ್.25:- ಬೀದರ್ ನಗರದಲ್ಲಿ ಸೇಪ್ಟಂಬರ್ 2006 ನೇ ಸಾಲಿನಲ್ಲಿ ಈ ದೋಷಾರೋಪಣೆ ಪತ್ರದ ಕಾಲಂ. ನಂ.3 ರಲ್ಲಿ ನಮೂದು ಮಾಡಿದ ಆರೋಪಿತನು ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಬೀದರ ನಗರದಲ್ಲಿಯ ರಾಂಪುರೆ ಕಾಲೋನಿಯಲ್ಲಿರುವ ಜ್ಞಾನ ಜ್ಯೋತಿ ಪಬ್ಲಿಕ ಶಾಲೆಯಲ್ಲಿ ಒಂದು ಕಛೇರಿ ತೆರೆದು ತಾನು ಅದರ ಮ್ಯಾನೆಜರನಾಗಿರುತ್ತೆನೆಂದು ಸ್ಥಳಿಯ ದಿನ ಪತ್ರಿಕೆಯಲ್ಲಿ ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಎಜೆಂಟರು, ಡೆವಲಪಮೆಂಟ್ ಆಫಿಸರ್ ಹಾಗೂ ಏರಿಯ ಮ್ಯಾನೆಜರ ಹುದ್ದೆಗಾಗಿ ಜಾಹಿರಾತು ಪ್ರಕರಟಿಸಿ ಸಾಕ್ಷಿ ನಂ.1 ಹಾಗೂ 6 ರಿಂದ 13 ರವರಿಗೆ ಸಂದರ್ಶನಕ್ಕೆ ಕರೆದು,
ಸಾಕ್ಷಿ ನಂ.! ಇವರಿಗೆ ಡೆವಲಪಮೆಂಟ್ ಆಫಿಸರ್ ಹಾಗೂ ಸಾಕ್ಷಿ ನಂ.6 ರಿಂದ 13 ರವರಿಗೆ ಏಜಂಟರನ್ನಾಗಿ ನೇಮಕ ಮಾಡಿಕೊಂಡು, ಇದು ರಾಜೀವ ಗಾಂಧಿ ಗ್ರಾಮೀಣ ಸ್ವಯಂ ಉದ್ಯೋಗ ಯೋಜನೆ, ಮೀನಿಸ್ಟ್ರಿ ಆಫ್ ರೂರಲ್ ಡೇವಲಪಮೆಂಟ ಗೌರಮೆಂಟ್ ಆಫ್ ಇಂಡಿಯಾ, ನ್ಯೂ ದೆಹಲಿ ಇದ್ದು, ಕೇಂದ್ರ ಸರ್ಕಾರದ ಸಂಸ್ಥೆ ಆಗಿರುತ್ತದೆ.
ಅಂತ ಸುಳ್ಳು ದಾಖಲಾತಿಗಳಾದ ಪಾಸಬುಕ್ ರಸೀದಿ, ಸೀಲ್, ಮಾಹಿತಿ ಪುಸ್ತಕ ಹಾಗೂ ಅರ್ಜಿ ನಮೂನೆಗಳನ್ನು ಸೈಹಿಸಿ, ಸಾಕ್ಷಿ ನಂ.! ಹಾಗೂ 6 ರಿಂದ 13 ರವರ ಸಹಾಯದಿಂದ ಸಾರ್ವಜನಿಕರಿಗೆ ಸುಳ್ಳು ಭರವಸೆ ನೀಡಿ ಆರ್.ಡಿ ಅಕೌಂಟ ರೀತಿಯಲ್ಲಿ ಹಣ ಸಂಗ್ರಹಿಸಿಕೊಂಡು ಸದರಿ ಹಣ ಮೆಚೂರಿಟಿ ಅವಧಿ ಮುಗಿದ ನಂತರ ಸಂಗ್ರಹಿಸಿದ ಹಣಕ್ಕಿಂತ ಹೆಚ್ಚು ಹಣ ಕೊಡುವದಾಗಿ ಹಾಗೂ ಯಾರೂ ಚೆನ್ನಾಗಿ ಕೆಲಸ ನಿರ್ವಹಿಸುತ್ತಾರೋ ಅವರಿಗೆ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಬಹುಮಾನ ರೂಪದಲ್ಲಿ ಕೊಡವದಾಗಿ ಹಾಗೂ ಸರಕಾರದಿಂದ ಸಾಲ ಕೊಡಿಸುವುದಾಗಿ ಸುಳ್ಳು ಆಶ್ವಾಸನೆ ನೀಡಿ ಖೋಟಾ ದಾಖಲಾತಿಗಳು ಸೃಷ್ಟಿಸಿ ಸಾರ್ವಜನಿಕರಿಂದ ಸುಮಾರು 18,00,000/-ರೂ ಪಡೆದುಕೊಂಡು ಮೋಸ ಮಾಡಿರುತ್ತಾನೆ.
ಆರೋಪಿತನು ಕಲಂ.420, 465, 468, 471 ಐ.ಪಿ.ಸಿ ನೇದ್ದರಲ್ಲಿ ಅಪರಾಧ ಎಸಗಿದ್ದು ಆರೋಪಿತನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿದೆ.
ಈ ಪ್ರಕರಣವು ಬೀದರಿನ ಮಾನ್ಯ ಪ್ರಧಾನ ಜೆ.ಎಮ್.ಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದಿದ್ದು, ಪ್ರಕರಣದ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳನ್ನು ಪರೀಶಿಲಿಸಿ ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಕಾಡಪ್ಪಾ ಹುಕ್ಕೇರಿ ಇವರು ಆರೋಪಿತನಾದ ಈಶ್ವರ ತಂದೆ ಸೂರಪ್ಪಾ ಖಂಡಾರೆ ಸಾಕ್ಷಿ ಚಿಲ್ಲರ್ಗಿ ಗ್ರಾಮ ತಾ॥ ಜಿ ಬೀದರ, ರವರು ತಪ್ಪಿಷ್ಟನು ಎಂದು ತೀರ್ಪು ನೀಡಿ ಆರೋಪಿತನಿಗೆ ಭಾರತ ದಂಡ ಸಂಹಿತೆ ಕಲಂ:420, 465, 468. 471 ಐ.ಪಿ.ಸಿ ಅಪರಾಧಕ್ಕೆ 3 ವರ್ಷ ಕಠಿಣ ಕಾರವಾಸ ಶಿಕ್ಷೆ ಮತ್ತು 20,000/-ರೂ ದಂಡ, ಹಾಗೂ ದಂಡ ಕೊಡಲು ತಪ್ಪಿದಲ್ಲಿ 06 ತಿಂಗಳ ಹೆಚ್ಚಿನ ಕಠಿಣ ಕಾರವಾಸ ಶಿಕ್ಷೆ ಅನುಭವಿಸುವಂತೆ ಶಿಕ್ಷೆ ವಿಧಿಸಿ ದಿ:21-04-2025 ರಂದು ಆದೇಶ ಹೊರಡಿಸಿದ್ದು ಇರುತ್ತದೆ.
ಅಭಿಯೋಜನಾ ಪರವಾಗಿ ಸಹಾಯಾಕ ಸರ್ಕಾರಿ ಅಭಿಯೋಜಕರಾದ ಶ್ರೀ ನಂದುಕುಮಾರ ಇವರು
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…