ಬೀದರ.27.ಜನವರಿ.25:- ಬೀದರ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು / ಸೌಹಾರ್ದ ಸಹಕಾರಿಗಳು ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಸಲ್ಲಿಸದೇ ಇರುವುದರಿಂದ ಕೂಡಲೇ ಈ ಪ್ರಕಟಣೆಯಾದ 03 ದಿನಗಳ ಒಳಗಾಗಿ ಮಾಹಿತಿ ಸಲ್ಲಿಸಬೇಕು.
ಇಲ್ಲವಾದಲ್ಲಿ ನೀವು ತಿಳಿಸಬೇಕಾಗಿರುವುದು ಏನು ಇಲ್ಲವೆಂದು ಪರಿಗಣಿಸಿ ನಿಮ್ಮ ಸಂಘದ ಲೆಕ್ಕಪರಿಶೋಧನೆ ನಿರ್ವಹಿಸಲು ಇಲಾಖಾ ವತಿಯಿಂದ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಬೀದರ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾವು ಪ್ರತಿವರ್ಷದಂತೆ ಈ ವರ್ಷವು ದಿನಾಂಕ: 25-09-2024 ರೊಳಗಾಗಿ ಪ್ರತಿಯೊಂದು ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ತಮ್ಮ ಸಂಘದ ವಾರ್ಷಿಕ ಮಹಾಸಭೆಯನ್ನು ಕಡ್ಡಾಯವಾಗಿ ಜರುಗಿಸಬೇಕು.
ಅದರಲ್ಲಿ ಸನ್ 2024-25 ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನುಆಯ್ಕೆ ಮಾಡಿಕೊಳ್ಳಬೇಕು.
ತಾವು ಜರುಗಿಸಿದ ವಾರ್ಷಿಕ ಮಹಾಸಭೆಯ ನಡುವಳಿಗಳನ್ನು ಕರ್ನಾಟಕ ಸಹಕಾರ ಸಂಘಗಳ / ಸೌಹಾರ್ದ ಸಹಕಾರಿಗಳ ನಿಯಮಗಳ ನಿಯಮ 29(B)8 / 8(B)8 ರಿತ್ಯ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡ ಬಗ್ಗೆ 07 ದಿನಗಳ ಒಳಗಾಗಿ ವಾರ್ಷಿಕ ಮಹಾಸಭೆಯ ನಡುವಳಿಯೊಂದಿಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರಕಛೇರಿಗೆ ಮಾಹಿತಿಗಾಗಿ ಸಲ್ಲಿಸಬೇಕಾಗಿದ್ದು, ತಹಲ್‍ವರಗೂ ಲೆಕ್ಕಪರಿಶೋಧಕರ ಆಯ್ಕೆ ಮಾಡಿಕೊಂಡ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ.
ಆದ್ದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ/ಸೌಹಾರ್ದ ಸಹಕಾರಿ ಕಾಯ್ದೆ ಕಲಂ 63(1)/33(1) ರನ್ವಯಆಯ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗಿತ್ತು.
ಆದರೆ ಆಯ್ಕೆ ಮಾಹಿತಿ ಸಲ್ಲಿಸದೇ ಇರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ / ಸೌಹಾರ್ದ ಸಹಕಾರಿಕಾಯ್ದೆ ಕಲಂ 63(2) / 33(2) ಪ್ರಾವಿಸೊದನ್ವಯ ಪ್ರದತ್ತವಾದ ಅಧಿಕಾರದ ಮೆರೆಗೆ ನೀವು ಲೆಕ್ಕ ಪರಿಶೋಧನೆಗೆ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಳ್ಳದೆ ಇರುವುದರಿಂದ ಕರ್ನಾಟಕ ಸಹಕಾರ ಸಂಘಗಳ ನಿಯಮ / ಸೌಹಾರ್ದ ಸಹಕಾರಿ ನಿಯಮ 29(B)8 / 8(B)8 ರನ್ವಯ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ.
ಈ ಇಲಾಖೆಗೆ ತಿಳಿಯಪಡಿಸದೇ ಇರುವುದರಿಂದ ತಾವು ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವುದಿಲ್ಲವೆಂದು ಪರಿಭಾವಿಸಿ ಇಲಾಖಾ ವತಿಯಿಂದ ತಮ್ಮ ಸಂಘಗಳ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಸ್ಪಷ್ಟಪಡಿಸುತ್ತಾ ಈ ಕುರಿತು ನಿಮ್ಮ ಹೇಳಿಕೆ/ಮಾಹಿತಿ ಏನಾದರೂ ಇದ್ದಲ್ಲಿ ಕೆಳಗೆ ಇರುವ ಅಡ್ರೆಸ್ಗೆ
ಮಾನ್ಯ ಉಪ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಉಪ ನಿರ್ದೇಶಕರಕಛೇರಿ, ಬೀದರ ಎಲ್.ಐ.ಜಿ-124 ಕೆ.ಎಚ್.ಬಿ. ಕಾಲೋನಿ, ವಿಶ್ವನಾಥ ಫುಲೇಕರ್‍ರವರ ನಿವಾಸ, ಡಾ|| ನಾಗಮಾರಪಳ್ಳಿ ರವರ ಮನೆ ಹತ್ತಿರ, ಬೀದರ-585401 ರವರಿಗೆ ಮಾಹಿತಿ ಸಲ್ಲಿಸಲು ತಿಳಿಯಪಡಿಸಿದೆ ಅವರು ತಿಳಿಸಿದ್ದಾರೆ.
ಈ ಮೇಲಿನ ಯೆಲ್ಲ ಮಾಹಿತಿ ಸಹಕಾರ ಸಂಘ ನೀಡಿದ್ದಾರೆ ಅದರಲ್ಲಿ ಸನ್ 2024-25 ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನುಆಯ್ಕೆ ಮಾಡಿಕೊಳ್ಳಬೇಕು…
Source: www.prajaprabhat.com
ರಾಯಚೂರು.07.ಆಗಸ್ಟ್ .25: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್…
ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ…
ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ್ ಸೇನಾ ರ‍್ಯಾಲಿಗೆ ಸ್ಥಾನಿಕ…
ಕೊಪ್ಪಳ.07.ಆಗಸ್ಟ್ .25: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮರೇಶ ಬಡಿಗೇರ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು…
ಕೊಪ್ಪಳ.07.ಆಗಸ್ಟ್.25: ಕೊಪ್ಪಳ ನಗರಸಭೆಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಆಗಸ್ಟ್ 15 ರಂದು ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಆ.…
ರಾಯಚೂರು.07.ಆಗಸ್ಟ್.25:- ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ https://sevasindhuservices,karnataka.gov.in ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ…