ಬೀದರ.16.ಫೆ.25: ಇಂದು ಬೀದರ ವಿಶ್ವವಿದ್ಯಾಲಯ ದಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ವಿಶ್ವವಿದ್ಯಾಲಯದಲ್ಲಿ ನಡೆದ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ವಿ.ವಿ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ ನಾಯಕ ಮಾತನಾಡಿ, ‘ಸಂತ ಸೇವಾಲಾಲ್ ಅವರು ಬುಡಕಟ್ಟು ಸಮುದಾಯದಲ್ಲಿನ ಸಮಸ್ಯೆಗಳನ್ನು ಅರಿತು, ಎಲ್ಲರೂ ಕಲಿಯಿರಿ ಮತ್ತು ಎಲ್ಲರನ್ನೂ ಕಲಿಸಿರಿ ಎಂಬ ಮಹತ್ವದ ಸಂದೇಶವನ್ನು ಸಾರಿದರು’ ಎಂದರು.
ಹಿಂದುಳಿದ ಬಂಜಾರ ಸಮುದಾಯದಲ್ಲಿ ಜನಿಸಿದ ಸೇವಾಲಾಲರು ತಮ್ಮ ಆದರ್ಶ ಜೀವನಶೈಲಿಯಿಂದಾಗಿ ಜನಮಾನಸದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ. ಸೇವಾಲಾಲರು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಕರ್ತವ್ಯ, ಹಕ್ಕುಗಳು, ಧರ್ಮ, ಕ್ರಿಯೆಗಳ ಬಗ್ಗೆ ವಿವರವಾಗಿ ಬೋಧಿಸಿದ್ದಾರೆ. ಅವರು ಸ್ತ್ರೀ-ಪುರುಷರಲ್ಲಿ ಸಮಾನತೆ ಇರಬೇಕೆಂದು ಹೇಳಿದ್ದರು’ ಎಂದು ನೆನೆದರು.
ಕುಲಸಚಿವೆ (ಆಡಳಿತ) ಸುರೇಖಾ ಮಾತನಾಡಿ, ‘ಸಂತ ಸೇವಾಲಾಲರ ಆಧ್ಯಾತ್ಮಿಕ ಅನುಭವದ ಜೊತೆಗೆ ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ, ಶ್ರಮಜೀವಿಗಳು, ತುಳಿತಕ್ಕೊಳಗಾದವರ ಧ್ವನಿಯಾಗಿ ಅವರ ಸಂದೇಶಗಳು ಮೂಡಿಬಂದಿವೆ. ಅವರು ಸಮಾಜವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಆದರ್ಶ ಮಾರ್ಗದರ್ಶಕರಾಗಿದ್ದರು’ ಎಂದರು.
ವಿಶೇಷ ಅಧಿಕಾರಿ ರವೀಂದ್ರನಾಥ ವಿ.ಗಬಾಡಿ, ಶಾಂತಕುಮಾರ ಚಿದ್ರಿ ಮತ್ತಿತರರು ಹಾಜರಿದ್ದರು.
ಜಿಲ್ಲಾ ಬಿಜೆಪಿ: ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ಸಂತ ಸೇವಾಲಾಲರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ಪೂಜೆ ನೆರವೇರಿಸಿದರು. ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ರಾಜಶೇಖರ ನಾಗಮೂರ್ತಿ, ಅರುಣ, ಆದಿನಾಥ್, ಶಿವರಾಜ ಹಾಜರಿದ್ದರು.
ಬೆಂಗಳೂರು.06.ಆಗಸ್ಟ್.25:- ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ 2ದಶಕದಿಂದ ನಿರಂತರವಾಗಿ ಕಾರ್ಯ ನಿರ್ವ ನಿರ್ವಹಿದಾರೆ ಆದರೆ …
ಕೊಪ್ಪಳ.06.ಆಗಸ್ಟ್.25: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಹನುಮಂತನ ಜನ್ಮಸ್ಥಳವೆಂದೆ…
ಚಾಮರಾಜನಗರ.06.ಆಗಸ್ಟ್ .25:- ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ 2022 -2025 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ…
ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D…
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…