ಬೀದರ ವಿಶ್ವವಿದ್ಯಾಲಯದ ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್ಸಿ ಫಲಿತಾಂಶ ಘೋಷಣೆ.!

ಬೀದರ.01.ಮಾರ್ಚ.01: ಬೀದರ ವಿಶ್ವವಿದ್ಯಾಲಯ ಜ್ಞಾನಕಾರಂಜಿ ಹಾಲಹಳ್ಳಿಯ ಮುಖ್ಯ ಆವರಣದಲ್ಲಿ ಇಂದು ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ ಅವರು ಸ್ನಾತಕ ಬಿ.ಬಿ.ಎ., ಬಿ.ಸಿ.ಎ., ಹಾಗೂ ಬಿ.ಎಸ್ಸಿ ಎರಡನೆಯ ಸೆಮೆಸ್ಟರ್ ಪದವಿ ಫಲಿತಾಂಶವನ್ನು ಬಿಡುಗಡೆಗೊಳಿಸಿ ಮಾತನಾಡಿದ ಕುಲಪತಿಗಳು ಎಲ್ಲರ ಸಹಕಾರದೊಂದಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಬಂದಿದೆ. ನೂತನ ವಿಶ್ವವಿದ್ಯಾಲಯವಾಗಿದ್ದರೂ ಸಹ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ ಫಲಿತಾಂಶ ನೀಡುವಲ್ಲಿ ಬೀದರ ವಿಶ್ವವಿದ್ಯಾಲಯ ಯಶಸ್ವಿಯಾಗಿದೆ ಎಂದರು.


     ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ ಮಾತನಾಡಿ, ಸಮಯಕ್ಕೆ ಸರಿಯಾಗಿ ಬೀದರ ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಿಸುತ್ತಿರುವುದು ಸಮಾಧಾನಕರ ಹಾಗೂ ಹೆಮ್ಮೆಯ ಸಂಗತಿಯಾಗಿದೆ. ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಬೀದರ ವಿಶ್ವವಿದ್ಯಾಲಯವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗಾಗಿ ಶ್ರಮವಹಿಸಿದ ಸಿಬ್ಬಂದಿಗಳೆಲ್ಲರೂ ಅಭಿನಂದನಾರ್ಹರು ಎಂದರು.


     ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್.ಮಾತನಾಡಿ, ಸಮಯಕ್ಕೆ ಸರಿಯಾಗಿ ಫಲಿತಾಂಶ ಘೋಷಣೆಯಾದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಪಡೆಯಲು ಫಲಿತಾಂಶದ ಅವಶ್ಯಕತೆಯಿದೆ ಎಂದರು.


     ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ ಮಾತನಾಡಿ, ಇದೊಂದು ಸಂತೋಷದ ಹಾಗೂ ಅಭಿಮಾನದ ಸಂಗತಿಯಾಗಿದೆ. ಇಂದು ಬೀದರ ವಿಶ್ವವಿದ್ಯಾಲಯದಲ್ಲಿ ಬಿ.ಬಿ.ಎ., ಬಿ.ಸಿ.ಎ., ಹಾಗೂ ಬಿ.ಎಸ್ಸಿ ಸ್ನಾತಕ ಪದವಿಯ ಫಲಿತಾಂಶವು ಬಿಡುಗಡೆಗೊಳಿಸಿ ಬೀದರ ವಿಶ್ವವಿದ್ಯಾಲಯವು ಮಾದರಿಯಾಗಿದೆ. ಪರೀಕ್ಷೆಗಳು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಸುಸೂತ್ರವಾಗಿ ನಡೆದು ಕಡಿಮೆ ಅವಧಿಯಲ್ಲಿ ಫಲಿತಾಂಶ ಕೊಡುವುದು ಒಂದು ಸವಾಲಿನ ಕಾರ್ಯ. ಆದರೂ ಎಲ್ಲರ ಸಹಕಾರದೊಂದಿಗೆ ಇಂದು ಬಿ.ಬಿ.ಎ., ಬಿ.ಸಿ.ಎ., ಹಾಗೂ ಬಿ.ಎಸ್ಸಿ ಫಲಿತಾಂಶ ಹೊರಬಂದಿದ್ದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ಬೀದರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಅಧ್ಯಾಪಕರಾದ ಡಾ.ಚೆನ್ನಕೇಶವಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾಧನೆ ಜರುಗಿತು.

ಕೊಪ್ಪಳ.13.ಆಗಸ್ಟ್.25: ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾಧನೆ ಜರುಗಿತು. ಆರಾಧನೆಯ ಕೊನೆಯ ದಿನವಾಗಿದ್ದರಿಂದ ಮಧ್ಯಾಹ್ನ ನಡೆದ…

16 minutes ago

ಪದವಿ ಕಾಲೇಜು 310 ಪ್ರಾಂಶುಪಾಲರ ನೇಮಕಾತಿ ಶೀಘ್ರವೇ.

ಬೆಂಗಳೂರು.13.ಆಗಸ್ಟ.25:- ರಾಜ್ಯ ಸರ್ಕಾರ ಹೊಸ 310 ಪ್ರಾಂಶುಪಾಲರ ಹುದ್ದೆಗಳಿಗೆ  ಶೀಘ್ರವೇ ಅರ್ಹರಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ ಪ್ರಥಮ ದರ್ಜೆ ಕಾಲೇಜುಗಳಿಗೆ…

1 hour ago

ಅತಿಥಿ ಉಪನ್ಯಾಸಕರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

2025-26ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವ ವಿದ್ಯಾಲಯವು (ಯುವಿಸಿಇ)/…

2 hours ago

ಯುಜಿಸಿ ಕರಡು ನಿಯಮ ಪುನರ್‌ಪರಿಶೀಲನೆಗೆ ಆಗ್ರಹ

ಶಿಕ್ಷಣ ವ್ಯವಸ್ಥೆಯ ಬದಲಾವಣೆಯು ಗುಣಮಟ್ಟವನ್ನು ದುರ್ಬಲಗೊಳಿಸಬಾರದು. ಆದ್ದರಿಂದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತನ್ನ ಕರಡು ನಿಯಮಾವಳಿಗಳನ್ನು ಪುನರ್‌ ಪರಿಶೀಲಿಸಬೇಕು'…

10 hours ago

ಅಭಿ ಪಿಕ್ಚರ್ ಬಾಕಿ ಹೈ; ರಾಹುಲ್ ಗಾಂಧಿ ಹೇಳಿಕೆ ಕುತೂಹಲಕೆ ಕಾರಣ.

ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…

10 hours ago

ನವದೆಹಲಿ: ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ NHRC ಎರಡು ವಾರಗಳ ಆನ್‌ಲೈನ್ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇಂದು ನವದೆಹಲಿಯಲ್ಲಿ ತನ್ನ ಎರಡು ವಾರಗಳ ಆನ್‌ಲೈನ್ ಅಲ್ಪಾವಧಿಯ ಇಂಟರ್ನ್‌ಶಿಪ್…

10 hours ago