ಬೀದರ.12.ಮಾರ್ಚ.25:- ಇಂದು ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯ ಅನುಷ್ಠಾನ ಸಮಿತಿ ಬೀದರ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಪಾಲರಿಗೆ ಮನವಿ ಪತ್ರ ನೀಡಲಾಯಿತು, ಸುಮಾರು ದಿನಗಳಿಂದ ಬೀದರ ವಿಶ್ವವಿದ್ಯಾಲಯಕ್ಕೆ ಡಾ// ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಇಡುವಂತೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು,ಹೋರಾಟಗಾರರು,ಚಿಂತಕರ ಕೂಗಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ಬೀದರ್ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಕೂಡ ನಡೆಸಲಾಗಿತ್ತು,
ಸಾಮಾಜಿಕ ಜಾಲತಾಣಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿರುತ್ತದೆ, ಆದರೆ ಸರ್ಕಾರವು ಗಮನ ಕೊಡದೆ ಬೀದರ್ ವಿಶ್ವವಿದ್ಯಲಯಕ್ಕೆ ಡಾ// ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರು ಇಡುವುದಕ್ಕೆ ಹಿಂದೇಟು ಹಾಕುತ್ತಿದ್ದು,
ಪ್ರಸ್ತುತ ನಡೆಯುತ್ತಿರುವ ಅಧಿವೇಶನ ಮುಗಿವುದರ ಒಳಗಾಗಿ ಬೀದರ್ ವಿಶ್ವವಿದ್ಯಾಲಯಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಇಡುವಂತೆ ಮನವಿ ಮಾಡಲಾಯಿತು, ಈ ಸಮಿತಿಯ ಪ್ರಮುಖರಾದ ಮುಕೇಶ್ ಚಲ್ವಾ, ಭೀಮರಾವ ಮಾಲಗತ್ತಿ, ಪ್ರಥ್ವಿರಾಜ್ ಮುಧೋಳಕರ, ಸಿದ್ದಾರ್ಥ್ ಕೊಂಗಟನೂರ್, ದೇವರಾಜ್ ಜಾದವ್, ಸಿದ್ದಾರ್ಥ ಭಾವಿದೊಡ್ಡಿ , ನಿತೀಶ್ ಶಿಂದೆ ಇತರರಿದ್ದರು*
ಹೊಸ ದೆಹಲಿ.09.ಜೂನ್.25:- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ನಗರದ ಪರಿಸರವನ್ನು ಸುಧಾರಿಸಲು ಈ ಋತುವಿನಲ್ಲಿ 70 ಲಕ್ಷ ಮರಗಳನ್ನು…
ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…
ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…
ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…
ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…
ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…