ಬೀದರ | ನಾಳೆ ಲೋಕಾಯುಕ್ತ ಅಹವಾಲು ಸಭೆ.!

ಬೀದರ.05.ಏಪ್ರಿಲ್.25:- ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಠಾಣೆ ವತಿಯಿಂದ ಚಿಟಗುಪ್ಪಾ ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಿನಾಂಕ: 07-04-2025 ರಂದು ಬೆಳಿಗ್ಗೆ 10.30 ಗಂಟೆಗೆ ಚಿಟಗುಪ್ಪಾ ಪುರಸಭೆ ಸಭಾಂಗಣದಲ್ಲಿ ಸಾರ್ವಜನಿಕ ಕುಂದು ಕೊರತೆ/ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಬೀದರ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸಭೆಯಲ್ಲಿ ಸಾರ್ವಜನಿಕ ಸರ್ಕಾರಿ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸಗಳಲ್ಲಿ ವಿಳಂಭವಾಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯ ಸಮ್ಮತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ತೊಂದರೆ ಕೊಡುತ್ತಿದ್ದರೆ ಅಥವಾ ಭ್ರಷ್ಟಾಚಾರಕ್ಕೆ ಸಂಬoಧಿಸಿದ ದೂರುಗಳಿದ್ದಲ್ಲಿ ಈ ಸಭೆಗೆ ನೇರವಾಗಿ ಬಂದು ಅರ್ಜಿ ಸಲ್ಲಿಸಲು ಹಾಗೂ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳೊಂದಿಗೆ ಕೆಲಸ ನೆರವೇರಿಸಿಕೊಳ್ಳಲು ಅಥವಾ ಸ್ಥಳದಲ್ಲಿಯೇ ದೂರು ಅರ್ಜಿ ಫಾರಂ ನಂ. 1 ಮತ್ತು 2 ತೆಗೆದುಕೊಂಡು ದೂರು ನೀಡಲು ಅನುಕೂಲ ಕಲ್ಪಿಸಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಎಸ್.ಪಿ. (ಮೊ.9364062519),

ಡಿ.ಎಸ್.ಪಿ. (ಮೊ.9364062571), ಪಿಐ-1 (ಮೊ. 9364062672), ಪಿಐ-2 (ಮೊ.9364062673),

ಪಿಐ-3 (ಮೊ.9364062674)

ಹಾಗೂ ಪಿಐ-4 (ಮೊ.9364062675) ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

prajaprabhat

Recent Posts

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

8 minutes ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

5 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

11 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

11 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

11 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

11 hours ago