26 ನವೆಂಬರ24 ಬೀದರ:- ಇಂದು ಗಡಿ ಜಿಲ್ಲೆ ಬೀದರ ನಲ್ಲಿ ಮುಂಜಾನೆ 2.3 ತೀವ್ರತೆಯ ಲಘು ಭೂಕಂಪನ ಸಂಭವಿಸಿದೆ. ಅತಿ ಕಡಿಮೆ ತೀವ್ರತೆ ಮತ್ತು ಕನಿಷ್ಠ ಭೂಕಂಪನವಾಗಿರುವ ಕಾರಣ ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಜಾನೆ 4:20 ಕ್ಕೆ 2.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ Karnataka State Natural Disaster Monitoring Centre ದೃಢಪಡಿಸಿದೆ.
ಬೀದರ್ ಜಿಲ್ಲೆಯ ಈ ತಾಲೂಕಾ ಗಳಲಿ ಚಿತ್ತಗುಪ್ಪ ತಲಮಡಗಿ ಗ್ರಾಮ ಪಂಚಾಯಿತಿಯಿಂದ ಉತ್ತರಕ್ಕೆ 0.8 ಕಿಲೋಮೀಟರ್ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಾಗಿದೆ. ಇದು 17.77° N ಅಕ್ಷಾಂಶ ಮತ್ತು 77.28° E ರೇಖಾಂಶದೊಂದಿಗೆ ನಿರ್ದೇಶಾಂಕಗಳೊಂದಿಗೆ ಮೇಲ್ಮೈ ಕೆಳಗೆ 5 ಕಿಲೋಮೀಟರ್‌ಗಳಷ್ಟು ಆಳದಲ್ಲಿ ಸಂಭವಿಸಿದೆ.
ಭೂಕಂಪನವಾದ ಸ್ಥಳಗಳು:ಹುಮನಾಬಾದ್ ತಾಲೂಕಿನ ಸೀತಾಳಗೇರಾ ಗ್ರಾಮ ಪಂಚಾಯಿತಿಯಿಂದ ದಕ್ಷಿಣಕ್ಕೆ 2.7 ಕಿ.ಮೀ.ಚಿತ್ತಗುಪ್ಪ ತಾಲೂಕಿನ ಮಂಗಲಗಿ ಗ್ರಾಮ ಪಂಚಾಯಿತಿಯಿಂದ ವಾಯುವ್ಯಕ್ಕೆ 3.3 ಕಿ.ಮೀ.ಚಿತ್ತಗುಪ್ಪಾ ತಾಲೂಕು ಕೇಂದ್ರ ಕಛೇರಿಯಿಂದ ಈಶಾನ್ಯಕ್ಕೆ 10.4 ಕಿ.ಮೀ.
KSNDMC ಪ್ರಕಾರ, ಭೂಕಂಪನದ ತೀವ್ರತೆಯು ಕಡಿಮೆಯಾಗಿದೆ, ಭೂಕಂಪನವು ಅಧಿಕೇಂದ್ರದಿಂದ 20-30 ಕಿಲೋಮೀಟರ್ ತ್ರಿಜ್ಯದವರೆಗೆ ಸಂಭವಿಸಬಹುದು. ಅಂತಹ ಭೂಕಂಪಗಳು ಸಾಮಾನ್ಯವಾಗಿ ಸ್ವಲ್ಪ ಅಲುಗಾಡುವಿಕೆಗೆ ಕಾರಣವಾಗುತ್ತವೆ. ಸಮುದಾಯ ಅಥವಾ ಮೂಲಸೌಕರ್ಯಕ್ಕೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ. ಕೇಂದ್ರವು ಭೂಕಂಪನ ವಲಯ IIರಲ್ಲಿದೆ, ಅಲ್ಲಿ ಭೂಕಂಪಗಳಿಂದ ಹಾನಿಯಾಗುವ ಸಾಧ್ಯತೆ ಕಡಿಮೆಯಾಗಿದೆ. ಹೆಚ್ಚುವರಿಯಾಗಿ, ಟೆಕ್ಟೋನಿಕ್ ನಕ್ಷೆಯಿಂದ ದೃಢೀಕರಿಸಲ್ಪಟ್ಟಂತೆ ಪ್ರದೇಶವು ರಚನಾತ್ಮಕ ಸ್ಥಗಿತಗಳನ್ನು ಹೊಂದಿಲ್ಲ ಎಂದು Karnataka State Natural Disaster Monitoring Centre ಯ ನಿರ್ದೇಶಕರು ಮಾಹಿತಿ ಕೋಟಿದಾರೆ .
ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…
ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…
ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…
ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…
ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…