ಬೀದರನ ಗಾಂಧಿ ಗಂಜ – ಹೊಸ ಮಾದರಿ ಮಾರುಕಟ್ಟೆಯ ಅಗತ್ಯತೆ*

ಬೀದರ.19.ಏಪ್ರಿಲ್.25:- ಬೀದರದ APMC ಯಾರ್ಡ್, ಎಲ್ಲರಿಗೂ ಗೊತ್ತಿರುವಂತೆ, ನಾವು “ಗಾಂಧಿ ಗಂಜ” ಎಂದು ಕರೆಯುತ್ತೇವೆ. ಇದು ಬೀದರದ ಪ್ರಮುಖ ಕೃಷಿ ಮಾರುಕಟ್ಟೆ ಹಾಗೂ ಬೀದರನ ವಾಣಿಜ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದು, ಸುಮಾರು 30 ಎಕರೆ ಭೂಮಿಯಲ್ಲಿ ಸ್ಥಾಪಿತವಾಗಿದೆ. ಈ ಮಾರುಕಟ್ಟೆಗೆ ಇಂದಿಗೆ ಸುಮಾರು 70 ವರ್ಷಗಳ ಇತಿಹಾಸವಿದೆ.

ಆದಾಗಿನ ಅವಧಿಯಲ್ಲಿ ಇದ್ದ ಕೃಷಿ ಉತ್ಪನ್ನಗಳ ಆವಕ ಮತ್ತು ವ್ಯಾಪಾರಸ್ಥರ ಸಂಖ್ಯೆಯು, ಇಂದಿನ ಹೆಚ್ಚಿನ ವ್ಯಾಪಾರ ಚಟುವಟಿಕೆಗಳಿಗೆ ಹೋಲಿಕೆಯಾಗುವಂತಿಲ್ಲ. ಈ ದಿನಗಳಲ್ಲಿ ಮಾರುಕಟ್ಟೆಯ ವ್ಯಾಪ್ತಿ ಹೆಚ್ಚಾಗಿರುವುದರಿಂದ, ಸುಗ್ಗಿ ಕಾಲದಲ್ಲಿ ದೈನಂದಿನ ವ್ಯವಹಾರ ಸಮಯದಲ್ಲಿ ಇಡೀ ಪ್ರದೇಶ ತುಂಬಾ ಇಕ್ಕಟ್ಟಾದ ಸ್ಥಳವಾಗಿ ಮಾರ್ಪಡುತ್ತದೆ. ಕೆಲವೊಮ್ಮೆ ನಡೆಯಲು ಕೂಡ ಜಾಗವಿಲ್ಲದಂತಹ ಪರಿಸ್ಥಿತಿ ಎದುರಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಹೊಸ ಮಾದರಿಯ ಮಾರುಕಟ್ಟೆ ಅಭಿವೃದ್ಧಿಪಡಿಸುವ ಅಗತ್ಯತೆ ನಿಸ್ಸಂದೇಹವಾಗಿ ಬಹಳ ತೀವ್ರವಾಗಿದೆ. ಕಳೆದ ಒಂದು ದಶಕದಿಂದ ಈ ನಿಟ್ಟಿನಲ್ಲಿ ನಾವು ನಿರಂತರವಾಗಿ ಪ್ರಯತ್ನಿಸುತ್ತ, ಅವಶ್ಯಕ ಕ್ರಮಗಳು ಕೈಗೊಳ್ಳಬೇಕೆಂದು ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ.

ನೆನ್ನೆ, ಈ ವಿಷಯವನ್ನು ನಾನು ಮತ್ತೊಮ್ಮೆ ಬೀದರ ಉಸ್ತುವಾರಿ ಮಂತ್ರಿಗಳಾದ ಶ್ರೀ ಈಶ್ವರ ಖಂಡ್ರೆಯವರ ಸಮ್ಮುಖದಲ್ಲಿ ಬೀದರಗೆ ಭೇಟಿಕೊಟ್ಟ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಹಾಗು ಗೌರವಾನ್ವಿತ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದು, ಬೀದರಕ್ಕೆ ಹೊಸ ಮಾರುಕಟ್ಟೆಯ ಅಗತ್ಯತೆ ಹಾಗೂ ಅವಶ್ಯಕತೆಯ ಕುರಿತು ವಿವರವಾಗಿ ಪ್ರಸ್ತಾವನೆ ಸಲ್ಲಿಸಿದ್ದೇನೆ.

ಇನ್ನಾದರೂ ನೂತನ ಮತ್ತು ಸುಸಜ್ಜಿತ ಮಾರುಕಟ್ಟೆ ಸ್ಥಾಪನೆಯ ನಮ್ಮ ಬಹುಕಾಲದ ಕನಸು ನನಸಾಗಿ, ಈ ವರ್ಷ ಬೀದರನ ರೈತರಿಗೆ ಹಾಗು ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂಬ ಆಶಯ ಹೊಂದಿದ್ದೇವೆ.

prajaprabhat

Recent Posts

ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ

ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ…

3 minutes ago

ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಬೀಳಿಸುತ್ತಾರೆ: ಶ್ರೀರಾಮುಲು!

ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…

3 hours ago

ಚುನಾವಣಾ ಪ್ರಚಾರದಲ್ಲಿ AI ಬಳಕೆಯ ಬಗ್ಗೆ ಚುನಾವಣಾ ಆಯೋಗ ಎಚ್ಚರ : ಶೀಘ್ರವೇ ಮಾರ್ಗಸೂಚಿ ಪ್ರಕಟ.!

ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ  ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…

3 hours ago

ಕೆನಡಾದಲ್ಲಿ ಗುಂಡಿನ ಚಕಮಕಿ : 21 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವು.!

ಕೆನಡಾದಲ್ಲಿ.19.ಏಪ್ರಿಲ್.25:- ಭಾರತೀಯ ವಿದ್ಯಾರ್ಥಿ ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ…

3 hours ago

ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ…

3 hours ago

2030 ರ ವೇಳೆಗೆ ಭಾರತದ ರಕ್ಷಣಾ ರಫ್ತು 50,000 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಹೊಸ ದೆಹಲಿ.19.ಏಪ್ರಿಲ್.25:- ೨೦೩೦ ರ ವೇಳೆಗೆ ಭಾರತದ ರಕ್ಷಣಾ ರಫ್ತು ೫೦,೦೦೦ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ…

6 hours ago