ಬೀದರ.27.ಮೇ.25:- ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾದ ಆಪರೇಷನ್ ಅಭ್ಯಾಸ ಹೆಸರಿನ ಅಣಕು ಪ್ರದರ್ಶನ ಯಶಸ್ವಿ ನಿರ್ವಹಣೆಗೊಂಡಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.
ಇವರು ಶನಿವಾರ ಬೀದರ ನಗರದ ರೈಲ್ವೆ ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ರಕ್ಷಣಾ ಅಣಕು ಪ್ರದರ್ಶನ ಯಶಸ್ವಿ ಕುರಿತು ಮಾತನಾಡಿದರು.
ಸಂಜೆ 4:30ಕ್ಕೆ ಬಾಂಬ್ ಬ್ಲಾಸ್ಟ್ ಮಾಡಿದ ನಂತರ ಮೊದಲ ತುರ್ತು ಪರಿಸ್ಥಿತಿ ಎಚ್ಚರಿಕೆ ಸೈರನ್ ಶಬ್ದ ಮೊಳಗಿಸಲಾಯಿತು. ಎರಡನೇ ಸೈರನ್ ಶಬ್ದವು ಬೆಂಕಿ ಅವಘಡ ಸಂಭವಿಸಿದ ನಂತರ ಮೊಳಗಿಸಲಾಯಿತು.
ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಆರೋಗ್ಯ ಇಲಾಖೆಯಿಂದ ತುರ್ತಾಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೈಲ್ವೆ ನಿಲ್ದಾಣದ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸಾ ಕೇಂದ್ರ ಸ್ಥಾಪನೆ, ಕಾಳಜಿ ಕೇಂದ್ರ ಹಾಗೂ ಕಮಾಂಡಿoಗ್ ಸೆಂಟರ್ ರೂಮ್ ತೆರೆದು ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು.
ತುರ್ತು ಪರಿಸ್ಥಿತಿ ವೇಳೆ ವಿವಿಧ ಇಲಾಖೆಗಳಿಂದ ಯಾವ ರೀತಿ ಕಾರ್ಯ ನಿರ್ವಹಣೆ ಮಾಡಬೇಕು ಮತ್ತು ಸಾರ್ವಜನಿಕರು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ತಿಳಿಯಲು ಬೇರೆ ಬೇರೆ ಇಲಾಖೆಗಳು ಮತ್ತು ಭದ್ರತಾ ಪಡೆಯ ತಂಡಗಳು ಹೇಗೆ ಕಾರ್ಯನಿರ್ವವಣೆ ಮಾಡಬೇಕು ಎಂದು ತೋರಿಸಲಾಯಿತು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾತನಾಡಿ, ತುರ್ತು ಪರಿಸ್ಥಿತಿ ವೇಳೆ ನಾಗರಿಕರು ಮತ್ತು ವಿವಿಧ ಇಲಾಖೆಗಳು ಕಾರ್ಯನಿರ್ವಹಿಸಬೇಕು ಮತ್ತು ನಾಗರಿಕರು ತುರ್ತು ಪರಿಸ್ಥಿತಿಯಲ್ಲಿ ಭಯಪಡದೆ ಅದನ್ನು ಹೇಗೆ ಎದುರಿಸಬೇಕು ಎಂದು ತಿಳಿಸಿದರು.
ಈ ಅಣಕು ಪ್ರದರ್ಶನ ಪ್ರದರ್ಶನದಲ್ಲಿ ರೈಲ್ವೆ ಪೊಲೀಸರು ಮತ್ತು ಸಿಬ್ಬಂದಿಗಳು ಸಂಪೂರ್ಣ ಸಹಯೋಗ ನೀಡಿದರು. ಪೋಲಿಸ್ ಇಲಾಖೆಯಿಂದ 300 ಪೋಲಿಸರು ಭಾಗವಹಿಸಿದ್ದರು.
ಈ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾAತ ಪೂಜಾರಿ, ಬೀದರ ಉಪವಿಭಾಗಾಧಿಕಾರಿ ಎಮ್.ಡಿ ಶಕೀಲ್, ಕೆ.ಎಸ್.ಆರ್.ಟಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಶ್ವನಾಥ ಪುಲೇಕರ, ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಅಧಿಕಾರಿ ಧ್ಯಾನೇಶ್ವರ ನಿರಗುಡೆ, ಜಿಲ್ಲಾ ಶಸ್ತ್ರ ಚಿಕಿತ್ಸಾ ಅಧಿಕಾರಿ ಅಹಮದ್, ಜಿಲ್ಲಾ ಅಗ್ನಿಶಾಮಕ ಠಾಣಾಧಿಕಾರಿ ಎಮ್.ಡಿ. ಮುಜಾಮಿಲ್ ಪಟೇಲ್, ಜಿಲ್ಲಾ ಗೃಹರಕ್ಷಕ ದಳದ ಅಧಿಕಾರಿ ಮನೋಜಕುಮಾರ ಪಾಟೀಲ, ಬೀದರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ರಮೇಶ್ ಶಿರಪತಿ, ಲಿಂಗಾನAದ, ಮುಜಿಬ್, ಮನೋಜ್ ಕುಮಾರ್, ಕುಂದನ್ ಕೂಮಾರ, ಆರ್.ಪಿ.ಎಫ್. ಇನ್ಸ್ಪೆಕ್ಟರ್ ಪ್ರಸಾದ್, ಂSI ಸುಧೀರ್ ರೆಡ್ಡಿ, ಜಿಲ್ಲಾಧಿಕಾರಿ ಕಚೇರಿ ವಿಪತ್ತು ನಿರ್ವಹಣಾ ಪರಿಣೀತರಾದ ಸಂದಿಪ್ ಪಾಟೀಲ್, ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ರಾಜಕುಮಾರ ಮಾಳಗೆ ಸೇರಿದಂತೆ ಗೃಹರಕ್ಷಕ ದಳ, ನರ್ಸಿಂಗ್ ವಿದ್ಯಾರ್ಥಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಂಗಳೂರು.08.ಆಗಸ್ಟ್.25:- ಈ ಸಲ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಈ ನಕಲಿ PhD ಗಳ ಹಾವಳಿ ಜಾಸ್ತಿಯಾಗಿದೆ ನಕಲಿ ಪಿಎಚ್‌ಡಿ ಹೊಂದಿರುವ…
ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.…
ಕೊಪ್ಪಳ.07.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ…
ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ…
ರಾಯಚೂರು.07.ಆಗಸ್ಟ್.25: ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು…
ರಾಯಚೂರು.07.ಆಗಸ್ಟ್ .25: ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ…