ಬೀದರ.18.ಫೆಬ್ರುವರಿ.25:- ಬೀದರ್ ಜಿಲ್ಲೆಯ ಔರಾದ ಭಾಲ್ಕಿ ಹುಮನಾಬಾದ್ ಬೀದರ ಚಿಟ್ಟಿಗುಪ್ಪಾ ಹಲಸೂರು ಕಮಲನಗರ್ ಮತ್ತು ಬಸವಕಲ್ಯಾಣ.ಜಿಲ್ಲೆಯ ಪೂರ್ತಿ ಗುಡಿಸಲು ಮುಕ್ತ ಮಾಡುವುದು ನಮ್ಮ ಗುರಿ ಹಿನ್ನೆಲೆಯಲ್ಲಿ ಮುತುವರ್ಜಿವಹಿಸಿ ಈ ಬಾರಿ 50 ಸಾವಿರ ಮನೆ ಮಂಜೂರು ಮಾಡಿಸಿದ್ದೇನೆ.
ಇನ್ನು ಹೆಚ್ಚಿನ ಮನೆಗಳನ್ನು ಒದಗಿಸುವಂತೆ ಕೇಂದ್ರ ವಸತಿ ಸಚಿವ ಶಿವರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ.
ಈ ಹಿಂದೆ ಭಾಲ್ಕಿಯನ್ನು ಗುಡಿಸಲು ಮುಕ್ತ ಮಾಡಲು ತಂದೆಯವರಾದ ಈಶ್ವರ್ ಖಂಡ್ರೆ ಅವರು 25 ಸಾವಿರ ಮನೆ ಮಂಜೂರು ಮಾಡಿಸಿದ್ದರು ಎಂದು ಬೀದರ ಲೋಕಸಭಾ ಸಂಸದರಾದ ಸಾಗರ ಈಶ್ವರ ಖಂಡ್ರೆ ಹೇಳಿದರು.
ಅವರು ಇಂದು ಭಾಲ್ಕಿ ತಾಲ್ಲೂಕಿನ ಲಂಜವಾಡ ಗ್ರಾಮದಲ್ಲಿ ರಾಜೀವ ಗಾಂಧಿ ವಸತಿ ನಿಗಮ (ನಿ) ಬೆಂಗಳೂರು ಜಿಲ್ಲಾಡಳಿತ ಮತ್ತ ಜಿಲ್ಲಾ ಪಂಚಾಯತ ಬೀದರ “ಆವಾಸ್ ಪ್ಲಸ್ 2024 ಯ್ಯಾಪ್ ಮೂಲಕ ವಸತಿ, ನಿವೇಶನ ರಹಿತರ ಸಮೀಕ್ಷೆಗೆ ಚಾಲನೆ” ಹಾಗೂ ವಸತಿ “ನಿವೇಶನ ಸೌಲಭ್ಯ ಪಡೆಯುವ ಸುವರ್ಣಾವಕಾಶ” ಮತ್ತು ಡಾ. ಬಿ.ಆರ್.
ಅಂಬೇಡ್ಕರ ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ತಿಳುವಳಿ ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಮಧ್ಯವರ್ಥಿಗಳ ಹಾವಳಿ ಇಲ್ಲದೆ ವಸತಿ ರಹಿತರಿಗೆ ವಸತಿ ಒದಗಿಸುವ ಉದ್ದೇಶದಿಂದ ಪ್ರದಾನಮಂತ್ರಿ ಅವಾಸ್ ವಸತಿ ಯೋಜನೆ ಗ್ರಾಮೀಣ ಅಡಿಯಲ್ಲಿ ಆವಾಸ್ ಪ್ಲಸ್ 2024 ಯ್ಯಾಪ್ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ಯ್ಯಾಪ್ ಮೂಲಕ ಸಮೀಕ್ಷೆ ನಡೆಸಿ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಯಾರಿಗೆ ಮನೆ ಇಲ್ಲವೋ ಅವರು ಈ ಯ್ಯಾಪ್‌ನಲ್ಲಿ ತಮ್ಮ ಮಾಹಿತಿ ಒದಗಿಸಬೇಕು.
ಈಗಾಗಲೇ ಲಂಜವಾಡ ಗ್ರಾಮ ಪಂಚಾಯತಿಯ ಸೋಂಪುರ್ ಗ್ರಾಮದ ಫಲಾನುಭವಿಯಾದ ಗಾಯಬಾಯಿ ಆನಂದಗೀರಿಯವರ ಮಾಹಿತಿಯನ್ನು ಆವಾಸ್ ಫ್ಲಸ್ ಯ್ಯಾಪ್‌ನಲ್ಲಿ ಸೇರಿಸಲಾಗಿದೆ ಇವರು ಈ ಆವಾಸ್ ಫ್ಲಸ್ ಯ್ಯಾಪ್‌ನಲ್ಲಿ ಸೇರಿಸಲಾದ ಜಿಲ್ಲೆಯ ಮೊದಲ ಫಲಾನುಭವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಲಂಜವಾಡ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ್ ಬದೋಲೆ ಮಾತನಾಡಿ, ನೆಚ್ಚಿನ ಸಂಸದರಾದ ಸಾಗರ ಖಂಡ್ರೆ ಅವರು ಹೆಚ್ಚು ಮುತ್ತುವರ್ಜಿ ವಹಿಸಿ ಈ ಬಾರಿ 40 ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ಮಂಜುರು ಮಾಡಿಸಿದ್ದಾರೆ.
ಅದೇ ರೀತಿ ಬಸವ ವಸತಿ ಯೋಜನೆಯಡಿ 758 ಹಾಗೂ ಡಾ.ಬಿ. ಆರ್. ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 1000 ಸಾವಿರ ಮನೆಗಳು ಮಂಜೂರು ಆಗಿವೆ.
ಈ ಹಿಂದೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತಿದ್ದವು. ಸರ್ಕಾರ ಈ ಗೊಂದಲಗಳ ನಿವಾರಣೆಗೆ ಆವಾಸ್ ಪ್ಲಸ್ 2024 ಯ್ಯಾಪ್ ಜಾರಿಗೆ ತಂದಿದ್ದು ಇದರ ಮೂಲಕ ಸಮೀಕ್ಷೆ ನಡೆಸುವಂತೆ ಸರ್ಕಾರ ಆದೇಶ ನೀಡಿದೆ ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಬAಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದು ಅಧಿಕಾರಿಗಳು ಯಾವುದೇ ನ್ಯೂನ್ಯತೆ ಇಲ್ಲದೆ ಸಮೀಕ್ಷೆ ಮಾಡಬೇಕು ಜನರು ಸಹ ಅಧಿಕಾರಿಗಳಿಗೆ ಸಾಹಕಾ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಬಸವ ವಸತಿ ಯೋಜನೆಯಡಿ ಆಯ್ಕೆಯಾದ 91 ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ವಿತರಣೆ ಮಾಡಲಾಯಿತು.
ಹಾಗೂ ಆವಾಸ್ ಪ್ಲಸ್ ಯ್ಯಾಪ್ 2024 ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಿಕಾ ಶುಕ್ರಚಾರ್ಯ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಭಾಲ್ಕಿ ತಾಲೂಕಾ ಅಧ್ಯಕ್ಷ ಹಣಮಂತ ಚೌವ್ಹಾಣ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ಭಾಲ್ಕಿ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್, ಭಾಲ್ಕಿ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೆರೆ, ಭಾಲ್ಕಿ ಕೃಷಿ ಇಲಾಖೆಥಿಯ ಸಹಾಯಕ ನಿರ್ದೇಶಕ ಪಿ. ಎಂ ಮಲ್ಲಿಕಾರ್ಜುನ, ಭಾಲ್ಕಿ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಕಾಮರಾಯ ಜಗ್ಗಿನವರ, ಕಾರ್ಮಿಕ ನಿರೀಕ್ಷಕ ಮಂಜುನಾಥ ಹದಗುಂಡಿ, ಮೈನಾರಟಿ ಅಧಿಕಾರಿ, ತೋಟಗಾರಿಕೆ ಎಸ್.ಡಿ.ಎಚ್ ಮಾರುತಿ ಲಂಜವಾಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವದೀಪ, ಲಂಜವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಸೂರ್ಯಕಾಂತ್ ಅಹ್ಮದಾಬಾದೆ, ರಾಜಕುಮಾರ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಂಗಳೂರು.06.ಆಗಸ್ಟ್.25:- ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ 2ದಶಕದಿಂದ ನಿರಂತರವಾಗಿ ಕಾರ್ಯ ನಿರ್ವ ನಿರ್ವಹಿದಾರೆ ಆದರೆ …
ಕೊಪ್ಪಳ.06.ಆಗಸ್ಟ್.25: ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಕುಟುಂಬ ಸದಸ್ಯರೊಂದಿಗೆ ಹನುಮಂತನ ಜನ್ಮಸ್ಥಳವೆಂದೆ…
ಚಾಮರಾಜನಗರ.06.ಆಗಸ್ಟ್ .25:- ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಂಗಳವಾರ 2022 -2025 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ…
ಬೆಂಗಳೂರು.06.ಆಗಸ್ಟ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ನಕಲಿ M.Phil ಮತ್ತು PH.D…
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…