ಬೀದರ | ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಆಗ್ರಹ.!

ಬೀದರ.20.ಮಾರ್ಚ.25:- ಇಂದು ಅತಿಥಿ ಉಪನ್ಯಾಸಕರು ಸತತ 2 ದಶಕ ಸೇವೆ ಸಲ್ಲಿಸುತ್ತಿದ್ದಾರೆ ಅದರೆ ರಾಜ್ಯ ಸರ್ಕಾರ ಸೇವೆ ಕಾಯಂಗೊಳಿಸಬೇಕು  ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.

ರಾಜ್ಯ ಸರ್ಕಾರ ಪಾಲಿಟೆಕ್ನಿಕ್‍ಗಳಿಗೆ ಎರಡು ಸಾವಿರ ಪೂರ್ಣಾವಧಿ ಉಪನ್ಯಾಸಕರ ನೇಮಕಕ್ಕೆ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಈ ಪೈಕಿ 1,600 ಹುದ್ದೆಗಳಿಗೆ ಮಾನವೀಯತೆ ಆಧಾರದಲ್ಲಿ ಈಗಾಗಲೇ ರಾಜ್ಯದ 102 ಪಾಲಿಟೆಕ್ನಿಕ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಕಾಯಂಗೊಳಿಸಬೇಕು.

ಉಳಿದ 400 ಹುದ್ದೆಗಳಿಗೆ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.

ಅತಿಥಿ ಉಪನ್ಯಾಸಕರ ಪೈಕಿ ಹಲವರ ವಯೋಮಿತಿ ಮೀರಿದೆ. ಇನ್ನೂ ಕೆಲವರ ವಯೋಮಿತಿ ಮೀರುವ ಹಂತದಲ್ಲಿದೆ. ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಹುದ್ದೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಸಂಘದ ರಾಜ್ಯ ಅಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ವಾಲಿ, ಜಂಟಿ ಕಾರ್ಯದರ್ಶಿ ಸಂತೋಷ್ ಲದ್ದೆ, ಪ್ರಮುಖರಾದ ಎಂ.ಡಿ. ಯುನೂಸ್, ಸಂದೀಪ್ ಕುಲಕರ್ಣಿ, ಸಚಿನ್ ಚಿಟ್ಮೆ, ಹುಸ್ನಾ ಜಬೀನ್, ನಜ್ಮಾ ಆಫ್ರೀನ್, ಕೀರ್ತಿ, ಗೋದಾವರಿ ಮತ್ತಿತರರು ಹಾಜರಿದ್ದರು.

prajaprabhat

Recent Posts

ರಾಜ್ಯದಲ್ಲಿ ನಾಳೆಯಿಂದ ಭಾರೀ ಮಳೆ’ ಈ ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ

ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…

2 hours ago

ಪರಿಶಿಷ್ಟ ಜಾತಿ ಒಳ ಮೀಸಲಾತಿ’ ಸಮೀಕ್ಷಾ ಅವಧಿ ಜೂನ್ 22 ರವರೆಗೆ ವಿಸ್ತರಣೆ

ಬೆಂಗಳೂರು.09.ಜೂನ್.25:- ನ್ಯಾಯಮೂರ್ತಿ ಡಾ:ಹೆಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗ ರಾಜ್ಯ ಸರ್ಕಾರದಿಂದ 'ಪರಿಶಿಷ್ಟ ಜಾತಿ ಒಳ ಮೀಸಲಾತಿ' ಸಮೀಕ್ಷಾ ಕಾರ್ಯ…

2 hours ago

ಗ್ರೇಟಾ ಥನ್‌ಬರ್ಗ್ ಅವರ ಸಹಾಯ ದೋಣಿ ಗಾಜಾ ಪ್ರವೇಶಿಸುವುದನ್ನು ತಡೆಯುವುದಾಗಿ ಇಸ್ರೇಲ್ ಭರವಸೆ ನೀಡಿದೆ 08 ಜೂನ್, 2025 ರಾಷ್ಟ್ರೀಯ<br>

ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಅಂತರರಾಷ್ಟ್ರೀಯ ಕಾರ್ಯಕರ್ತರು ಮತ್ತು ಮಾನವೀಯ ನೆರವಿನೊಂದಿಗೆ ಗಾಜಾ ಪಟ್ಟಿಗೆ ಪ್ರವೇಶಿಸುವ ದತ್ತಿ…

3 hours ago

2025-26ನೇ ಸಾಲಿಗೆ ಪದವಿ ಪೂರ್ವ ಕಾಲೇಜುಗಳಲ್ಲಿ ವಿಷಯವಾರು ಹುದ್ದೆಗಳು ಖಾಲಿ ಇಂದೇ ಅರ್ಜಿ ಹಾಕಿ.

ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2025-26ನೇ ಸಾಲಿಗೆ ವಿಷಯವಾರು ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳು ನೇಮಕ ಮಾಡಿಕೊಳ್ಳಲು…

3 hours ago

UGC-NET ಜೂನ್ 2025 ರ ಪರೀಕ್ಷಾ ವೇಳಾಪಟ್ಟಿ ಮತ್ತು  ನೋಂದಣಿ

ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…

9 hours ago

ಬೀದರ್‌’ನಲ್ಲಿ ಮೀನು ನುಂಗಿ ರೋಗ ಗುಣಮುಖ ವಿಶಿಷ್ಟ ಆಚರಣೆ

ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…

11 hours ago