ಚಾಮರಾಜನಗರ.11.ಮೇ.25:- ಯಳಂದೂರು: ತಾಲ್ಲೂಕಿನ ಪ್ರಸಿದ್ದಯಾತ್ರ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರವಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಶನಿವಾರ ಮಹಾ ಬ್ರಹ್ಮರಥೋತ್ಸವವು ಭಾರೀ ಜನಸ್ತೋಮದೊಂದಿಗೆ ವಿಜೃಂಭಣೆಯಿಂದ ಜರುಗಿತು.
ರಥವನ್ನು ವಿವಿಧ ಹೂ ಗಳಿಂದ ಹಾಗೂ ಬಣ್ಣ ಬಣ್ಣದ ಬಟ್ಟೆಯ ತೋರಣಗಳಿಂದ, ಬಾಳೆದಿಂಡು, ಕಬ್ಬುಗಳಿಂದ ಹಾಗೂ ಹೊಂಬಾಳೆಗಳನ್ನು ಇಟ್ಟು ಅಲಂಕರಿಸಿದರು.
ನೋಡುಗರನ್ನು ತನ್ನತ್ತ ಸೆಳೆಯುತ್ತಿತ್ತು.
ಶ್ರೀರಂಗನಾಥಸ್ವಾಮಿಯ ಮೂರ್ತಿಯನ್ನು ಗಿರಿಯಿಂದ ವಿವಿಧ ಹೂ, ಹೊಂಬಾಳೆಗಳಿಂದ ಅಲಂಕರಿಸಿ ಹೊತ್ತು ತಂದು ರಥದೊಳಗೆ ಕೂರಿಸಿದರು.
ಮಹಾ ರಥಕ್ಕೆ ಶಾಸಕ ಎ ಆರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಪೋಲೀಸ್ ವರಿಷ್ಠಾಧಿಕಾರಿ ಕವಿತಾ ರವರು ವಿವಿಧ ಪೂಜೆ ಕೈಂಕರ್ಯಗಳನ್ನು ನೆರವೇರಿಸಿ ಚಾಲನೆ ನೀಡಿದರು
ಇಲ್ಲಿನ ವಿಶೇಷವೆಂದರೆ ಗರುಡು ರಥ ಸುತ್ತಲೂ ಮೂರು ಬಾರಿ ಪ್ರದರ್ಶನ ಮಾಡಿದರೆ ರಥೋತ್ಸವ ಜರುಗುತ್ತದೆ.
ಮಧ್ಯಾಹ್ನ 11.30 ಕ್ಕೆ ಗರುಡ ಪ್ರತ್ಯಕ್ಷವಾಗಿ ಮೂರು ಬಾರಿ ಪ್ರದಕ್ಷಿಣೆ ಮಾಡಿತು ನಂತರ ಭಕ್ತರು ದೇವರಿಗೆ ಘೋಷಣೆ ಗೂಗುತ್ತ ಬ್ರಹ್ಮ ರಥೋತ್ಸವನ್ನು ಎಳೆದರು . ಭಕ್ತರು ಗೋವಿಂದ ಗೋವಿಂದ ಎಂದು ಕೂಗಿ ಎಳೆದರು.
ನವ ದಂಪತಿಗಳು ಹಣ್ಣು ಜವನವನ್ನು ಎಸೆದು ಸಂತಸ ಪಟ್ಟರು.
ಸುಮಾರು 40 ಸಾವಿರಕ್ಕೂ ಹೆಚ್ಚು ಅಂದರೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದರು. ರಥದ ಬೀದಿ ಸಂಪೂರ್ಣವಾಗಿ ಭಾರೀ ಜನರಿಂದ ತುಂಬಿತು.
ಗಿರಿಜನರು ಸಾಂಪ್ರದಾಯಿಕವಾದ ಪೂಜೆ ಸಲ್ಲಿಸಿದರು.
ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಥೋತ್ಸವವು ಮುಕ್ತಾಯಗೊಂಡಿತು. ಭಕ್ತಾದಿಗಳಿಗೆ ಅಲ್ಲಲ್ಲಿ ನೀರುಮಜ್ಜಿಗೆ, ಪಾನಕ, ಕೋಸಂಬರಿ, ವಿತರಣೆ ನಡೆಯಿತು. ಕೆಲವು ಕಡೆ ಅನ್ನಸಂತರ್ಪನೆ ಕೂಡ ನಡೆಯಿತು.
ದೇವಾಲಯದ ಸುತ್ತಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀರಂಗನಾಥಸ್ವಾಮಿಯ ದರುಶನ ಪಡೆದರು. ದೇವಾಲಯದ ಆವರಣದಲ್ಲಿ ಭಕ್ತರು ಹಣ್ಣು ಕಾಯಿ ಇಟ್ಟು ಪೂಜೆಮಾಡಿದರು. ದಾಸಯ್ಯನವರು ಬ್ಯಾಟಮನಿ ಸೇವೆಮಾಡಿ ಶ್ರೀರಂಗನನ್ನು ನೆನೆದರು.
ಭಕ್ತಾದಿಗಳಿಗೆ ಬೆಟ್ಟದ ಮೇಲಿರುವ ದಾಸೋಹದಲ್ಲಿ ಅನ್ನಸಂತರ್ಪನೆ ನಡೆಯಿತು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಮಹೇಶ್, ತಹಶೀಲ್ದಾರ್ ಬಸವರಾಜ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಬಿಳಿಗಿರಿರಂಗನ ಬೆಟ್ಟದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜೆ, ಶ್ರೀನಿವಾಸ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್, ಇನ್ಸ್ ಪೆಕ್ಟರ್ ಆಕಾಶ್, ಪೋಲೀಸ್ ಸಿಬ್ಬಂದಿಗಳಾದ ಜಡೇಸ್ವಾಮಿ,ಸತೀಶ್, ಮಹೇಶ್, ನಂಜುಂಡಸ್ವಾಮಿ, ಹಾಜರಿದ್ದರು
ಪೋಲೀಸ್ ಇಲಾಖೆ. ಅರಣ್ಯ ಇಲಾಖೆ, ಸಾರಿಗೆ ಇಲಾಖೆ, ತುಂಬಾ ಶ್ರಮವಹಿಸಿದರು.
( ಜಾತ್ರೆಯಲ್ಲಿ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳಾದ ಸಾರ್ವಜನಿಕ ಶೌಚಾಲಯ ಕೊರತೆ, ಕುಡಿಯುವ ನೀರಿನ ಕೊರತೆ, ಭಕ್ತಾದಿಗಳಿಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇಲ್ಲದಿರುವುದು, ರಥೋತ್ಸವ ಮುಗಿದ ಮೇಲೆ ಬಸ್ ಕೊರತೆಯಿಂದ ಜನರು ತಡವಾಗಿ ಬಂದರು.
400 ಕ್ಕೂ ಹೆಚ್ಚು ಪೋಲೀಸ್ ಭದ್ರತೆಯಲ್ಲಿ ಜಾತ್ರೆ ಯಶಸ್ವಿಯಾಗಿ ನಡೆಯಿತು.
ಅಲ್ಲಲ್ಲಿ ನೀರು ಮಜ್ಜಿಗೆ ಪಾನಕ ಕೋಸಂಬರಿ ವಿತರಣೆ ಮಾಡಲಾಯಿತು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…
ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…
ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…
ಬೆಂಗಳೂರು.10.ಆಗಸ್ಟ್.25:- ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ…
ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…
ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…