ಬಾವಗಿ ಗ್ರಾಮದಲ್ಲಿ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ.!

ಬೀದರ.14.ಫೆಬ್ರುವರಿ.25:-ಕುಷ್ಠರೋಗವು ಒಂದು ಸಾಮಾನ್ಯ ಕಾಯಿ¯ಯಂತೆ ಇದುವು ಒಂದು ಸಾಕ್ರಮೀಕ ರೋಗವಾಗಿದ್ದು, ಈ ರೋಗವು ಮೈಕೋಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಕಾಯಿಲೆಯಾಗಿದ್ದು ಕುಷ್ಠರೋಗದ ಬ್ಯಾಕ್ಟಿರಿಯಾಗಳು ಚಿಕಿತ್ಸೆ ಪಡೆಯದ್ದೆ ಇರುವ ಕುಷ್ಠರೋಗಿಯ ಕೆಮ್ಮಿದಾಗ ಕಫದ ಮೂಲಕ ಹೊರಬಂದು ಗಾಳಿಯ ಮೂಲಕ ಆರೋಗ್ಯವಂತರ ಶರೀರದಲ್ಲಿ ಪ್ರವೇಶಿಸಿ ರೋಗ ಹರಡುತ್ತದೆ.

ಈ ರೋಗವು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಭಂಧಪಟ್ಟಿದರಿಂದ ಈ ರೋಗದಿಂದ ಅಂಗವಿಕಲತೆಯನ್ನು ಉಂಟಾಗುವುದರಿಂದ ಈ ರೋಗಕ್ಕೆ ಸಾಮಾಜಿಕ ಕಳಂಕ ಅಂಟಿದೆ ಎಂದು ಬೀದರ ಜಿಲ್ಲಾ ಕುಷ್ಠರೋಗ ಅಧಿಕಾರಿಗಳ ಕಾರ್ಯಲಯಾದ ಮೆಲ್ವಿಚಾರಕರಾದ ವೀರಶೇಟ್ಟಿ ಚೆನಶೇಟ್ಟಿ   ಅವರು ಹೇಳಿದರು.


ಅವರು ಇಂದು ಬೀದರ ತಾಲ್ಲೂಕಿನ ಬಾವಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಕುಷ್ಠರೋಗವು ಮುಖ್ಯವಾಗಿ ನರ ಮತ್ತು ಚರ್ಮದ ಕಾಯಿಲೆ.ಸ್ಪರ್ಶ ಜ್ಞಾನ ನೋವು ನವೆ ಅಲ್ಲದೆ ತಿಳಿ ತಾಮ್ರ ಅಥವಾ ಬಿಳುವಾದ ಮಚ್ಚೆಗಳು ಕೈ ಕಾಲುಗಳು ಜೋಮು ಉಂಟಾಗುವುದು.

ಮುಖ ಅಥವಾ ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಮತ್ತು ಎಣ್ಣೆ ಸವರಿಸುವಂತೆ ಚರ್ಮ ಕಾಣಿಸುವುದುಪ್ರಥಮ ಹಂತದಲ್ಲಿ ಈ ರೋಗಲಕ್ಷಣಗಳು ಕಂಡುಬಂದಲ್ಲಿ ತಮ್ಮ ಹತ್ತಿರದ ಸರಕಾರಿ ಆಸ್ಪತ್ರೆಯವೈಧ್ಯಧಿಕಾರಿಗಳಿಗೆ ಭೇಟಿಯಾಗಿ ಪರಿಕ್ಷೀಸಿಕೋಳ್ಳಿ ರೊಗ ದ್ರಡಪಟ್ಟಲಿ ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ವಾಗಿ ಸಿಗುವ ಬಹು ಔಷಧಿ ಚಿಕಿತ್ಸೆ ಪಡೆಯುವುದರಿಂದ ಅಂಗವಿಕಲತೆ ತಡೆಯಬಹುದು,ಈ ರೋಗವು ಶ್ರೀಮಂತರು- ಬಡವರು ಹೆಂಗಸರು-ಗಂಡಸರು ಅವಿದ್ಯಾವಂತರು, ಹಳ್ಳಿ-ಪಟ್ಟಣ ಎಂಬ ಭೇದ ಭಾವವಿಲ್ಲದೆ ಯಾರಿಗಾದರೂ ಬರಬಹುದು.

ಈ ರೋಗವು ವಂಶಾಪಾರಂಪರ್ಯವಲ್ಲ. ರೋಗವು ಪಾಪ-ಶಾಪಗಳಿಂದ ಬರುವುದಿಲ್ಲ ಎಂದು ಹೇಳಿದರು.


ಈ ಸಂದರ್ಭದಲ್ಲಿ ಸಂಗೋಳಗಿ ಗ್ರಾಮ ಪಂಚಾಯತ ಅಧ್ಯಕ್ಷ ಶಾಂತವೀರ ಹಜ್ಜರಿಗ, ಸದಸ್ಯರಾದ ಸಂಗಮೇಳ ಹಜ್ಜರಿಗ, ಬಾವಗಿ ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯ ಮುಖ್ಯ ಗುರುಗಳಾದ ಸಂಗಪ್ಪಾ ಹೂಗಾರ, ಕಮಠಾಣ ಪ್ರಾ.ಆ,ಕೇಂದ್ರದ ಸಿಬ್ಬಂದಿಗಳಾದ ರೇವಣಸಿದ್ದ ಸಿದ್ಧಾರೂಢ ಭಾಲ್ಕೆ, ಬೀದರ ತಾಲೂಕಿನ ಡಿ.ಎನ್.ಟಿ. ಮೇಲ್ವಿಚಾರಕರಾದ ಮಹಮ್ಮದ ಅಫಜಲೋದ್ದನ್ ಅಳಂದಕರ, ಶಿಕ್ಷಕರಾದ ಮಹಮ್ಮದ ಮೈಹುದ್ದಿನ್, ಪ್ರಲಾದ ಕುಮಾರ, ಸುಜನ ರಾಣಿ ಹಾಗೂ ಶಾಲೆಯ ಮಕ್ಕಳು, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರಾದ ರಾಜೇಶ್ವರಿ ಸ್ವಾಗತವನ್ನು ಕೋರಿದರು. ಶಾಲೆಯ ಸಹ ಶಿಕ್ಷಕರಾದ ದೋಂಡ್ಡಿಬಾ ಕಾರ್ಯಕ್ರಮ ನಡೆಸಿಕೊಟ್ಟರು.

prajaprabhat

Recent Posts

ಸ್ಟಡಿ ಅಬ್ರಾಡ್’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…

35 minutes ago

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರಿಶೀಲನಾ ಸಭೆ

ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…

38 minutes ago

ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧನಿದ್ದರೇ ಮಾತ್ರ ವ್ಯಾಪಾರದಲ್ಲಿ ಯಶಸ್ಸು – ಸಿದ್ದಣ್ಣ

ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ…

43 minutes ago

ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವ

ರಾಯಚೂರು.13.ಆಗಸ್ಟ್.25: ನಶಾ ಮುಕ್ತ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ರಾಯಚೂರ ಜಿಲ್ಲೆಯಾದ್ಯಂತ ಆಗಸ್ಟ್ 13ರಂದು ವಿವಿಧೆಡೆ ನಡೆದವು. ಜಿಲ್ಲಾಡಳಿತ,…

48 minutes ago

ಸ್ಟಡಿ ಅಬ್ರಾಡ್ -2025 ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಗಸ್ಟ್ 17ರಂದು ಮಾಹಿತಿ ಕಾರ್ಯಗಾರ.

ರಾಯಚೂರು.13.ಆಗಸ್ಟ.25: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶವನ್ನು ಪರಿಚಯಿಸುವ ಉದ್ದೇಶದಿಂದ ಸ್ಟಡಿ ಅಬ್ರಾಡ್…

52 minutes ago

ಅಗ್ನಿವೀರ್ ಸೇನಾ ಭರ್ತಿ: 6ನೇ ದಿನಕ್ಕೆ 779 ಅಭ್ಯರ್ಥಿಗಳು ಭಾಗಿ

ರಾಯಚೂದು.13.ಆಗಸ್ಟ್.25:- ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಆಯೋಜನೆ ಮಾಡಿದ ಅಗ್ನಿವೀರ್ ಸೇನಾ ಭರ್ತಿಗೆ 6ನೇ ದಿನವಾದ ಆಗಸ್ಟ್ 13ರಂದು…

2 hours ago