ಬಾದಲಗಾಂವನಲ್ಲಿ ಗ್ರಾ. ಪ. ಅವ್ಯವಾರ  15 ಹಣಕಾಸಿನಲ್ಲಿ ಜಮಾ ಆಗಿರುವ ರೂ. 27,72,950/- ಗುಳುಂ.

ಬೀದರ.07.ಮೇ.25:- ಔರಾದ ತಾಲುಕಿನ ಬಾದಲಗಾಂವ ಗ್ರಾಮ್ ಪಂಚಾಯತೆಲಿ ಅವ್ಯವಾರ ನಡೆದಿರುವ ಬಗ್ಗೆ ಮತ್ತು 15 ಹಣಕಾಸಿನಲ್ಲಿ ಜಮಾ ಆಗಿರುವ ರೂ. 27,72,950/- ಜಮಾ ಆಗಿರುತ್ತದೆ ಅದನ್ನು ಕೇವಲ ಒಂದು ದಿವಸದಲ್ಲಿ ಖರ್ಚು ರೂ. 16,93,910/- ತೋರಿಸಿರುವ ಬಗ್ಗೆ ದೂರು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಗಮನಕ್ಕೆ ತರಬರಿಸುವುದೇನೆಂದರೆ ನಾನು ಜಿಲ್ಲಾಪುರ ಗ್ರಾಮದ ಖಾಯಂ ನಿವಾಸಿಯಾದ ಪ್ರಕಾಶ್ ತಂದೆ ಗಂಗಾರಾಮ್ ರವರು ಈ ದೂರು ಪತ್ರದ ಮೂಲಕ ಮನವರಿಕೆ ಮಾಡುವುದೇನೆಂದರೆ, ಈಗಾಗಲೇ ನಮ್ಮ ಗ್ರಾಮ ಪಂಚಾಯತ್ ಬಾದಲಗಾಂವನಲ್ಲಿ ಅವ್ಯವಹಾರ ಮತ್ತು ಇಲ್ಲಸಲ್ಲದ ಮೋಸ ವಂಚನೆಯನ್ನು ಮಾಡುತ್ತ ಹಾಗೂ ಸರ್ಕಾರದಿಂದ ಬರುವ ಸೌಲಭ್ಯಗಳು ಹಾಗೂ ಸಹಾಯಧನ ಹಾಗೂ ಇತರ ಕೆಲಸ ಕಾರ್ಯಗಳ ಚಟುವಟಿಕೆಯ ಬಿಲ್ಲುಗಳನ್ನು ಕೊಳ್ಳೆ ಹೊಡೆದ ಮಾನ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಅವರ ಅಧಿನದಲ್ಲಿ ಈ ಅವ್ಯವರ ನಡೆದಿರುತ್ತದೆ.

ಸದರಿ 2024-25 ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ದಿನಾಂಕ : 24ನೇ-ಏಪ್ರಿಲ್-2025 ರಂದು ರೂ. 27,72,950/- ಜಮಾ ಆಗಿರುತ್ತದೆ. ಆದರೆ ಯಾವುದೇ ಕಾರ್ಯ ಚಟುವಟಿಕೆಗಳನ್ನು ಆಗದೆ ಈ, ಗ್ರಾಮ ಪಂಚಾಯತ್ ಖಾತೆಗೆ ಜಮಾ ಆಗಿರುವ ಮೊತ್ತದಲ್ಲಿ ರೂ. 16,93,910/- ರೂಪಾಯಿಗಳನ್ನು ಖರ್ಚು ವೆಚ್ಚವನ್ನು ತೋರಿಸಿ, ಖಾತೆಯಲ್ಲಿ ಮೊತ್ತವನ್ನು ವಿಡ್ರಾಲ್ ಮಾಡಿಕೊಂಡಿರುತ್ತಾರೆ. ಹಾಗಾಗಿ ತಾವುಗಳು ಈ ಎಲ್ಲಾ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡು ಯಾವ 1 ಕೆಲಸ ಕಾರ್ಯಕ್ಕೆ ಮತ್ತು ಯಾವ ವರದಿಯ ಆಧಾರದ ಮೇಲೆ ಹಣವನ್ನು ವಿಡ್ರಾಲ್ ಮಾಡಲಾಗಿದೆ ಎಂಬುದರ ಬಗ್ಗೆ ತಾವು ಪರಿಶೀಲಿಸಿ, ಹಾಗೂ ತಪ್ಪಿಸ್ಥ ಪಿ.ಡಿ.ಓ. ಹಾಗೂ ಕಾರ್ಯದರ್ಶಿಗೆ ತಾವು ಕಾನೂನಾತ್ಮಕ ಕ್ರಮ ಕೈಗೊಂಡು, ಶಿಕ್ಷೆಗೆ ಗುರಿ ಪಡಿಸುವಂತೆ 4 ಕೋರಿದ್ದೇವೆ.

ಅದೇ ರೀತಿಯಾಗಿ ಪಿ.ಡಿ.ಓ. ಅಧಿಕಾರಿ ಅವರ ಮುಂಬಡ ಮತ್ತು ಯಾವುದೇ ಕಾರ್ಯಚಟುವಟಿಕೆ ಸರ್ಕಾರಿ ಸೌಲತ್ತುಗಳು ಇವರಿಗೆ ನೀಡಬಾರದೆಂದು ಈ ದೂರು ಪತ್ರದ ಮೂಲಕ ತಮಗೆ ತಿಳಿಪಡಿಸಲಾಗಿದೆ. ಮತ್ತು 15ನೇ ಹಣಕಾಸಿನ ಕಾರ್ಯ ಚಟುವಟಿಕೆಗೆ ಬಂದಿರುವ ಮೊತ್ತವನ್ನು ತಮ್ಮ ದೋರಾಲೋಚನೆಯಿಂದ, ಕಳ್ಳ ಸಾಗಾಣಿಕೆಯ ಕಾರ್ಯ ಚಟುವಟಿಕೆಗಳು ಮತ್ತು ಬೋಗಸ್ ಬಿಲ್ಲುಗಳನ್ನು ಹಾಕಿ ಸರಕಾರಕ್ಕೆ ಮತ್ತು ಗ್ರಾಮ ಅಭಿವೃದ್ಧಿಗೆ ವಂಚನೆ ಮಾಡಿರುವಂತಹ ಅನಿಷ್ಠ ಅಧಿಕಾರಿಗಳನ್ನು ತಾವು ಕುಲಂಕುಶವಾಗಿ ಪರಿಶೀಲನೆ ವರದಿಯನ್ನು ಮತ್ತು ಕಾರ್ಯ ಚಟುವಟಿಕೆಗಳ ಸ್ಥಳ ಪರಿಶೀಲನೆಯನ್ನು ಮಾಡುವಂತೆ ವಿಶೇಷ ಅಧಿಕಾರಿಗಳ ನೇಮಕಾತಿ ಮಾಡಿ ಇವರುಗಳ ವಿರುದ್ಧ ತನಿಖೆಯನ್ನು ನಡೆಸುವುದಾಗಿ ತಮ್ಮಲ್ಲಿ ಈ ಪತ್ರದ ಮೂಲಕ ವಿನಂತಿಸಿಕೊಳ್ಳಲಾಗಿದೆ. ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ. ವಂದನೆಗಳೊಂದಿಗೆ,

prajaprabhat

Recent Posts

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

5 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

6 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

6 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

6 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

6 hours ago

ಆಗಸ್ಟ್ 7ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…

6 hours ago