ಚಿಕ್ಕಮಂಗಳೂರು.01.ಮಾರ್ಚ.25:- ಚಿಕ್ಕಮಗಳೂರಿನ ಶ್ರೀ ಬಸವತತ್ವ ಪೀಠದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ದ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಬಸವ ತತ್ವ ಸಮಾವೇಶ, ಶ್ರೀ ಮ. ನಿ. ಪ್ರ. ಚಂದ್ರಶೇಖರ ಮಹಾಸ್ವಾಮಿಗಳವರ 170ನೇ ಜಯಂತಿ, ಶ್ರೀ ಮ. ನಿ. ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳವರ 29ನೇ ಸಂಸ್ಮರಣೆ ಮತ್ತು ಶ್ರೀಮಠದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
12 ನೇ ಶತಮಾನದಲ್ಲಿ ವೃತ್ತಿ ಆಧಾರಿತ ಸಮುದಾಯಗಳ ಕುಲ ಕಸುಬುಗಳಿಂದ ಮಾತ್ರ ನೈಜ ಸಮಾಜ ನಿರ್ಮಾಣ ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಅಣ್ಣ ಬಸವಣ್ಣನವರು. ಅವರ ಪ್ರೇರಣೆಯ ಹಾದಿಯಲ್ಲಿ ಮುನ್ನೆಡೆಯುತ್ತಿರುವ ನಮ್ಮ ಮಠಮಾನ್ಯಗಳು ಹಾಗೂ ಪರಮಪೂಜ್ಯರ ಕೈಂಕರ್ಯ ಕರುನಾಡಿನ ಹಿರಿಮೆಯಾಗಿರುವ ಕುರಿತು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಪರಮಪೂಜ್ಯ ಜ್ಞಾನ ಪ್ರಭು ಸಿದ್ದರಾಮದೇಶೀಕೇಂದ್ರ ಶ್ರೀಗಳು, ಪೂಜ್ಯ ಶ್ರೀ ಶಿವಶಂಕರ ಶಿವಯೋಗಿ ಶ್ರೀಗಳು, ಸಂಸದರಾದ ಶ್ರೀ @KotasBJP, ಮಾಜಿ ಸಚಿವರಾದ ಶ್ರೀ @CTRavi_BJP, ಅಫೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಬೆಳ್ಳಿ ಪ್ರಕಾಶ್, ಶಾಸಕರಾದ ಶ್ರೀ ಹೆಚ್.ಡಿ.ತಮ್ಮಯ್ಯ, ಮಾಜಿ ಶಾಸಕರಾದ ಶ್ರೀ ರುದ್ರೇಗೌಡರು, ಶ್ರೀ ಡಿ.ಎಸ್.ಸುರೇಶ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಕಲ್ಮರುಡಪ್ಪ, ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಮುಖಂಡರಾದ ಶ್ರೀ ನಿರಂಜನ್ ಕುಮಾರ್, ಶ್ರೀ ದೀಪಕ್ ದೊಡ್ಡಯ್ಯ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…
ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾರ್ ನಲ್ಲಿದ್ದ ತಂದೆ ಮಗ…
ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…
ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…
ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…
ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…