ಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಕೊಪ್ಪಳ.03.ಜುಲೈ.25: 2025-26ನೇ ಸಾಲಿಗೆ B.Sc Nursing and GNM Nursing course  ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ವಿದ್ಯಾರ್ಥಿಗಳು       ಲಿಂಕ್ ಮೂಲಕ  ಆನ್‌ಲೈನ್ ಅರ್ಜಿ ಸಲ್https://sevasindhu.karnataka.gov.in ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು. ಪೂರ್ಣಾವಧಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಕುಟುಂಬದ ವಾರ್ಷಿಕ ಆದಾಯವು  ರೂ.2.50 ಲಕ್ಷಗಳನ್ನು  ಮೀರಿರಬಾರದು. ಅನುದಾನದ ಲಭ್ಯತೆಯನುಸಾರ ಮೆರಿಟ್ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಯೋಜನೆಯಡಿ ಉತ್ತೇಜನ ಮೊತ್ತವನ್ನು ಪಡೆಯಲು  ಹಿಂದಿನ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು.

ಒಂದು ವೇಳೆ ಅನುದಾನ ಲಭ್ಯತೆ ಇದ್ದಲ್ಲಿ ಶೇ.50 ಕ್ಕಿಂತ  ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳ ಅರ್ಜಿಗಳನ್ನು ಸಹ ಮೆರಿಟ್ ಆಧಾರದ ಮೇಲೆ ಪರಿಗಣಿಸಲಾಗುವುದು. ಯೋಜನೆಯಡಿ ಉತ್ತೇಜನ ಮೊತ್ತವನ್ನು ಪಡೆಯಲು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಹೊಸ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಪೂರ್ವದಲ್ಲಿ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿ  (NPCI MAPPING ACTIVE)     ಆಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಶುಲ್ಕ ಮರುಪಾವತಿಯ  ಪ್ರಕ್ರಿಯೆಯು ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶಗಳು ಹಾಗೂ ಮಾರ್ಗ ಸೂಚಿಗಳಿಗೆ ಒಳಪಟ್ಟಿರುತ್ತದೆ.


ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್  https://dom.karnataka.gov.in     ಅನ್ನು ವೀಕ್ಷಿಸಬಹುದು ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ,

ಕೊಪ್ಪಳ: 08539-225070, ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕುಷ್ಟಗಿ: 8747861392,

ಗಂಗಾವತಿ: 9986244408, ಯಲಬುರ್ಗಾ: 8095191406 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಅಜ್ಮೀರ್ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

prajaprabhat

Recent Posts

ಬೆಂಗಳೂರು ವಿಶ್ವವಿದ್ಯಾಲಯ’ಯಲ್ಲಿ ಅತಿಥಿ ಉಪನ್ಯಾ ಸಕ ಹುದ್ದೆಗೆ ಅರ್ಜಿ ಆಹ್ವಾನ.

ಬೆಂಗಳೂರು.04.ಜುಲೈ.25:- ವಿಶ್ವ ವಿದ್ಯಾಲಯದಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಮಾನ್ಯತೆ ಪಡೆದ ವಿವಿಯಿಂದ ಪದವಿ, ಸ್ನಾತಕೋತ್ತರ…

37 minutes ago

ಅತಿಥಿ ಅಧ್ಯಾಪಕರಿಗೆ ಸರ್ಕಾರ ₹5 ಲಕ್ಷ ಗ್ರಾಚ್ಯುಟಿ Gratuity ರಾಜ್ಯ ಸರ್ಕಾರ ಆದೇಶ. Formate

Gratuity turm and conditions with Formate ಬೆಂಗಳೂರು.02.ಜುಲೈ.25:-ಕರ್ನಾಟಕ ಸರ್ಕಾರವು ಪದವಿ ಕಾಲೇಜುಗಳಲ್ಲಿನ ಅತಿಥಿ ಅಧ್ಯಾಪಕರಿಗೆ 60 ವರ್ಷ ತುಂಬಿದ…

2 hours ago

ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ.

ಬೆಂಗಳೂರು.03.ಜುಲೈ.25:- ರಾಜ್ಯ ಸರ್ಕಾರ ವತಿಯಿಂದ ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆಗೆ ಚಾಲನೆ ನೀಡಲಾಗಿದೆ. ಈ…

2 hours ago

ರಾಜ್ಯದ ಸರ್ಕಾರ UPSC,KPSC Free Coaching Classes ತರಬೇತಿಗೆ ಅರ್ಜಿ ಆಹ್ವಾನ

ರಾಜ್ಯ ಸರಕಾರ 2025-26ನೇ ಸಾಲಿಗೆ ವಿವಿಧ ಪರೀಕ್ಷೆ ಪೂರ್ವ ತರಬೇತಿ ಪಡೆಯಲು ಅರ್ಜಿ ಆಹ್ವಾನ ನೀಡಲಾಗಿದೆ.ಯುಪಿಎಸ್‍ಸಿ, ಕೆಎಎಸ್ ಗೆಜೆಟೆಡ್ ಪ್ರೊಬೇಷನರ್…

3 hours ago

ಜುಲೈ 16 ರಂದು ಕೆಸ್ತೂರು ಹಾಲು ಉತ್ಪಾದಕರ ಆಡಳಿತ ಮಂಡಳಿ ಚುನಾವಣೆ.

ಚಾಮರಾಜನಗರ.03.ಜುಲೈ.25:- ಮಹಿಳಾ ಮೀಸಲು ಸ್ಥಾನಗಳಿಗೆ ನಡೆಯಲಿದ್ದು. ಜುಲೈ 16 ರಂದು ಕೆಸ್ತೂರು ಹಾಲು ಉತ್ಪಾದಕರ ಆಡಳಿತ ಮಂಡಳಿ ಚುನಾವಣೆ.ಯಳಂದೂರು: ತಾಲ್ಲೂಕಿನ…

5 hours ago

ಅತಿಥಿ ಉಪನ್ಯಾಸಕರ ಯಥಾ ಸ್ಥಿತಿ ಕರ್ತವ್ಯದಲ್ಲಿ ಮುಂದುವರೆಸಬೇಕು: ಡಾ.ಟಿ.ದುರುಗಪ್ಪ

ಬಳ್ಳಾರಿ.03.ಜುಲೈ.25:- ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹತೆ ಹೊಂದಿದವರು. ಅನರ್ಹತೆ ಹೊಂದಿರುವರೆಂದು…

8 hours ago