ಪ್ರವಾಸೋದ್ಯಮ ಇಲಾಖೆ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಮತಮ್ಮೇ ಅರ್ಜಿ ಆಹ್ವಾನ

ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ SCSP ಎಸ್.ಸಿ.ಎಸ್.ಪಿ, ಹಾಗೂ TSP ಟಿ.ಎಸ್.ಪಿ ಯೋಜನೆಯಡಿ ರಾಜ್ಯದ ನಿವಾಸಿಗಳಾದ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಹಾಗೂ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಮರು ಅರ್ಜಿ ಅಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಕಮಲಾಪುರದ ಲೋಟಸ್ ಮಹಲ್ ಬಳಿಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಜೂ.02 ರಿಂದ ಅರ್ಜಿ ಪಡೆದು, ಭರ್ತಿ ಮಾಡಿ ಜೂ.9 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ತರಬೇತಿ ಪಡೆಯುವ ಅಭ್ಯರ್ಥಿಯ ವಯಸ್ಸು ಕನಿಷ್ಠ 20 ರಿಂದ 45 ವರ್ಷದೊಳಗಿರಬೇಕು.

ತರಬೇತಿಯ ವಿವರ ಆಹಾರ ಮತ್ತು ಪಾನೀಯ ಸೇವೆಯ ಉಸ್ತುವಾರಿ (ಪುಡ್ ಅಂಡ್ ಬೆವರೇಜ್ ಸರ್ವೀಸ್

ತರಬೇತಿ ಪಡೆಯುವ ವೇಳೆ ರೂ.2000/- ರಂತೆ ಮಾಹೆಯಾನ ಸ್ಟೈಫಂಡ್ ನೀಡಲಾಗುವುದು.

ತರಬೇತಿಯ ಕಾಲಾವಧಿ 4 ತಿಂಗಳು ಹಾಗೂ 10 ನೇ ತರಗತಿ ಉತ್ತಿರ್ಣರಾಗಿರಬೇಕು.

ಬಹು ತಿನಿಸು ಕುಕ್ (ಮಲ್ಟಿ ಕ್ಯೂಸೆನ್ ಕುಕ್) 

ತರಬೇತಿಯ ಕಾಲಾವಧಿ: 

5 ತಿಂಗಳು ಹಾಗೂ 8 ನೇ ತರಗತಿ ಉತ್ತೀರ್ಣರಾಗಿರಬೇಕು.

ಕೊಠಡಿ ಪರಿಚಾರಕ (ರೂಂ ಅಟೆಂಡಂಟ್) :

ತರಬೇತಿಯ ಕಾಲಾವಧಿ:

4 ತಿಂಗಳು ಹಾಗೂ ಐದನೇ ತರಗತಿ ಉತ್ತೀರ್ಣರಾಗಿರಬೇಕು.

ಈಗಾಗಲೇ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಉದ್ಯೋಗ ಖಾತರಿಯಾಗಿದೆ.


ತರಬೇತಿಗೆ ಹಾಜರಾಗುವವರಿಗೆ ವಸತಿ, ಊಟೋಪಚಾರ ಹಾಗೂ ಸಮವಸ್ತ್ರ ನೀಡಲಾಗುವುದು. ತರಗತಿಯ ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಉದ್ಯೋಗ ತರಬೇತಿ ಸಹ ನೀಡಲಾಗುವುದು.

ಐಹೆಚ್‌ಎಂ ಬೆಂಗಳೂರು ಮತ್ತು ಎಫ್‌ಸಿಐ ಮೈಸೂರು ಸಂಸ್ಥೆಗಳು ಪ್ರತಿಷ್ಠಿತ ಅತಿಥ್ಯ ಕ್ಷೇತ್ರದಲ್ಲಿ ತರಬೇತಿ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಈ ಸಂಸ್ಥೆಗಳಿಂದ ತರಬೇತಿ ನೀಡಿ ಪ್ರಮಾಣ ಪತ್ರಗಳನ್ನು ನೀಡುವುದರಿಂದ ರಾಜ್ಯದೊಳಗೆ ಅಲ್ಲದೇ ದೇಶದ ಯಾವುದೇ ಭಾಗದ ಹೋಟೆಲ್ ಉದ್ಯಮದಲ್ಲಿ ಕೆಲಸ ಖಾತರಿಯಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಮಲಾಪುರದ ಲೋಟಸ್ ಮಹಲ್ ಹತ್ತಿರದ ಪ್ರವಾಸೋದ್ಯಮ

ಇಲಾಖೆಯ ಉಪನಿರ್ದೇಶಕ ಕಚೇರಿ ಅಥವಾ ದೂ.08394-295640 ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

prajaprabhat

Recent Posts

ಬ್ಯಾಕ್ ಲಾಗ್’ ಹುದ್ದೆಗಳ ಭರ್ತಿ : ಸರ್ಕಾರದಿಂದ ಆದೇಶ

ಬೆಂಗಳೂರು.07.ಆಗಸ್ಟ್.25:- ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿನ ನೇರ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ ಲಾಗ್…

4 hours ago

ಜಾರ ಲಂಬಾಣಿ  ಸಮಾಜಕ್ಕೆ  ಶೇ೬ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಬಸವರಾಜ ಪವಾರ ಆಗ್ರಹ

ಬೀದರ.07.ಆಗಸ್ಟ್.25:- ಬಂಜಾರ ಲಂಬಾಣಿ  ಸಮಾಜಕ್ಕೆ  ಈ ಹಿಂದೆ ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಮಾಡಿ…

4 hours ago

ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ- ಸಚಿವ ಈಶ್ವರ ಖಂಡ್ರೆ

ಬೀದರ.07.ಆಗಸ್ಟ್.25:- ಜನರಿಗೆ ಧ್ವನಿ ತಂದು ಕೊಟ್ಟ ಶಕ್ತಿ ಮಾಧ್ಯಮಗಳಿಗೆ ಸಲ್ಲುತ್ತದೆ ಎಂದು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತç ಮತ್ತು…

4 hours ago

ವಿಕ್ಟೋರಿಯಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಮುಖ್ಯಮಂತ್ರಿಗಳು, ವೈದ್ಯಕೀಯ ಶಿಕ್ಷಣ ಸಚಿವರು

ರಾಯಚೂರು.07.ಆಗಸ್ಟ್.25:- ರಾಯಚೂರು ಜಿಲ್ಲೆಯ ಹಟ್ಟಿಯಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿಗಳ ಪ್ರವಾಸವು ಮಳೆಯಿಂದಾಗಿ ದಿಢೀರ್ ರದ್ದಾಗಿದ್ದರಿಂದ, ಬೆಂಗಳೂರಿನಲ್ಲಿ ಆಗಸ್ಟ್ 6ರಂದು ವಿಕ್ಟೋರಿಯಾ ಆಸ್ಪತ್ರೆಗೆ…

6 hours ago

ಶಾಸಕರಾದ ಬಸನಗೌಡ ದದ್ದಲ್ ಗ್ರಾಮೀಣ ಪ್ರದೇಶದಲ್ಲಿ ಸಂಚಾರ; ಏತ ನೀರಾವರಿ ಕಾಮಗಾರಿ ವೀಕ್ಷಣೆ

ರಾಯಚೂರು.07.ಆಗಸ್ಟ್ .25: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್…

6 hours ago

ಸೇನಾ ನೇಮಕಾತಿ ರ‍್ಯಾಲಿ: ವಸತಿ ವ್ಯವಸ್ಥೆಗೆ<br>ಅಡುಗೆದಾರರು, ವಾರ್ಡನ್ ನಿಯೋಜನೆ

ರಾಯಚೂರು.07.ಆಗಸ್ಟ್.25: ಇಲ್ಲಿನ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 08ರಿಂದ ಆಗಸ್ಟ್ 26ರವರೆಗೆ ನಡೆಯುವ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿ…

6 hours ago