ಬೆಂಗಳೂರು.05.ಪ.25:- ರಾಜ್ಯ ಸರ್ಕಾರ ಪೌರಾಡಳಿತ ಸಂಸ್ಥೆಗಳಲ್ಲಿ ಸುಧಾರಣೆ ತರಲು ಹಾಗೂ ಪುರಸಭೆ ಅಭಿವೃದ್ಧಿ ಯೋಜನೆಯ ಮಿಷನ್ 2025-26ರ ವೇಳೆಗೆ ರಾಜ್ಯಾದ್ಯಂತ ಪುರಸಭೆಯ ಆಡಳಿತ ಮತ್ತು ಮೂಲಸೌಕರ್ಯಗಳ ಬಗ್ಗೆ ಕೈಗೊಳ್ಳಬೇಕಾದ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಕೆಪಿಸಿಸಿ ಸದಸ್ಯ ಮೋಹನದಾಸ್ ಹೆಗ್ಗಡೆ, ಪೌರಾಡಳಿತ ಸಚಿವ ರಹೀಂ ಖಾನ್‍ಗೆ ಪತ್ರ ಬರೆದಿದ್ದಾರೆ.
ಬಡತನ ನಿರ್ಮೂಲನೆ, ಕಲಿಕೆ ಮತ್ತು ಗಳಿಕೆಗೆ ಪ್ರೋತ್ಸಾಹ, ಮಕ್ಕಳು ಹಾಗೂ ಕುಟುಂಬ ಆರೋಗ್ಯಕ್ಕೆ ನೆರವು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸಶಕ್ತೀಕರಣಕ್ಕೆ ಒತ್ತು, ಕೃಷಿ ವಲಯವನ್ನು ಬಲವರ್ಧನೆಗೊಳಿಸುವುದು, ಪರಿಸರ ಸಂರಕ್ಷಣೆ, ಸರಕಾರದ ಆಡಳಿತ ಮಾದರಿಯನ್ನು ಡಿಜಿಟಲ್ ವೇದಿಕೆ ಮೂಲಕ ಉತ್ತರದಾಯಿ ಮಾಡುವುದರ ಜೊತೆಗೆ, ನಾಗರಿಕರ ಪಾಲ್ಗೊಳ್ಳುವಿಕೆಗೆ ಪ್ರೋತ್ಸಾಹ ನೀಡಬೇಕು ಎಂದು ಮೋಹನ್ ದಾಸ್ ಹೆಗ್ಗಡೆ ವಿವರಿಸಿದ್ದಾರೆ.
ಖಾಸಗಿ ಸಹಭಾಗಿತ್ವ ಹಾಗೂ ವ್ಯವಸ್ಥೆಯನ್ನು ವಿಕೇಂದ್ರೀಕರಣಗೊಳಿಸುವುದರಿಂದ, ಸ್ಥಳೀಯ ಆಡಳಿತವನ್ನು ಹೆಚ್ಚು ಬಲವರ್ಧನೆಗೊಳಿಸುವುದರ ಜೊತೆಗೆ ನಗರ ಪ್ರದೇಶಗಳಲ್ಲಿನ ಸೇವೆಗಳ ಗುಣಮಟ್ಟವನ್ನು ಸುಧಾರಿಸಬಹುದಾಗಿದೆ.
ರಾಜ್ಯ ಸರಕಾರಕ್ಕೆ ತಾವು ನೀಡಿರುವ ಸಲಹೆಗಳ ಅನುಷ್ಠಾನದಿಂದ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಪ್ರಯತ್ನಗಳು ನಗರ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಬಹುದಾಗಿದೆ. ನಾಗರಿಕರ ಜೀವನ ಮಟ್ಟವು ಸುಧಾರಣೆಯಾಗಲಿದೆ. ಅಲ್ಲದೇ, ರಾಜ್ಯದ ನಗರಗಳು ಆವಿಷ್ಕಾರ ಹಾಗೂ ಸ್ಥಿರತೆಯಲ್ಲಿ ಇತರರಿಗೆ ಮಾದರಿಯಾಗಲಿವೆ ಎಂದು ಮೋಹನದಾಸ್ ಹೆಗ್ಗಡೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಪೌರಾಡಳಿತ ಸಂಸ್ಥೆಗಳಲ್ಲಿ ಸುಧಾರಣೆ ತರಲು ಹಾಗೂ ಪುರಸಭೆ ಅಭಿವೃದ್ಧಿ ಯೋಜನೆಯ ಬಡದವರಿಗೆ ಪಾಲಗುದಿಲ ಬಹಳಷ್ಟು ಬಡವರಿಗೆ ಮನೆ ಇಲ್ಲಾ ಅವರು ಗುಡಿಸಿಲಿನಲ್ಲಿ ಅವರು ಜೀವನ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…