ಪೋಲೀಸರ ನೋವು ಕೇಳುವವರು ಯಾರು?

ಪೋಲೀಸ್ ಇಲಾಖೆಯ ಸೇವೆಯು ಸಮಾಜಕ್ಕೆ ಅಮೂಲ್ಯವಾದದ್ದು .‌ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಪ್ರತಿಯೊಬ್ಬರೂ ಕಾನೂನಿನ ಪ್ರಕಾರ ಉತ್ತಮ  ಜೀವನ ಮಾಡಬೇಕೆಂದು ಈ ಇಲಾಖೆಯ ಉದ್ದೇಶವಾಗಿದೆ.

ಒಂದು ಗಾದೆ ಮಾತಿದಿದೆ ನೋಡಿ ಮೇಣದ ಬತ್ತಿ ತಾನು ಉರಿದು ಇನ್ನೊಬ್ಬರಿಗೆ ಬೆಳಕನ್ನು ನೀಡುತ್ತದೆ. ಅಂದರೆ ತನ್ನ ವೈಯಕ್ತಿಕ ಬದುಕನ್ನೆ ಸಮಾಜಕ್ಕೆ ತ್ಯಾಗಮಾಡುತ್ತಾರೆ. ಅಂದರೆ ಕಾನೂನಿನ ಪ್ರಕಾರ ಒಂದು ಸೇವೆಯಾಗಿದೆ. ಇವರ ಸೇವೆಗೆ ಪ್ರತಿಯೊಬ್ಬರೂ ಸಲಾಮ್ ಹೊಡೆಯಬೇಕು.  ಆದರೆ ಪೋಲೀಸರ ನೋವು ಕೇಳುವವರು ಯಾರು? ಇಲ್ಲ.

ಪೋಲೀಸ್ ಕೆಲಸಕ್ಕೆ ಸೇರಿದ ಮೇಲೆ ತಂದೆ ತಾಯಿ, ಪತ್ನಿ, ಪತಿ, ಮಕ್ಕಳ ಪ್ರೀತಿಗಳಿಂದ ಶುಭ ಕಾರ್ಯಗಳಿಂದ ವಂಚಿತರಾಗಿ ಸದಾ ಕಾನೂನು ರಕ್ಷಣೆಯಲ್ಲಿ ತೊಡಗಿಕೊಳ್ಳುವುದೇ ಅವರ ಕರ್ತವ್ಯವಾಗಿದೆ.

ತಂದೆ, ತಾಯಿ, ಪತಿ, ಪತ್ನಿ, ಮಕ್ಕಳ ಪ್ರೀತಿಯಿಂದ ದೂರವಿರುತ್ತಾರೆ.ಈ ನೋವಿಗೆ ಎಷ್ಟೇ ಹಣ ನೀಡಿದರು ವ್ಯರ್ಥ. ನಾವು ಅಂದುಕೊಳ್ಳಬಹುದು ಇವರಿಗೆ ಸಂಬಳ ಬರುತ್ತದೆ ಇವರ ಜೀವನ ಚೆನ್ನಾಗಿರುತ್ತದೆ ಅಂತ ಆದರೆ ಸಂಬಳದಿಂದ ದೂರವಾಗಿರುವ ಪ್ರೀತಿ ಸಿಗುವುದಿಲ್ಲ. ಹಣದಿಂದ ಯಾವ ಪ್ರೀತಿಯನ್ನು ಕೊಂಡುಕೊಳ್ಳುವುದಕ್ಕೆ ಆಗೋದಿಲ್ಲ ಬಿಡಿ.

ಪೋಲೀಸರು ತಮ್ಮ ಹಕ್ಕುಗಳನ್ನು ಕೇಳುವುದಕ್ಕೆ ಸಂಘಟನೆ ಮಾಡುವುಂತಿಲ್ಲ. ಪೋಲೀಸರು ತಮ್ಮ ಸಮಸ್ಯೆಗಳ ನಿವಾರಣೆಗೋಸ್ಕರ ಪ್ರತಿಭಟನೆ ಮಾಡುವಂತಿಲ್ಲ. ಇಲ್ಲೇ ಅರ್ಥ ಮಾಡಿಕೊಳ್ಳಿ ಅವರ ನೋವನ್ನು ಕೇಳುವವರು ಯಾರು?
ರಾಜಕಾರಣಿಗಳು ಮೊದಲು ಪೋಲಿಸರ ನೋವನ್ನು ಕೇಳಬೇಕು

ಪೋಲೀಸ್ ಕೆಲಸವನ್ನು  ಇಷ್ಟಪಟ್ಟು ಸೇರಿಕೊಂಡವರ ಬಳಿ ಹೋಗಿ ಕೇಳಿ ಪೋಲೀಸ್ ಕೆಲಸ ಹೇಗಿದೆ ಅಂತ? ದಯವಿಟ್ಟು ಪೋಲೀಸ್ ಕೆಲಸಕ್ಕೆ ಮಾತ್ರ ಸೇರಿಕೊಳ್ಳಬೇಡಿ.  ಯಾವುದೇ ಸರಕಾರಿ ರಜೆ ಸಿಗುವುದಿಲ್ಲ,  ವಾರಕ್ಕೆ ಒಂದು ರಜೆ‌ ಹಾಕಿಕೊಳ್ಳಬಹುದು ಆದರೆ ಗಲಾಟೆಗಳು, ತುರ್ತು ಸಂದರ್ಭ ಬಂದಾಗ  ರಜೆಯಲ್ಲಿದ್ದರೂ ಕೂಡ ಹೋಗಿ ಕರ್ತವ್ಯ ಮಾಡಬೇಕು ಅದಲ್ಲದೇ ಇನ್ನೂ ಅನೇಕ ಸಮಸ್ಯೆಗಳಿದೆ ಅದನ್ನು ಹೇಳಿಕೊಳ್ಳಬಾರದು ಏಕೆಂದರೆ ಇಲಾಖೆಗೆ ಕೆಲವೊಂದು ಗೌಪ್ಯವಿರುತ್ತದೆ.

ನಾವು ಸಾರ್ವಜನಿಕರಿಗೆ ರಕ್ಷಣೆ ಕೊಡುತ್ತೇವೆ ಆದರೆ ನಮಗೆ ರಕ್ಷಣೆ ಕೊಡುವವರು ಯಾರು ಇಲ್ಲ. ಇಂದು ಪೋಲಿಸರ ಮೇಲೆಯೇ ಸಾರ್ವಜನಿಕರು ಹಲ್ಲೆ ಮಾಡುತ್ತಿದ್ದಾರೆ. ಪೋಲೀಸರು ಸಾರ್ವಜನಿಕರಿಗೆ ಲಾಠಿಯಲ್ಲಿ ಹೊಡೆದರೆ ಪೋಲೀಸರಿಂದ ದಬ್ಬಾಳಿಗೆ ಅಂತಾರೆ ಅದೇ ಸಾರ್ವಜನಿಕರು ಪೋಲೀಸರ ಮೇಲೆ ಸಾರ್ವಜನಿಕವಾಗಿ ಹೊಡೆದಾಗ ನಾವು ಹೊಡೆಸಿಕೊಳ್ಳಬೇಕು ತಿರುಗಿ ಹೊಡೆದರೆ ಪೋಲಿಸರ ದಬ್ಬಾಳಿಕೆ ಅನ್ನುತ್ತಾರೆ.


ಕೆಲ ರಾಜಕಾರಣಿಗಳು ಕೆಲ ಪುಡಾರಿಗಳನ್ನು ಇಟ್ಟುಕೊಂಡಿದ್ದಾರೆ ಅವರಿಗೂ ನಾವು ಗೌರವ ಕೊಡಬೇಕಂತೆ.

ಸರಿಯಾದ ಸಮಯಕ್ಕೆ ಊಟ ಸಿಗುವುದಿಲ್ಲ, ನೆಮ್ಮದಿಯಾಗಿ ಮಲಗುವುದಕ್ಕೆ ಸಮಯವಿರುವುದಿಲ್ಲ. ಯಾವಾಗಲೂ ಕರ್ತವ್ಯ ಕರ್ತವ್ಯ ಅಂತ ಇರಬೇಕಾಗುತ್ತದೆ. ಆದರೆ ಶಕ್ತಿ ಮೀರಿ ನಾವು ಕರ್ತವ್ಯ ಮಾಡುತ್ತೇವೆ ನಾವು ಕೂಡ ಮನುಷ್ಯರು ನಮಗೂ ಕೂಡ ದೈಹಿಕವಾಗಿ ಸಮಸ್ಯೆ ಇರುತ್ತದೆ. ಒತ್ತಡಗಳಿಂದ ಎಷ್ಟೋ ಪೋಲೀಸರಿಗೆ ಬಿಪಿ ಶುಗರ್ ಬಂದು ಈ ಕೆಲಸನೇ ಬೇಡ ಅನ್ನುತ್ತಿದ್ದಾರೆ.


ರಾಜಕಾರಣಿಗಳ ಸಮಾವೇಶ, ಜಾತ್ರೆಗಳು, ಸಿನಿಮಾ ನಟರ ಕಾರ್ಯಕ್ರಮಗಳಲ್ಲಿ ಪೋಲೀಸರು ರಕ್ಷಣೆಯಲ್ಲಿ ಇದ್ದು ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು ಆ ಸಮಯದಲ್ಲಿ ಪೋಲೀಸರ ಯೋಗಕ್ಷೇಮ ಕೇಳುವವರು ಯಾರು ಇರುವುದಿಲ್ಲ. ವಿರಾಮವಿಲ್ಲದೆ ಕರ್ತವ್ಯ ಮಾಡಬೇಕು.


ಇನ್ನೂ ಅನೇಕ ಸಮಸ್ಯೆಗಳನ್ನು ಪೋಲೀಸರು ಹೆದರಿಸುತ್ತಾರೆ. ಇವರ ರಕ್ಷಣೆಗೆ ಸರಕಾರಗಳು ಗೃಹ ಇಲಾಖೆಯು ಮೊದಲು ಪೋಲೀಸ್ ಸಿಬ್ಬಂದಿಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಗೆಹರಿಸುವಂತಹ ಕೆಲಸಕ್ಕೆ  ಮುಂದಾಗಬೇಕು.

ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

ನಾಳೆಯಿಂದ ಮುಂಗಾರು ಅಧಿವೇಶನ ಆರಂಭ; ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ಯುದ್ದಕ್ಕೆ ವೇದಿಕೆ ಸಜ್ಜು

ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ…

4 hours ago

KSRTC ಬಸ್, ಕಾರು ಡಿಕ್ಕಿ 2 ಮೃತೀವ್

ಅಫಜಲಪುರ.11.ಆಗಸ್ಟ್.25:- KSRTC ಬಸ್ ಮತ್ತು ಕಾರು ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ,ಈ ಅಪಘಾತದಲ್ಲಿ ಕಾ‌ರ್ ನಲ್ಲಿದ್ದ ತಂದೆ ಮಗ…

4 hours ago

ಬೆಂಗಳೂರಿನ 44 ಎಕರೆಯಲ್ಲಿ ಕೆಂಪೇಗೌಡ ಒಕ್ಕಲಿಗ ವಿ.ವಿ: ಎಚ್‌.ಎನ್‌.ಅಶೋಕ್

ಮಾಗಡಿ: ಬೆಂಗಳೂರಿನ ಸಜ್ಜೇಪಾಳ್ಯದಲ್ಲಿ ಇರುವ ಕೃಷ್ಣಪ್ಪ, ರಂಗಮ್ಮ ಎಜುಕೇಶನ್ ಟ್ರಸ್ಟ್ ನ ಹೆಸರಿನಲ್ಲಿ ಇದ್ದ 44 ಎಕರೆ 33 ಗುಂಟೆ…

6 hours ago

ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ ಶಿಕ್ಷಣ ಇಲಾಖೆಯಿಂದ ಬಿಡುಗಡೆ.

ಬೆಂಗಳೂರು.10.ಆಗಸ್ಟ್.25:- ಸರ್ಕಾರಿ ಶಾಲೆ ಶಿಕ್ಷಕರ ವರ್ಗಾವಣೆ ಪರಿಷ್ಕೃತ ವೇಳಾಪಟ್ಟಿ-2 ಅನ್ನು ಶಾಲಾ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆ…

7 hours ago

ಪ್ರಯಾಣದ ಸಂಧರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು ಸಾಂದರ್ಭಿಕ ಚಿತ್ರ.

ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ  ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…

11 hours ago

ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಪ್ರಾರಂಭ.

ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ  ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…

12 hours ago