ಬೀದರ, ನವೆಂಬರ್.26 :- ನನ್ನ ಕ್ರಿಕೇಟ್ ಜೀವನದಲ್ಲಿ ಸಾಧಿಸಿದ ಸಾಧನೆಯನ್ನು ಗುರುತಿಸಿ ನನಗೆ ಬೀದರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆಗೆ ಚಾಲನೆ ನೀಡಲು ನನಗೆ ಆಹ್ವಾನ ಕೊಟ್ಟಿರುವುದು ತುಂಬಾ ಸಂತೋಷವಾಗಿದೆ ಎಂದು ಅಂತರಾಷ್ಟಿçÃಯ ಕ್ರಿಕೇಟ್ ಕ್ರೀಡಾಪಟುವಾದ ದೊಡ್ಡ ಗಣೇಶ ನುಡಿದರು.
ಅವರು ಸೋಮವಾರ ಜಿಲ್ಲಾ ಪೊಲೀಸ್ ಕವಾಯತ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೀದರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2024ರ ಅಂಗವಾಗಿ ನವೆಂಬರ್.25 ರಿಂದ 27 ರವರೆಗೆ 30 ದಿನಗಳವರೆಗೆ ನಡೆಯುವ ಕ್ರೀಡಾಕೂಟಕ್ಕೆ ಪಾರಿವಾಳ ಹಾಗೂ ಬಲೂನ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಮಾತನಾಡಿ, ಕ್ರೀಡಾಕೂಟವು ಮುಖ್ಯವಾಗಿ ಕ್ರೀಡೆಯ ಉತ್ಸಾಹ, ದೈಹಿಕ ಸಾಮರ್ಥದ ಮಹತ್ವ, ಕ್ರೀಡೆಗಳ ಪ್ರಾಮುಖ್ಯತೆ ತಿಳಿದುಕೊಳ್ಳಬೇಕು. ದೇಹ, ಆರೋಗ್ಯ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಸ್ಪರ್ಧಾ ಮನೋಭಾವ ಇರಬೇಕು. ತಂಡಗಳಲ್ಲಿ ಒಗ್ಗಟ್ಟಿನ ಮನೋಭಾವ ಹೊಂದಿರಬೇಕೆAದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ, ಚಂದ್ರಕಾAತ ಪೂಜಾರಿ, ಬೀದರ, ಭಾಲ್ಕಿ, ಹುಮನಾಬಾದ, ಡಿವಾಯ್‌ಎಸ್‌ಪಿಗಳು, ವಿವಿಧ ಠಾಣೆಗಳಿಂದ ಆಗಮಿಸಿದ ಸಿಪಿಐ, ಪಿಎಸ್‌ಐ, ಆರ್‌ಪಿಐ ಪೊಲೀಸ್ ಕುಟುಂಬ ವರ್ಗದವರು, ನಗರದ ಗಣ್ಯರು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಕ್ರೀಡೆಗಳಲ್ಲಿ ನಿರ್ಣಾಯಕರಾಗಿ ಆಗಮಿಸಿದ ದೈಹಿಕ ಶಿಕ್ಷಕರು ಇನ್ನಿತರರು ಉಪಸ್ಥಿತರಿದ್ದರು.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…