ಶ್ರೀ ನುಲಿಯ ಚಂದಯ್ಯ ಜಯಂತಿ ಅರ್ಥಪೂರ್ಣ ಆಚರಣೆಯಾಗಲಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಸೂಚನೆ
ರಾಯಚೂರು.31.ಜುಲೈ.25: ಜಿಲ್ಲಾಡಳಿತದಿಂದ ಆಗಸ್ಟ್ 9ರಂದು ಶ್ರೀ ನುಲಿಯ ಚಂದಯ್ಯ ಅವರ ಜಯಂತ್ಯುತ್ಸವವನ್ನು ಅರ್ಥಪೂರ್ಣಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜುಲೈ 30ರ ಬುಧವಾರ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತ್ಯುತ್ಸವ ಅಂಗವಾಗಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂದು ಬೆಳಿಗ್ಗ 9 ಗಂಟೆಗೆ ನಗರದ ಟಿಪ್ಪು ಸುಲ್ತಾನ ಸರ್ಕಲ್‌ನಿಂದ ರಂಗಮಂದಿರವರೆಗೂ ನಡೆಯಲಿರುವ ಮೆರವಣಿಗೆಯಲ್ಲಿ ಅತ್ಯುತ್ತಮ ಕಲಾ ಪ್ರದರ್ಶನ ನೀಡುವ ತಂಡಗಳನ್ನು ನಿಯೋಜಿಸಬೇಕು. ಅಂದು ಬೆಳಿಗ್ಗೆ 10.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಮತ್ತು ಶ್ರೀ ನುಲಿಯ ಚಂದಯ್ಯ ಅವರ ಬಗ್ಗೆ ಉಪನ್ಯಾಸ ಹಾಗೂ ಇನ್ನೀತರ ವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕಡ್ಡಾಯ ಆಚರಿಸಿ ಅವರ ವಚನಾಮೃತದ ಸಾರವನ್ನು ಸಾರ್ವಜನಿಕರಿಗೆ ತಿಳಿಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಅಲ್ಲದೆ ಶಿಷ್ಠಾಚಾರಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರಿಗೆ ವಿತರಿಸಬೇಕು. ಅಂದು ರಂಗಮಂದಿರದ ಆವರಣದಲ್ಲಿ ಕುಡಿಯುವ ನೀರು ಸೇರಿದಂತೆ ಎಲ್ಲಾ ಅಗತ್ಯ ಏರ್ಪಾಡು ಮಾಡಬೇಕು. ನಗರದ ಮುಖ್ಯ ರಸ್ತೆಗಳು ಮತ್ತು ಆವರಣದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮ ಯಶಸ್ಸಿಗೆ ಸಕಲ ಸಿದ್ಧತೆ ಮಾಡಲು ಇಲಾಖಾವಾರು ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಮಾಜದ ಮುಖಂಡರ ಸಲಹೆ: ವೇದಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳಬೇಕು. ಶ್ರೀ ನುಲಿಯ ಚಂದಯ್ಯ ಅವರ ವಿಚಾರಧಾರೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಇದೆ ವೇಳೆ ಸಮಾಜದ ಬಂಧುಗಳು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉತ್ತರಾದೇವಿ, ಸಮಾಜದ ಮುಖಂಡರಾದ ನರಸಿಂಹಲು ಕಮಲಪೂರ, ಮಾಲಾ ಎಸ್. ಭಜಂತ್ರಿ, ಆಂಜನೇಯ, ರಾಮಕೃಷ್ಣ ಭಜಂತ್ರಿ, ಗಂಗಣ್ಣ ಕರವೇ, ದುರುಗರಾಜ್, ನಂದಪ್ಪ ಮಡ್ಡಿ ಲಿಂಗದಹಳ್ಳಿ, ಬೂದೆಪ್ಪ, ನರಸಿಂಹಲು ಬ್ರೂಸ್ಲಿ, ರಮೇಶ ಭಜಂತ್ರಿ, ಈರಣ್ಣ ಸೇರಿದಂತೆ ಇನ್ನೀತರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಇದ್ದರು.
ಹೊಸ ದೆಹಲಿ.01.ಆಗಸ್ಟ್.25:- ಮುಜಫರ್‌ಪುರದಿಂದ ಅಹಮದಾಬಾದ್‌ನ ಸಬರಮತಿ ಬಿಜಿ ನಿಲ್ದಾಣಕ್ಕೆ ಚಲಿಸುತ್ತಿದ್ದ ಜನಸಾಧಾರಣ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಇಂದು ಕಾನ್ಪುರದ ಭೌರ್‌ಪುರದ…
ಹೊಸ ದೆಹಲಿ.01.ಆಗಸ್ಟ್.25:- ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಇಂದು ಮಾತನಾಡಿ, ಹಬ್ಬದ ದಟ್ಟಣೆಯ ಸಮಯದಲ್ಲಿ "ಸ್ಥಳದಲ್ಲೇ ಜನದಟ್ಟಣೆ ಕಡಿಮೆ…
ಬೀದರ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ, ಶಿಥಿಲ ಶಾಲಾ ಕಟ್ಟಡ ದುರಸ್ತಿ,ಬೀದರ.01.ಆಗಸ್ಟ.25:- ಬೀದರ ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ, ಶಿಥಿಲ ಶಾಲಾ ಕಟ್ಟಡ…
ಬೀದರ.01.ಆಗಸ್ಟ್.25:- ಯುವಕರು ಮಧ್ಯಪಾನ, ತಂಬಾಕು, ಗುಟುಕಾ ಹಾಗೂ ಇನ್ನಿತರ ದುಶ್ಚಟಗಳಿಗೆ ಮಾರುಹೋಗದೇ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ಬೀದರ ತೋಟಗಾರಿಕಾ ಮಹಾವಿದ್ಯಾಲಯದ…
ಬೀದರ.01.ಆಗಸ್ಟ್.25- ಬಸವಕಲ್ಯಾಣದ ನಾರಾಯಣಪೂರದಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 11ನೇ ತರಗತಿಯ ಖಾಲಿಯಿರುವ ಸೀಟುಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವಿದ್ಯಾರ್ಥಿಗಳು ರಾಜ್ಯ…
ಬೀದರ.01.ಆಗಸ್ಟ್25:- ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ…