ಮೈಸೂರು.26.ಏಪ್ರಿಲ್.25- ಪೆಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಅವಶ್ಯಕತೆ ಇಲ್ಲ. ನಾವು ಬಿಗಿಯಾದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭದ್ರತಾ ವೈಫಲ್ಯತೆ ಇದೆ ಎಂದು ನಾನು ಆರಂಭದಲ್ಲೇ ಹೇಳಿದ್ದೆ. ಈಗ ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಂಡಿದೆ. ಅಲ್ಲಿಗೆ ನಾನು ಹೇಳಿದ್ದು ನಿಜವಾಗಿದೆ ಎಂದರು.
ಭದ್ರತಾ ವ್ಯವಸ್ಥೆಯನ್ನು ಬಿಗಿ ಮಾಡಬೇಕು. ನಾವು ಯುದ್ಧದ ಪರ ಇಲ್ಲ, ಶಾಂತಿ ವ್ಯವಸ್ಥೆ ಇರಬೇಕು. ಜನರಿಗೆ ಭದ್ರತೆ ಇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಜಮ್ಮು-ಕಾಶ್ಮೀರ ಪ್ರವಾಸಿ ಸ್ಥಳ. ಅಲ್ಲಿ ಭದ್ರತೆಯನ್ನು ಬಿಗಿಗೊಳಿಸಬೇಕಿತ್ತು. ಪುಲ್ವಾಮಾ ದಾಳಿಯ ಬಳಿಕ ಎಚ್ಚರಿಕೆಯಿಂದ ಇರಬೇಕಿತ್ತು. ಗುಪ್ತಚರ ಹಾಗೂ ಭದ್ರತೆಯ ವೈಫಲ್ಯ ಎದ್ದುಕಾಣುತ್ತಿದೆ
ಜಮ್ಮು-ಕಾಶ್ಮೀರದಲ್ಲಿ ಸುರಕ್ಷಿತ ವಾತಾವರಣ ಇದೆ ಎಂದು ಜನ ನಂಬಿ ಪ್ರವಾಸ ಹೋಗುತ್ತಿದ್ದರು. ಕೇಂದ್ರದವರಿಗೆ ರಕ್ಷಣೆ ನೀಡಲು ಸಾಧ್ಯವಾಗಿಲ್ಲ, 26 ಮಂದಿಯ ಜೀವ ಹೋಗಿದೆ.
ಈಗ ಏನೆಲ್ಲಾ ಕ್ರಮ ಕೈಗೊಂಡರೂ ಅಷ್ಟು ಜೀವಗಳು ವಾಪಸ್ ಬರುತ್ತವೆಯೇ? ಎಂದರು.ದಾಳಿಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಇರಲಿಲ್ಲ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಸರ್ಕಾರದ ಪರವಾಗಿ ಸಂತೋಷ್ ಲಾಡ್ ಅವರನ್ನು ಕಳುಹಿಸಲಾಗಿದ್ದು, ಅವರು ವಾಪಸ್ ಬಂದಿದ್ದಾರೆ. ತಾವಿನ್ನೂ ಅವರೊಂದಿಗೆ ಚರ್ಚೆ ಮಾಡಿಲ್ಲ. ಅವರಿಂದ ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ ಕಳುಹಿಸುವ ಸಂಬಂಧ ಕೇಂದ್ರಸರ್ಕಾರಕ್ಕೆ ಅಗತ್ಯ ಸಹಕಾರ ನೀಡುತ್ತೇವೆ. ಕೇಂದ್ರಕ್ಕೆ ಎಲ್ಲಾ ರೀತಿಯ ಮಾಹಿತಿಗಳನ್ನು ಒದಗಿಸುತ್ತೇವೆ. ಎಷ್ಟು ಜನ ಇಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಸದ್ಯಕ್ಕಿಲ್ಲ, ಬಹುತೇಕ ಬೆಂಗಳೂರಿನಲ್ಲೇ ಹೆಚ್ಚು ಜನ ವಾಸಿಸುತ್ತಿರಬಹುದು ಎಂದರು.
ಪಹಲ್ಯಾಮ್ ದಾಳಿಯ ಬಳಿಕ ಕರೆಯಲಾದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಬೇಕಿತ್ತು. ಅದನ್ನು ಬಿಟ್ಟು ಬಿಹಾರದಲ್ಲಿ ಚುನಾವಣೆ ಎದುರಾಗಲಿದೆ ಎಂಬ ಕಾರಣಕ್ಕೆ ಅಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಯಾವುದು ಮುಖ್ಯ ಎಂಬುದು ಇದರಿಂದ ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ಜನರನ್ನು ನಂಬಿಸಿ ಟೋಪಿ ಹಾಕುತ್ತಿದೆ ಎಂದು ಆರೋಪಿಸಿದರು.
26 ಜನರ ಸಾವನ್ನು ಕೇಂದ್ರಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದರು. ತಮ್ಮ ಆರೋಗ್ಯ ಈಗ ಶೇ.90ರಷ್ಟು ಸುಧಾರಿಸಿದೆ. ಇನ್ನೂ ಶೇ.10 ರಷ್ಟು ಸಮಸ್ಯೆಯಿದೆ. ಆದರೆ ತಿರುಗಾಡುವಷ್ಟು ಆರಾಮಾಗಿದ್ದೇನೆ ಎಂದರು. ಮೊದಲನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಚಾಮರಾಜನಗರಕ್ಕೆ ಭೇಟಿ ನೀಡಿ ಕಳಂಕವನ್ನು ತೊಳೆದಿದ್ದೇನೆ. ಅಲ್ಲಿಗೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಆಗಲೇ ಸುಳ್ಳಾಯಿತು. ಮೊನ್ನೆ ಹೋಗಿರುವುದು ಪುನರಾವರ್ತನೆಯ ಭೇಟಿ ಎಂದು ಹೇಳಿದರು.
ಬೆಂಗಳೂರು.11.ಆಗಸ್ಟ್.25:-ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಗುರುತಿಸಲಾಗಿರುವ ಅನರ್ಹ ಪಡಿತರದಾರರನ್ನು ಎಪಿಎಲ್‍ಗೆ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಲಾಗುವಾದು ಅಂದು…
ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…
ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…
ರಾಯಚೂರು.11.ಆಗಸ್ಟ್.25: ಇಲ್ಲಿನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್…
ಬೆಂಗಳೂರು.11.ಆಗಸ್ಟ್.25:- ರಾಜ್ಯದ ಸರ್ಕಾರಿ ಹಾಗೂ ಅನುದಾನಿತ್ ಶಾಲೆಗಳ SSLC ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಾಜ್ಯ…
ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ…