ಪರಿಸರ ಪ್ರಜ್ಞೆ ಹಾಗೂ ಕಾನೂನು ಪ್ರಜ್ಞೆ ಜೀವ ಸಂಕುಲಕ್ಕೆ ವರದಾನ-ನ್ಯಾ.ಪ್ರಕಾಶ್ ಬನಸೋಡೆ

ಬೀದರ.05.ಜೂನ್.25:- ತಾಪಮಾನ ಏರಿಕೆಯ ಸಂದರ್ಭದಲ್ಲಿ ಎಲ್ಲರೂ ಪರಿಸರವನ್ನು ರಕ್ಷಿಸುವ ಪ್ರಾಮಾಣಿಕ ಕಾಳಜಿ ಹೊಂದಬೇಕಾಗಿದೆ.

ಅದರೊಂದಿಗೆ ಸುಂದರ ಸಮಾಜದ ನಿರ್ಮಾಣದಲ್ಲಿ ಈ ನೆಲದ ಕಾನೂನಿನ ಅರಿವು ಹಾಗೂ ಜಾಗೃತಿ ಎಲ್ಲರಿಗೂ ಅವಶ್ಯಕವಾಗಿದೆ ಎಂದು ಬೀದರನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ್ ಬನಸೋಡೆ ತಿಳಿಸಿದರು.

ಅವರು ಬೀದರ ವಿಶ್ವವಿದ್ಯಾಲಯದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ, ಜಿಲ್ಲಾ ವಕೀಲರ ಸಂಘ, ಬೀದರ ಜಿಲ್ಲಾ ಅರಣ್ಯ ಇಲಾಖೆ, ಬೀದರ ಹಾಗೂ ಬೀದರ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಪರಿಸರ ಮಾಲಿನ್ಯ ಮಿತಿಮೀರಿದೆ. ಬೇಜವಾಬ್ದಾರಿಯ ವಿಲೇವಾರಿಯಿಂದಾಗಿ ಪರಿಸರ ಹಾಳಾಗುತ್ತಿದೆ. ಆದ್ದರಿಂದ ಎಲ್ಲರೂ ಪರಿಸರವನ್ನು ಉಳಿಸಬೇಕಾಗಿದೆ. ಸುಂದರ ಸಮಾಜದ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಈ ನೆಲದ ಕಾನೂನನ್ನು ಗೌರವಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಿದೆ.

ಪರವಾನಗಿಯಿಲ್ಲದ ವಾಹನ ಚಾಲನೆಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ತಡೆಗಾಗಿ ಪೆÇೀಕ್ಷೆ ಕಾನೂನಿದೆ.

ಹೀಗಾಗಿ ಪ್ರತಿಯೊಬ್ಬರು ವಾಹನ ಚಾಲನೆಯ ಪರವಾನಗಿ, ವಾಹನದ ಮತ್ತು ವ್ಯಕ್ತಿಯ ಜೀವವಿಮೆಯನ್ನು ಮಾಡಿಸಬೇಕಾದ ಅಗತ್ಯವಿದೆ.

ಪರಿಸರದ ರಕ್ಷಣೆಯೊಂದಿಗೆ ಕಾನೂನಿನ ರಕ್ಷಣೆಯೂ ಸಹ ಗೌರವದಿಂದ ಕಂಡಾಗ ಸುಂದರ, ಸ್ವಸ್ಥ, ಸದೃಢ ದೇಶ ಕಟ್ಟಲು ಸಾಧ್ಯವೆಂದರು.

ದೇಶದ ಭವಿಷ್ಯ ಯುವಕರ ಮೇಲಿದೆ. ಯುವಕರು ಉತ್ತಮ ಶಿಕ್ಷಣ ಪಡೆದು, ಮತ್ತು ಸೇವೆ ನೀಡುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮವಹಿಸಿ ಅಧ್ಯಯನ ಮಾಡಿದಾಗ ಯಶಸ್ಸು ಪಡೆಯಲು ಸಾಧ್ಯ. ಈ ಭಾಗದಲ್ಲಿ 371(ಜೆ) ಅಡಿಯಲ್ಲಿ ಅವಕಾಶ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶಿವಶರಣಪ್ಪ ಪಾಟೀಲ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಮಿತಿ ಮೀರಿ ಪರಿಸರ, ಭೂಮಿ ವಿಷಮಯವಾಗುತ್ತಿದೆ. ಜಾಗತಿಕ ತಾಪಮಾನ, ಪರಿಸರ ಹಾಳಾಗುತ್ತಿದೆ. ಜನ್ಮದಿನದ ಸಂದರ್ಭದಲ್ಲಿ ಸಸಿ ನೆಡುವುದು, ಹೆಲೈಟ್ ನೀಡುವಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.

ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಬಿ.ಎಸ್.ಬಿರಾದಾರ ಮಾತನಾಡಿ, ಆಧುನಿಕದ ಯುಗದಲ್ಲಿ ನಮ್ಮ ಆಹಾರ, ವಿಹಾರ, ಸಂಸ್ಕøತಿಗಳು ಬದಲಾಗುತ್ತಿವೆ.

ಮಸಾಲೆಯುಕ್ತ ಪದಾರ್ಥಗಳ ಸೇವನೆಯಿಂದ ಹಣದ ವ್ಯಯದೊಂದಿಗೆ, ಆರೋಗ್ಯವನ್ನೂ ಸಹ ಹಾಳು ಮಾಡಿಕೊಳ್ಳುತ್ತಿದ್ದೇವೆ. ಮಸಾಲೆಯುಕ್ತ ಪದಾರ್ಥಗಳು ಅಧರಕ್ಕೆ ಸಿಹಿ, ಉದರಕ್ಕೆ ಉದರಕ್ಕೆ ಕಹಿಯ ಕಹಿಯಾಗಿರುತ್ತವೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ಸರಳ, ಸಾತ್ವಿಕ ಆಹಾರ ಸೇವನೆಯ ಅವಶ್ಯಕತೆಯಿದೆ. ಆರೋಗ್ಯಕ್ಕೆ ಹಾನಿಯಾದರೆ ದೇಶಕ್ಕೂ ಸಹ ಹಾನಿಯಾದಂತೆಯೆ, ಬೀದರ ವಿಶ್ವವಿದ್ಯಾಲಯದಲ್ಲಿ ಮುಂದಿನ ದಿನಮಾನಗಳಲ್ಲಿ ಬೀದರ ವಿಶ್ವವಿದ್ಯಾಲಯದಲ್ಲಿ ಔಷಧೀಯ ವನ ನಿರ್ಮಾಣದ ಮಾಡುವ ಉದ್ದೇಶವಿದೆ.

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಹಾಗೂ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಬೀದರ ವಿಶ್ವವಿದ್ಯಾಲಯದ ಕುಲಸಚಿವರು(ಆಡಳಿತ) ಸುರೇಖಾ ಕೆ.ಎ.ಎಸ್. ಪ್ರಾಸ್ತಾವಿಕ ಮಾತನಾಡಿ, ಹಸಿರೇ ಉಸಿರು, ಪರಿಸರದ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಿದೆ. ಪರಿಸರವೆಂಬ ತೊಟ್ಟಿಲಲ್ಲಿ ಮನುಷ್ಯ ಬಾಳಬೇಕಾದರೆ ಅದನ್ನು ಅತ್ಯಂತ ಕಾಳಜಿಯಿಂದ ಉಳಿಸಿಕೊಳ್ಳಬೇಕಾಗಿದೆ. ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಎಲ್ಲರೂ ಕಾನೂನನ್ನು ಗೌರವಿಸಬೇಕಾದ ಅನಿವಾರ್ಯತೆಯಿದೆ. ಹಾಗಾದಾಗ ಮಾತ್ರ ಸಮೃದ್ಧ ಸಮಾಜದ ಕನಸು ಕಾಣಲು ಸಾಧ್ಯವೆಂದರು.

ಈ ಸಂದರ್ಭದಲ್ಲಿ ಬೀದರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಷನ್ಮುಖಯ್ಯಾ ಬಿ.ಸ್ವಾಮಿ, ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಸಚಿನ ಮಲ್ಕಾಪೂರೆ, ಬೀದರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ ಕನಕಟ್ಟಾ, ಬೀದರ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಜಾಧವ, ಜೀವ ವೈವಿಧ್ಯ ನಿರ್ವಹಣ ಸಮಿತಿಯ ಸದಸ್ಯ ಡಾ.ಪೃಥ್ವಿರಾಜ ಸುದರ್ಶನ ಲಕ್ಕಿ, ರಘುನಾಥ ರಾಠೋಡ, ಅರಣ್ಯ ಪಾಲಕರಾದ ಸಂಗಮೇಶ, ಬೀದರ ವಿಶ್ವವಿದ್ಯಾಲಯದ ವಿಶೇμoಧಿಕಾರಿಗಳು ಹಾಗೂ ಎನ್.ಎಸ್.ಎಸ್.ಸಂಯೋಜನಾಧಿಕಾರಿಗಳಾದ ಡಾ.ರವೀಂದ್ರನಾಥ ವಿ.ಗಬಾಡಿಂ, ಡಾ.ರಾಮಚಂದ್ರ ಗಣಾಪೂರ, ವಾಣಿಶ್ರೀ ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

6 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

11 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

16 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

22 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

22 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

22 hours ago