ಉಚಿತ ₹15,000 ವಿದ್ಯಾರ್ಥಿವೇತನದೊಂದಿಗೆ AI ತರಬೇತಿಗೆ: ಅರ್ಜಿ ಆಹ್ವಾನ!

ಬೆಂಗಳೂರು.04.ಏಪ್ರಿಲ್.25:- ಕರ್ನಾಟಕ ರಾಜ್ಯ ಸರ್ಕಾರ ಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ ವೃತ್ತಿಪರ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಿದೆ.

ಈ ಯೋಜನೆಯಡಿಯಲ್ಲಿ, ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ತಾಂತ್ರಿಕ ಸಂಸ್ಥೆ (IIT) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (NIT)ಗಳ ಮೂಲಕ Artificial Intelligence (AI) ಮತ್ತು Machine Learning (ML) ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ನೀಡಲಾಗುತ್ತದೆ.

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ 2024-25ನೇ ಸಾಲಿನ ಆಯವ್ಯಯ ಭಾಷಣ (ಕಂಡಿಕೆ-174) ಪ್ರಕಾರ, ಈ ತರಬೇತಿ ಕಾರ್ಯಕ್ರಮದ ಅವಧಿ ಗರಿಷ್ಠ ಎರಡು ವಾರಗಳಾಗಿದ್ದು, ಶಿಷ್ಯವೇತನ ಸಹಿತ ಉನ್ನತ ಮಟ್ಟದ ತರಬೇತಿ ಲಭ್ಯವಿರಲಿದೆ.

ತರಬೇತಿ ವಿಷಯ ಎಐ AI ಸಂಬಂಧಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಮತ್ತು ಮಷಿನ್ ಲರ್ನಿಂಗ್ ಕೋರ್ಸ್‌.

ಸೌಲಭ್ಯ ನೀಡುವ ಇಲಾಖೆ ಸಮಾಜ ಕಲ್ಯಾಣ ಇಲಾಖೆ

ಮಾಸಿಕ ಶಿಷ್ಯವೇತನ Rs.15,000.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಏಪ್ರಿಲ್ 13, 2025

ದೂರವಾಣಿ ಸಂಖ್ಯೆ : 080- 26711096 ಇಲ್ಲಿ ಸಂಪರ್ಕಿಸಬಹುದು.

ಅರ್ಹತೆ: BE/B.Tech ಪದವಿ, ಕನಿಷ್ಠ 55% ಮಾರ್ಕ್ಸ್ ಬೇಕು.

ತರಬೇತಿ ಅವಧಿ: ಗರಿಷ್ಠ 2 ವಾರಗಳು (IISc, IIT, NIT ಮುಂತಾದ ಸಂಸ್ಥೆಗಳಲ್ಲಿ).

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ 2024-25ನೇ ಸಾಲಿನ ಆಯವ್ಯಯ ಭಾಷಣ (ಕಂಡಿಕೆ-174) ಪ್ರಕಾರ, ಈ ತರಬೇತಿ ಕಾರ್ಯಕ್ರಮದ ಅವಧಿ ಗರಿಷ್ಠ ಎರಡು ವಾರಗಳ ಆಗಿದ್ದು, ಪ್ರತಿಯೊಬ್ಬರಿಗೆ 15,000 ರೂ. ಶಿಷ್ಯವೇತನ ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ (ಗ್ರೇಡ್‌-1), ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬನಶಂಕರಿ, ಬೆಂಗಳೂರು ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸಲು ದಾಖಲಾತಿಗಳು:

ಅರ್ಜಿದಾರರ ಆಧಾರ್ ಕಾರ್ಡ ಪ್ರತಿ/Aadhar card.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste Certificate.

ಪೋಟೋ/Photo.

ಅಭ್ಯರ್ಥಿಯ ಅಂಕಪಟ್ಟಿ/Marks Card.

ಬ್ಯಾಂಕ್ ಪಾಸ್ ಬುಕ್/Bank Pass Book

ಈ ಮೂಲಕ ಇಂಜಿನಿಯರಿಂಗ್ ಪದವೀಧರರು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ನೈಪుణ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಸಹಾಯವಾಗಲಿದೆ.ನಿಗದಿತ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಏಪ್ರಿಲ್ 13 ರೊಳಗೆ ಅರ್ಜಿ ಸಲ್ಲಿಸಬಹುದು.

prajaprabhat

Recent Posts

ಸರಕಾರಿ ಪ್ರಥಮ ದರ್ಜೆ ಕಾಲೇಜು, ಔರಾದನಲ್ಲಿ ಸಂಭ್ರಮದ ಜನಪದ ಉತ್ಸವ

ಬೀದರ.08.ಏಪ್ರಿಲ್.25:- ಔರಾದ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜನಪದ ಉತ್ಸವ 2025…

29 minutes ago

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜ್ಞಾನಸುಧಾ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.!

ಬೀದರ.08.ಏಪ್ರಿಲ್.25:-ಪ್ರಸಕ್ತ ಶೈಕ್ಷಣಿಕ ಸಾಲಿನ 2024-25 ರ ದ್ವಿತೀಯ ಪಿ.ಯು.ಸಿ ಪರೀಕ್ಷೆ -1 ರಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ಬೀದರ್.…

3 hours ago

ಬೀದರ | ಮಾಂಜರಾ ನದಿಯಲ್ಲಿ ಸಾವಿರಾರು ಕೋಟಿ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ!

ಬೀದರ.08.ಏಪ್ರಿಲ.25:- ಬೀದರ ಜಿಲ್ಲೆಯ ಭಾಲ್ಕಿ ತಾಲುಕಿನ ವಾಂಜರಖೇಡಾ ಹಾಗೂ ಹುಲಸೂರ ತಾಲೂಕಿನ ಜಾಮಖಂಡಿ ಗ್ರಾಮಗಳ ಮಧ್ಯ ಮಾಂಜರಾ ನದಿಯಲ್ಲಿ ಮರಳು…

3 hours ago

ಮಹಾ ಸೂರ್ಯ ವಂದನಂ’ ಕಾರ್ಯಕ್ರಮವನ್ನು

ಮಹಾ ಸೂರ್ಯ ವಂದನಂ' ಕಾರ್ಯಕ್ರಮವನ್ನು ಆಯೋಜಿಸಲು ಅರಕುವಿನಲ್ಲಿ 21,850 ಜನರು ಒಟ್ಟಾಗಿ ಸೇರಿರುವುದು ಒಂದು ದೊಡ್ಡ ವಿಷಯ. 108 ನಿಮಿಷಗಳಲ್ಲಿ…

6 hours ago

ದೇಶದ ಗಡಿಗಳನ್ನು ರಕ್ಷಿಸಲು ಸರ್ಕಾರ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು

ಹೊಸ ದೆಹಲಿ.08.ಏಪ್ರಿಲ್.25:-ದೇಶದ ಗಡಿಗಳನ್ನು ರಕ್ಷಿಸಲು ಸರ್ಕಾರ ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಯನ್ನು ನಿಯೋಜಿಸುತ್ತಿದೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕರ ಒಳನುಸುಳುವಿಕೆಯನ್ನು…

12 hours ago

ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು

ಮುಂಬೈ.08.ಏಪ್ರಿಲ್.25:-ಐಪಿಎಲ್ ಟಿ20 ಕ್ರಿಕೆಟ್‌ನಲ್ಲಿ ನಿನ್ನೆ ರಾತ್ರಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು…

12 hours ago