ಪಂಚತಂತ್ರ 2.0′ ತಂತ್ರಾಂಶದಲ್ಲಿ ಆಸ್ತಿಗಳಿಗೆ ತೆರಿಗೆ ವಿಧಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು.29.ಏಪ್ರಿಲ್.25:- ರಾಜ್ಯ ಸರ್ಕಾರ ಆಸ್ತಿ ತೆರಿಗೆ ವಿಧಿಸುವ ಪಂಚತಂತ್ರ 2.0 ತಂತ್ರಾಂಶದಲ್ಲಿ ಆಸ್ತಿಗೆ ತೆರಿಗೆ ವಿಧಿಸುವ ಬಗ್ಗೆ ಆದೇಶ ಹೊರಡಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರಸ್ತೆಯ ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳನ್ನು ವಿಧಿಸಲು ಸೈಯಂಚಾಲಿತ ತೆರಿಗೆ ಲೆಕ್ಕಾಚಾರ ಮಾಡುವ ವಿಧಾನವನ್ನು Automation of Property Tax ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ವಂಚತಂತ್ರ 2.0 ತಂತ್ರಾಂಶದಲ್ಲಿ ‘ತೆರಿಗೆ ಸಂಗ್ರಹಣೆ’ ಮಾಡ್ಯುಲ್ ನ್ನು ಅಭಿವೃದ್ಧಿಪಡಿಸಿ, ಅನುಷ್ಠಾನಗೊಳಿಸಲಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (ಗ್ರಾಮ ಪಂಚಾಯತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು, 2006 ರ ನಿಯಮ 21 ರನ್ವಯ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿರುವ ಅವ್ಯವಹಾರಗಳನ್ನು ತಡೆಗಟ್ಟಿ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ತೆರಿಗೆ, ದರ ಮತ್ತು ಫೀಜುಗಳನ್ನು ಸಂಗ್ರಹಣೆ ಮಾಡಲು ನಮೂನೆ-3ರಲ್ಲಿ ನಿಗಧಿಪಡಿಸಿರುವ ಮ್ಯಾನ್ಯುಯಲ್ ರಶೀದಿಗಳನ್ನು ನೀಡುವ ಬದಲು ಡಿಜಿಟಲ್ ರಶೀದಿಗಳನ್ನು ಸೃಜಿಸಿ, ಸಾರ್ವಜನಿಕರಿಗೆ ನೀಡಲು ಪಂಚತಂತ್ರ 20 ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.



ಅದರಂತೆ, ಕಳೆದ ಆರ್ಥಿಕ ವರ್ಷದಲ್ಲಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರನ್ನಯ 2024-25 ನೇ ಸಾಲಿನಲ್ಲಿ ಪ್ರತಿಯೊಂದು ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸಿ, ಆಸ್ತಿಗಳಿಗೆ ತೆರಿಗೆಯನ್ನು ವಿಧಿಸಲಾಗಿದೆ.

ಇದರಿಂದಾಗಿ, ಗ್ರಾಮ ಪಂಚಾಯತಿಗಳ ಅಸ್ತಿ ತೆರಿಗೆಯ 2024-25 ನೇ ಸಾಲಿನ ಬೇಡಿಕೆಯು ರೂ.1600/- ಕೋಟಿಗೆ ತಲುಪಿದೆ ಹಾಗೂ ಸಾರ್ವಜನಿಕರು ಆನ್-ಲೈನ್ ಮೂಲಕ ತೆರಿಗೆ ಪಾವತಿಸುವಲ್ಲಿ ಸಹಕಾರಿಯಾಗಿದೆ.
ಆದರೇ, ಕೆಲವೊಂದು ಗ್ರಾಮ ಪಂಚಾಯತಿಗಳು ಒಂದೇ ಆಸ್ತಿಗೆ ಹಲವಾರು ಬಾರಿ Property Profile ಅನ್ನು ಇಂಧೀಕರಿಸಿ, ಆಸ್ತಿಗಳಿಗೆ ತೆರಿಗೆಯನ್ನು ಬದಲಾವಣೆ ಮಾಡುವ ಮೂಲಕ ಸಾರ್ವಜನಿಕರಿಗೆ ತೆರಿಗೆ ಪಾವತಿಸಲು ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ, ಒಂದು ಬಾರಿ ಆಸ್ತಿ ಮಾಲೀಕರು ಆಯಾ ವರ್ಷದ ತೆರಿಗೆಯನ್ನು ಪಾವತಿಸಿದ ನಂತರ ಆಯಾ ಆರ್ಥಿಕ ಸಾಲಿನಲ್ಲಿ ಮತ್ತೊಮ್ಮೆ ಸದರಿ ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ನಿರ್ಷಿಯಗೊಳಿಸಲಾಗಿದೆ.

ಪ್ರಸ್ತುತ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2021 ರನ್ನೆಯ ಆರ್ಥಿಕ ವರ್ಷದ ಪ್ರಾರಂಭದ ಮೂರು ತಿಂಗಳ ಒಳಗಾಗಿ ಪ್ರಸಕ್ತ ಸಾಲಿನ ಸಂಪೂರ್ಣ ತೆರಿಗೆಯನ್ನು ಪಾವತಿಸುವವರಿಗೆ ಶೇ.5 ರಷ್ಟು ವಿನಾಯತಿಯನ್ನು ನೀಡಲಾಗಿದೆ.


ಅದುದರಿಂದ ಪ್ರಸ್ತುತ ಸಾಲಿನ ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ತೆರಿಗೆ ವಿಧಿಸಲು ಪಂಚತಂತ್ರ 2.0 ತಂತ್ರಾಂಶದಲ್ಲಿ ನೀಡಲಾಗಿರುವ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ಬಳಸಿ ದಿನಾಂಕ:15.05.2025 ರೊಳಗೆ ಬಳಕೆ ಮಾಡಲು ಅವಕಾಶವನ್ನು ನೀಡಲಾಗಿದೆ.

ತದನಂತರ ಯಾವುದೇ ಆಸ್ತಿಗಳಿಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಆಸ್ತಿಗಳಿಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ನಿರ್ಷ್ಕ್ರಿಯಗೊಳಿಸಲಾಗುವುದು.ಅದರಂತೆ, ಪ್ರತಿ ಆರ್ಥಿಕ ವರ್ಷದ ಪ್ರಾರಂಭದ ಒಂದು ತಿಂಗಳ ಒಳಗಾಗಿ ಅಂದರೆ 30ನೇ ಏಪ್ರಿಲ್ ರೊಳಗೆ Property Profile ಅನ್ನು ಇಂಧೀಕರಿಸುವ ಆಯ್ಕೆಯನ್ನು ಬಳಸಿ.

ಪಂಚತಂತ್ರ 20 ತಂತ್ರಾಂಶದಲ್ಲಿ ಆಸ್ತಿಗಳಿಗೆ Property Profile ಅನ್ನು ಅವಕಾಶವನ್ನು ನೀಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.

prajaprabhat

Recent Posts

ದೆಹಲಿ ಸಿಎಂ ರೇಖಾ ಗುಪ್ತಾ ಅವರು ‘ಏಕ್ ಪೆಡ್ ಮಾ ಕೆ ನಾಮ್ 2.0’ ಬಿಡುಗಡೆ ಮಾಡಿದರು

ಹೊಸ ದೆಹಲಿ.09.ಜೂನ್.25:- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ನಗರದ ಪರಿಸರವನ್ನು ಸುಧಾರಿಸಲು ಈ ಋತುವಿನಲ್ಲಿ 70 ಲಕ್ಷ ಮರಗಳನ್ನು…

2 hours ago

ಬೀದರ: ಪತ್ರಿಕಾ ಗೋಷ್ಟಿಗೆ ಅವ್ಹಾನ

ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…

3 hours ago

೨೧ ದಿನಗಳ ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ<br>

ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…

3 hours ago

ಆಧುನಿಕ ಕೋಳಿ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…

3 hours ago

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…

3 hours ago

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…

3 hours ago