ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ-ಸುರೇಖಾ ಕೆ.ಎ.ಎಸ್

ಬೀದರ.28.ಜೂನ್.25:- ನಾಡಿನ ರಾಜಧಾನಿ ಬೆಂಗಳೂರಿನ ಶಿಲ್ಪಿ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಕೆಂಪೇಗೌಡರವರoತಹ ಧೀಮಂತ ವ್ಯಕ್ತಿಗಳ, ಸಮರ್ಥ ಆಡಳಿತಗಾರರ ಅವಶ್ಯಕತೆಯಿದೆ ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ನುಡಿದರು.


ಅವರು ಶುಕ್ರವಾರ ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಮಾತನಾಡಿದರು.


ಬೆಂಗಳೂರಿನ ರಚನಾ ವಿನ್ಯಾಸವನ್ನು ಜಾಗತಿಕ ಮಟ್ಟದಲ್ಲಿ ದಾಖಲಿಸಿದ ಖ್ಯಾತಿ ಕೆಂಪೇಗೌಡರಿಗೆ ಸಲ್ಲುತ್ತದೆ. ನಾಡ ರಕ್ಷಣೆಗಾಗಿಯೇ ಕಂಕಣಬದ್ಧರಾಗಿದ್ದ ಕುಟುಂಬದ ಕುಡಿಯಾಗಿದ್ದ ಕೆಂಪೇಗೌಡರಿಗೆ ವೀರ-ಶೂರ, ನಾಯಕತ್ವದ ಸಂಸ್ಕೃತಿ ರಕ್ತಗತವಾಗಿಯೇ ಬಂದAತಿದೆ. ಹೀಗಾಗಿಯೇ ಅವರ ಆಡಳಿತ, ಕಾರ್ಯಗಳು ಅಜರಾಮರವಾಗಿವೆ ಎಂದರು.


ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿ ಮಾತನಾಡಿ, ಬೆಂಗಳೂರಿನ ಆಕರ್ಷಣೆ ಹಾಗೂ ಖ್ಯಾತಿಯಲ್ಲಿ ನಾಡಪ್ರಭು ಕೆಂಪೇಗೌಡರ ಪಾತ್ರ ಮಹತ್ವದ್ದಾಗಿದೆ. ಅತ್ಯಂತ ಸುಂದರ, ಯೋಜನಾಬದ್ಧ ನಗರದ ಕಲ್ಪನೆಯ ಕನಸುಗಾರರಾಗಿದ್ದ ಕೆಂಪೇಗೌಡರು ಜಗತ್ತು ಬೆರಗುಗೊಳ್ಳುವಂತೆ ಅಭಿವೃದ್ಧಿಯ ಕಾರ್ಯ ಕೈಗೊಂಡವರು. ಇಂದು ಜಗತ್ತಿನ ‘ಸಿಲಿಕಾನ್ ಸಿಟಿ’ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ಅತ್ಯಂತ ಸ್ವಚ್ಛ, ಸುಂದರ ಹಾಗೂ ಹಚ್ಚಹಸಿರಿನಿಂದ ನಗರವನ್ನು ತಂಪು ಹವಾಗುಣ ಉಳಿಸಿಕೊಳ್ಳುವಂತೆ ಮಾಡಿದೆ. ಇಂತಹ ಭವ್ಯ ಬೆಂಗಳೂರಿನ ಶಿಲ್ಪಿ ಕೆಂಪೇಗೌಡರಾಗಿದ್ದರು ಎಂದರು.


ಈ ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

prajaprabhat

Recent Posts

ಅಭಿ ಪಿಕ್ಚರ್ ಬಾಕಿ ಹೈ; ರಾಹುಲ್ ಗಾಂಧಿ ಹೇಳಿಕೆ ಕುತೂಹಲಕೆ ಕಾರಣ.

ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…

30 minutes ago

ನವದೆಹಲಿ: ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ NHRC ಎರಡು ವಾರಗಳ ಆನ್‌ಲೈನ್ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇಂದು ನವದೆಹಲಿಯಲ್ಲಿ ತನ್ನ ಎರಡು ವಾರಗಳ ಆನ್‌ಲೈನ್ ಅಲ್ಪಾವಧಿಯ ಇಂಟರ್ನ್‌ಶಿಪ್…

36 minutes ago

ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತೀಯ ಬಂದರು ಮಸೂದೆ, 2025 ಅನ್ನು ಲೋಕಸಭೆ ಅಂಗೀಕರಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ಲೋಕಸಭೆಯು ಭಾರತೀಯ ಬಂದರುಗಳ ಮಸೂದೆ, 2025 ಅನ್ನು ಅಂಗೀಕರಿಸಿದೆ. ಈ ಮಸೂದೆಯು ಬಂದರುಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು,…

44 minutes ago

ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ನಾಲ್ಕು ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ₹4,594 ಕೋಟಿಗೆ ಸರ್ಕಾರ ಅನುಮೋದನೆ ನೀಡಿದೆ.

ಹೊಸ ದೆಹಲಿ.12.ಆಗಸ್ಟ್.25:- ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಅಂದಾಜು ನಾಲ್ಕು ಸಾವಿರದ 594 ಕೋಟಿ ರೂಪಾಯಿಗಳ ನಾಲ್ಕು ಹೊಸ ಸೆಮಿಕಂಡಕ್ಟರ್…

53 minutes ago

ಕಚ್ಚಾ ತೈಲ ಬೆಲೆ ಇಳಿಕೆ; ಬ್ರೆಂಟ್ ಮತ್ತು $66.31, WTI ಪ್ರತಿ ಬ್ಯಾರೆಲ್‌ಗೆ $63.53

ಹೊಸ ದೆಹಲಿ.12.ಆಗಸ್ಟ್.25:- ಕಚ್ಚಾ ತೈಲ ಬೆಲೆ ಇಂದು ಕುಸಿದಿದೆ. ಕೊನೆಯದಾಗಿ ವರದಿಗಳು ಬಂದಾಗ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 66…

1 hour ago

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಸಂಸತ್ತು ಹಲವು ಬಾರಿ ಮುಂದೂಡಿಕೆ, 18 ರಂದು ಪುನರಾರಂಭ

ಹೊಸ ದೆಹಲಿ.12.ಆಗಸ್ಟ್.25:- ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆ ಮತ್ತು ರಾಜ್ಯಸಭೆ ಹಲವು…

1 hour ago