ಬೀದರ.07.ಫೆಬ್ರುವರಿ.25: ಔರಾದ(ಬಾ) ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನಾಂದೇಡ ಬೀದರ ಮುಖ್ಯ ರಸ್ತೆಗೆ ಹೊಂದಿಕೊAಡಿರುವ 02 ಎಕರೆ ಜಮೀನು ರೈತರ ಅನುಕೂಲಕ್ಕಾಗಿ ಹತ್ತಿ ಬೆಳೆಗಾರರ ಮಾರಾಟಕ್ಕಾಗಿ ಮೆ: ಸಾಯಿ ಜಿನ್ನಿಂಗ್ ಮಿಲ್, ಔರಾದ(ಬಾ) ಇವರಿಗೆ ಸಮಿತಿಯು ಲೀಸ್ ಕಂ ಸೇಲ್ ಆಧಾರದ ಮೇಲೆ ಹಂಚಿಕೆ ಮಾಡಿತ್ತು.
ಆದರೆ ಈವಾಗ ಸದರಿ ಸಂಸ್ಥೆಯವರು ಈ ಜಮೀನಿನಲ್ಲಿ ಅನಧೀಕೃತವಾಗಿ ಲೇ ಔಟ್ ಮಾಡಿ ಬೇರೆಯವರಿಗೆ ನಿವೇಶನಗಳನ್ನು ಮಾರಾಟ ಮಾಡುತ್ತಿರುವುದು ಸಮಿತಿಯ ಗಮನಕ್ಕೆ ಕಂಡು ಬಂದಿರುತ್ತದೆ. ಕಾರಣ ಈ ಮೇಲಿನ ಜಮೀನು ಯಾರೇ ಖರೀದಿಸಿದ್ದಲ್ಲಿ, ವರ್ಗಾವಣೆ ಮಾಡಿದ್ದಲ್ಲಿ, ಅದು ಕಾನೂನು ಬಾಹಿರವಾಗಿರುತ್ತದೆ.
ಇದಕ್ಕೆ ಸಮಿತಿಯು ಜವಾಬ್ದಾರಿಯಾಗಿರುವುದಿಲ್ಲ, ತಾವೇ ಜವಾಬ್ದಾರರಾಗುತ್ತಿರೆಂದು ಔರಾದ (ಬಾ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಜಮೀನು ಹತ್ತಿ ಬೆಳೆದ ರೈತರಿಗೆ ಅನುಕೂಲವಾಗಬಹುದೆಂಬ ದೃಷ್ಟಿಯಿಂದ ಮೆ: ಸಾಯಿ ಜಿನ್ನಿಂಗ್ ಮಿಲ್ ಇವರಿಗೆ ಸಮಿತಿಯು ಹತ್ತಿ ವ್ಯವಹಾರಕ್ಕಾಗಿ ಮಾತ್ರ ಹಂಚಿಕೆ ಮಾಡಿತ್ತು ಸದರಿ ಸಂಸ್ಥೆಯವರು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ನಿಯಮಗಳು ಹಾಗೂ ಸಮಿತಿಯು ವಿಧಿಸುವ ಷರತ್ತು ಹಾಗೂ ನಿಬಂಧನೆಗಳನ್ನು ಸ್ಪಷ್ಟವಾಗಿ ಉಲಂಘಿಸಿರುತ್ತಾರೆ.
ಕಾರಣ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಇವರ ಪತ್ರದನ್ವಯ ಸದರಿ 02 ಎಕರೆ ಜಮೀನನ್ನು ನಿಯಮನುಸಾರ ತೆರವುಗೊಳಿಸಲು ತಿಳಿಸಿರುವ ಪ್ರಯುಕ್ತ ಸಮಿತಿಯು ನಿಯಮನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆಂದು ಅವರು ತಿಳಿಸಿದ್ದಾರೆ.
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…