ಔರಾದ.05.ಮಾರ್ಚ.25:- ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್ ಅವರು ಬೋಂತಿ ತಾಂಡಾದಲ್ಲಿ ಸನಾತನ ಧರ್ಮದ ಪರಂಪರೆಯಲ್ಲಿ ವಿಶೇಷವಾಗಿ ನಮ್ಮ ಬಂಜಾರ ಸಮುದಾಯದವರ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಹೋಳಿ ಹಬ್ಬ ಅತ್ಯಂತ ಪ್ರಮುಖವಾದ ಹಬ್ಬ ಈ ಪ್ರಯುಕ್ತ ಹಬ್ಬದ ಸಂಭ್ರಮಕ್ಕೆ ಹಿರಿಯರ ಜೊತೆಗೂಡಿ ಕೋಲಾಟಗೈಯುವುದರ ಮೂಲಕ ಚಾಲನೆ ನೀಡಿದರು.
ಬಂಜಾರ ಸಮಾಜದ ಪರಂಪರೆಯಲ್ಲಿ ಈ ಹಬ್ಬವು ತನ್ನದೇ ಆದ ವಿಶಿಷ್ಟತೆ ಮತ್ತು ಪ್ರಾಮುಖ್ಯತೆ ಹೊಂದಿದೆ. ಸಮಾಜದ ಮಹಿಳೆಯರು ಬಣ್ಣದ ಹಬ್ಬ ಹೋಳಿಯ ಆಚರಣೆ ಮುನ್ನ ತಮ್ಮ – ತಮ್ಮ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಕೋಲಾಟದೊಂದಿಗೆ ಪದ್ಯಗಳನ್ನು ಹಾಡುತ್ತಾ ಹೆಜ್ಜೆ ಹಾಕುತ್ತಾರೆ,ಹೋಳಿ ಹಬ್ಬದಾಚರಣೆಗೆ ಹತ್ತು ದಿನಗಳ ಮುನ್ನ ನಗರಕ್ಕೆ ನಾನಾ ತಾಂಡಾಗಳಿಂದ ಆಗಮಿಸುವ ಮಹಿಳೆಯರು ಲಂಬಾಣಿ ಭಾಷೆಯಲ್ಲಿ ಪದ್ಯಗಳನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಹೋಳಿ ಹಬ್ಬದ ಆಚರಣೆಯ ವಿಶಿಷ್ಟತೆಯನ್ನು ಮೆರೆಯುತ್ತಿದ್ದಾರೆ.
ಬಂಜಾರ ಸಮುದಾಯದಲ್ಲಿ ವಿಶಿಷ್ಟವಾಗಿ ಆಚರಿಸುವ ಈ ಹಬ್ಬದ ಸೊಬಗನ್ನು ಸಾಂಪ್ರದಾಯಿಕ ಲಂಬಾಣಿ ಪದ್ಯಗಳನ್ನು ಹಾಡುತ್ತಾ ಅದರ ಮಹತ್ವವನ್ನು ಸಾದರ ಪಡಿಸುತ್ತಿದ್ದಾರೆ.
ಜಾಗತೀಕರಣದ ಪ್ರಭಾವದಿಂದ ಹಬ್ಬಗಳು ಮರೆಯಾಗುತ್ತಿದ್ದರೂ ತಾಂಡಾದ ಮಹಿಳೆಯರು ಇದನ್ನು ಗಣನೆಗೆ ತೆಗೆದುಕೊಳ್ಳದೇ ಪ್ರತಿ ವರ್ಷ ಹಳ್ಳಿ -ಹಳ್ಳಿ ಆಗಮಿಸಿ ಹೋಳಿ ಆಚರಣೆ ಕುರಿತ ಪದ್ಯಗಳನ್ನು ಹಾಡುತ್ತಾ ಹೋಳಿಯ ಹಬ್ಬದ ವಿಶಿಷ್ಟತೆಯನ್ನು ಸಾರುತ್ತಿದ್ದು ಹೆಮ್ಮೆಯ ಪ್ರತೀಕವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಯುವಕರು ಕೂಡ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.
Central University of Karnataka ಇಂಗ್ಲೀಷ್ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ. ಅರ್ಹತೆ :- ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣ…
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…