ಯಳಂದೂರು.13.ಜೂನ್.25:- ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗ ಬುದ್ಧ ಪ್ರಿಯ ಅಶೋಕ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿವೃತ್ತಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಸಾಹಿತಿ ಕೋಡಿ ಉಗನೆ ಮಂಜುನಾಥ್ ಪ್ರಸನ್ನ ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಡಾ ಬಿ ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದರು.
ಚಾಮರಾಜನಗರ ಜಿಲ್ಲೆಯು ಜನಪದಕ್ಕೆ ಹೆಸರುವಾಸಿಯಾಗಿದೆ ಪ್ರಪಂಚದ ಜನಪದ ಸಾಹಿತ್ಯದಲ್ಲಿ ಮಹದೇಶ್ವರರು ಮಂಟೇಸ್ವಾಮಿ, ಬಿಳಿಗಿರಿರಂಗರಂಗಪ್ಪನವರ ಜನಪದ ಕಾವ್ಯ ಮಹತ್ವವನ್ನು ಪಡೆದುಕೊಂಡಿದೆ ಇಂದಿಗೂ ಈ ಭಾಗದಲ್ಲಿ ಜನಪದ ಸಾಹಿತ್ಯ ಉಳಿದಿದೆ ಅಂದರೆ ಅದಕ್ಕೆ ಕಾರಣ ನೀಲಗಾರರು, ದಾಸಪ್ಪನವರು, ದೇವರಗುಡ್ಡರು ಇವರು ಮನೆ ಮನೆಗೆ ತೆರಳಿ ಗಾಯನದ ಮೂಲಕ ಅಥವಾ ಕಥೆಯ ಮೂಲಕ ಮಂಟೇಸ್ವಾಮಿ, ಮಹದೇಶ್ವರರು ಹಾಗೂ ಬಿಳಿಗಿರಿರಂಗಪ್ಪನವರ ತತ್ವಗಳನ್ನು ತಿಳಿಸಿ ಬೆಳಿಸಿದ್ದಾರೆ.
ನಮ್ಮ ಚಾಮರಾಜನಗರ ಭಾಷೆಯ ಸೊಗಡಿಗೆ ರಾಜ್ಯದ ಇತರೆ ಜಿಲ್ಲೆಯ ಜನರು ಮನಸೋತಿದ್ದಾರೆ. ಇಂದಿನ ಯುವಕರು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕಾಗಿದೆ. ಯುವಕರು ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಬರಹಗಾರರಾಗಬೇಕು.
ನಾವು ರಚಿಸಿರುವಂತಹ ಬೆಟ್ಟದಬೇಗೆ ಕವನ ಸಂಕಲನ ಆಡುಮಾತಿನ ಶೈಲಿಯಲ್ಲಿ ರಚನೆಯಾಗಿದೆ ಹಳ್ಳಿಯ ನೈಜ ಚಿತ್ರಣ ಅಡಕವಾಗಿದೆ ಪ್ರತಿಯೊಬ್ಬರೂ ಓದಬೇಕಾಗಿದೆ. ಇನ್ನೂ ಅನೇಕ ಪುಸ್ತಕಗಳನ್ನು ಹೊರತರಲಾಗುತ್ತದೆ.
ನಮ್ಮ ಚಾಮರಾಜನಗರ ಜಿಲ್ಲೆಯ ವೈಭವ ಕುರಿತು ಬರೆಯಲಾಗುತ್ತದೆ ಎಂದರು
ಎಂದರು ಈ ಸಂದರ್ಭದಲ್ಲಿ ಯರಿಯೂರು ರಾಜಣ್ಣ, ಉಪನ್ಯಾಸಕ ಉಮಾಶಂಕರ್, ಕೃಷ್ಣರಾಜ್, ದೊಡ್ಡರಾಜ್, ವಸಂತಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಮಹದೇವಸ್ವಾಮಿ,ಕುಮಾರ್ ಹಾಜರಿದ್ದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…