ಶಿವಮೊಗ.19.ಜೂನ್.25:- ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಯುವನೀತಿ 2012 ಅನುಷ್ಠಾನದಡಿಯಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ತರಲಾಗಿದ್ದು, ಆಸಕ್ತ ಶಾಲೆಗಳಿಂದ ಅರ್ಜಿ ಆಹ್ವಾನಿಸಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಯಾದ ಪ್ರತಿ ಶಾಲೆಗೆ ಪ್ರೋತ್ಸಾಹವಾಗಿ ತಲಾ ರೂ.
1.00 ಲಕ್ಷದಂತೆ ಸರ್ಕಾರದಿಂದ ಪ್ರೋತ್ಸಾಹಧನವನ್ನು ನೀಡಲು ತೀರ್ಮಾನಿಸಿದ್ದು, ಈ ಅನುದಾನದಲ್ಲಿ ರೂ. 10,000/-ಗಳನ್ನು ಆಯ್ಕೆಯಾದ ಶಾಲೆಯ ದೈಹಿಕ ಶಿಕ್ಷಕರಿಗೆ ಮತ್ತು ರೂ. 90,000/-ಗಳನ್ನು ಶಾಲೆಯ ಎಸ್.ಡಿ.ಎಂ.ಸಿ.ಗೆ ಅಗತ್ಯ ಕ್ರೀಡಾ ಸಾಮಗ್ರಿಗಳ ಖರೀದಿಸಬೇಕಾಗಿರುತ್ತದೆ.
ಆಸಕ್ತ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆಗಳು 2024-25ನೇ ಸಾಲಿನ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿರುವ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳನ್ನು ಹೊಂದಿದ ಜಿಲ್ಲೆಯ ಸರ್ಕಾರಿ ಶಾಲೆಯವರು ಪ್ರಸ್ತಾವನೆಯನ್ನು
ಕೊನೆಯ ದಿನಾಂಕ:ಜೂ. 25,
ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಶಿವಮೊಗ್ಗ ಸಲ್ಲಿಸುವಂತೆ ಇಲಾಖೆ ಸಹಾಯಕ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9900280416 ನ್ನು ಸಂಪರ್ಕಿಸುವುದು.
ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ…
ಬೀದರ.07.ಆಗಸ್ಟ್.25:- ಪ್ರತಿ ವರ್ಷದಂತೆ ಈ ವರ್ಷವು ಆಗಸ್ಟ್.15 ರಂದು ಸ್ವಾತಂತ್ರ್ಯೊತ್ಸವ ದಿನಾಚರಣೆಯನ್ನು ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ…
ಬೀದರ.07.ಆಗಸ್ಟ್.25:- ಸರಕಾರಿ ಆದರ್ಶ ವಿದ್ಯಾಲಯ ಜನವಾಡಾ ಶಾಲೆಯಲ್ಲಿ 2025-26ನೇ ಸಾಲಿಗೆ 6ನೇ ತರಗತಿ ಖಾಲಿ ಇರುವ ಸೀಟುಗಳಿಗೆ ನಾಲ್ಕನೇ ಸುತ್ತಿನ…
ಬೀದರ.07.ಆಗಸ್ಟ್.25:- 2025-26ನೇ ಸಾಲಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಬಿವೃದ್ಧಿ ನಿಗಮ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ವಿವಿಧ ನಿಗಮಗಳ…
ಬೀದರ.07.ಆಗಸ್ಟ್.25:- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೀದರ ಜಿಲ್ಲಾ ವಕೀಲರ ಸಂಘ ಮತ್ತು…
ಬೀದರ.07.ಆಗಸ್ಟ್.25:- ಚಿಟಗುಪ್ಪಾ ತಾಲ್ಲೂಕಿನ ಮುನ್ನಾಏಖೇಳ್ಳಿ ಗ್ರಾಮದಲ್ಲಿ ಮೂವರು ನಿನ್ನೆ ನಾಯಿ ಕಡಿತದಿಂದ ಗಂಭೀರವಾಗಿ ಗಾಯಗೊಂಡು ಬ್ರಿಮ್ಸ್‍ನಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ…