ಚಿಕ್ಕೋಡಿ.19.ಏಪ್ರಿಲ್.25:- ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯ ಮಾಪನದ ವೇಳೆ ವಿದ್ಯಾರ್ಥಿಯೊಬ್ಬ ಪ್ರಶ್ನೆಗಳಿಗೆ ಉತ್ತರದ ಬದಲು ಸಿನಿಮಾ ಹಾಡು,ಕಥೆ,ಕವನ ಬರೆದು ಸಿಕ್ಕಿಬಿದ್ದ ಘಟನೆಗಳನ್ನು ನೋಡಿರ್ತೀರಾ.ಆದರೆ ಇಲ್ಲೊಬ್ಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮೌಲ್ಯ ಮಾಪನ ಮಾಡುವ ಶಿಕ್ಷಕರಿಗೆ 500 ರೂ.
ನೋಟು ಇಟ್ಟು ತನ್ನನ್ನು ಪಾಸ್ ಮೂಡುವ ಮೂಲಕ ತನ್ನ ಲವ್ ಸ್ಟೋರಿಯನ್ನು ಉಳಿಸುವಂತೆ ಕೇಳಿಕೊಂಡಿದ್ದಾನೆ.
ಚಿಕ್ಕೋಡಿಯ ಸ್ಟೂಡೆಂಟ್ ಒಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತನ್ನನ್ನು ಪಾಸ್ ಮಾಡುವಂತೆ ಉತ್ತರ ಪತ್ರಿಕೆಯಲ್ಲಿ ಬರೆದು ಶಿಕ್ಷಕರಿಗೆ ವಿಚಿತ್ರ ಬೇಡಿಕೆಯಿಟ್ಟ ಸಂಗತಿ ಬೆಳಕಿಗೆ ಬಂದಿದೆ. ಹೌದು, ನೀವು ನನ್ನನ್ನು ಎಕ್ಸಾಂ ನಲ್ಲಿ ಪಾಸ್ ಮಾಡಿದರೆ ಮಾತ್ರ ನನ್ನ ಪ್ರೇಯಸಿ ನನ್ನನ್ನು ಲವ್ ಮಾಡುವುದಾಗಿ ಹೇಳಿದ್ದಾಳೆ. ಹೀಗಾಗಿ ದಯಮಾಡಿ ನನ್ನನ್ನು ಓಎಸ್ ಮಾಡಿ ಎಂದು ಬೇಡಿಕೊಂಡಿದ್ದಾನೆ.
ಶಿಕ್ಷಕರೇ..ಪ್ಲೀಸ್ ನನ್ನ ಲವ್ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಉತ್ತರ ಪತ್ರಿಕೆಯ ಜೊತೆಗೆ 500 ರುಪಾಯಿ ಹಣ ಇಟ್ಟು,ಈ ದುಡ್ಡಲ್ಲಿ ನೀವು ಚಹಾ ಕುಡಿಯಿರಿ ಎಂದು ಬೇಡಿಕೊಂಡ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.ಆದ್ರೆ ಈ ವಿದ್ಯಾರ್ಥಿ, ಸರ್ ನನ್ನನ್ನು ದಯವಿಟ್ಟು ಪಾಸ್ ಮಾಡಿ.
ನಿಮಗೆ ದೇವರು ಒಳ್ಳೆಯದು ಮಾಡಲಿ, ನಿಮ್ಮ ಹೆಸರು ಹೇಳಿ ಬದುಕುತ್ತೀನಿ ಎಂದು ವಿನಮ್ರವಾಗಿ ಬೇಡಿಕೊಂಡ ಉದಾಹರಣೆಯೂ ಇದೆ. ಆದರೆ ಹೀಗೆ ಲವ್ ಮಾಡುತ್ತೇನೆ ಎಂದು ಬರೆದು ಹಣ ಇಟ್ಟುಕಳಿಸಿದ್ದನ್ನು ನೋಡಿ ಮೇಲ್ವಿಚಾರಕರು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು.03.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕಾಲೇಜು ಶಿಕ್ಷಣ ಇಲಾಖೆಯು…
ಕಲಬುರಗಿ.03.ಆಗಸ್ಟ್.25:- ಒಳಮೀಸಲಾತಿ ಜಾರಿಯ ಅಧಿಕಾರವನ್ನು ಸುಪ್ರೀಂಕೋರ್ಟ್ ರಾಜ್ಯಸರ್ಕಾರಗಳಿಗೆ ನೀಡಿ ಆ.1ಕ್ಕೆ ಒಂದು ವರ್ಷ ಪೂರ್ಣವಾಗಿದೆ. ವರ್ಷ ಕಳೆದರೂ ರಾಜ್ಯ ಸರ್ಕಾರ…
ಮಕ್ಕಳ ಹಕುಗಳು, ಕಾನೂನುಗಳು & ಮಕ್ಕಳ ರಕ್ಷಣಾ ನೀತಿಗಳು: ಪ.ಪೂ ಕಾಲೇಜು ಪ್ರಾಂಶುಪಾಲರಿಗೆ ತರಬೇತಿಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಎಲ್ಲಾ ಕಾಲೇಜು…
ಕೊಪ್ಪಳ.03.ಆಗಸ್ಟ್.25: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ ಅಭ್ಯರ್ಥಿಗಳಿಗೆ ಯು.ಪಿ.ಎಸ್.ಸಿ ಅಥವಾ ಕೆ.ಎ.ಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ…
ಕೊಪ್ಪಳ.03.ಆಗಸ್ಟ್.25: 23 ವರ್ಷದೊಳಗಿನವರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಗಸ್ಟ್ 4 ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿಂಧಿಕುರಬೇಟ…
ಕೊಪ್ಪಳ.03.ಆಗಸ್ಟ್.25: ಕೊಪ್ಪಳ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸ್ವಚ್ಛತಾ ಕೆಲಸಕ್ಕಾಗಿ ಅರೆಕಾಲಿಕ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಪೂರೈಸಲು ನೋಂದಾಯಿತ ಹೊರಗುತ್ತಿಗೆ ಏಜೆನ್ಸಿಗಳಿಂದ ಶಾರ್ಟ್…