ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಾಲೇಜು ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರಿಗೆ 2025 ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.
2025 ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ UGC ನಿಯಮಗಳನ್ನು ಹೊಂದಿರುವುದು ಕಡ್ಡಾಯ ಎಂದು ತಾವು ತಮ್ಮ ಇಲಾಖೆಯ ಪ್ರಕಟಣೆ ಸಂಖ್ಯೆ ಕಾಶಿಇ/ನೇವಿ -1/ಅಉಆ/99/2024-25 ಯಲ್ಲಿ ತಿಳಿಸಿರುತ್ತೀರಿ ಮತ್ತು ಅದರಂತೆ ಅಭ್ಯರ್ಥಿಯು ಪಿಎಚ್ಡಿ ವಿಥ್ ಕೋರ್ಸ್ ವರ್ಕ್, ನೆಟ್, ಸ್ಲೆಟ್ ಅಥವಾ ಸೆಟ್ ಹೊಂದಿರಬೇಕಾಗಿರುತ್ತದೆ. ಇದರಿಂದ ಕೆಲವೊಬ್ಬ UGC ಅನರ್ಹ ಅಭ್ಯರ್ಥಿಗಳು ಅತಿಥಿ ಉಪನ್ಯಾಸಕ ವೃತ್ತಿಯನ್ನು ಪಡೆಯಲೇಬೇಕು ಎಂದು ಅನ್ಯಾಯ ಮಾರ್ಗದಿಂದ ಪಿಎಚ್ಡಿ ಪ್ರಮಾಣ ಪತ್ರಗಳನ್ನು ಹಣಕ್ಕೆ ಕೇವಲ ಒಂದು ವಾರದಿಂದ ತಿಂಗಳ ಒಳಗಾಗಿ ಖರೀದಿಸಿ ಇಲಾಖೆಯ ಕಣ್ಣಿಗೆ ಮಣ್ಣೆರಚಿ, ಆಡಳಿತ ವ್ಯವಸ್ಥೆಯನ್ನೇ ವಂಚಿಸಿ, 2024-25 ನೇ ಸಾಲಿನ ಅತಿಥಿ ಉಪನ್ಯಾಸಕರ ತಾತ್ಕಾಲಿಕ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗಿರುತ್ತಾರೆ.ಅಂತಹವರಲ್ಲಿ ನನ್ನ ಗಮನಕ್ಕೆ ಬಂದಂತಹ ವ್ಯಕ್ತಿಯೆಂದರೆ ( ಗಳೆಂದರೆ ) *ರಾಜು ಇಂಗ್ಲಿಷ್* ( ಡಿ ಸಿ ಇ ಐಡಿ : ಉದಾಹರಣೆ *REN54321* ) ಇವರು ಈ ಹಿಂದೆ ಸ, ಪ್ರ, ದ ಕಾಲೇಜು *ತಾಲೂಕು / ಜಿಲ್ಲೆಯ ಹೆಸರು* ಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಈ ಹಿಂದೆ 2023 -24 ನೇ ಸಾಲಿನಲ್ಲಿ ಇಲ್ಲದ ಪಿಎಚ್ಡಿ ವಿದ್ಯಾರ್ಹತೆ 2024-25 ನೇ ಸಾಲಿನಲ್ಲಿ ದಿಡೀರನೆ ಹೊರ ರಾಜ್ಯದಿಂದ ನಕಲಿ ಪಿಎಚ್ಡಿ ಪ್ರಮಾಣ ಪತ್ರವು ದೊರೆತಿರುತ್ತದೆ.
ಇದು ನನಗೆ ದೊರೆತಿರುವ ಮಾಹಿತಿ ಮಾತ್ರವಾಗಿದ್ದು UGC ವಿದ್ಯಾರ್ಹತೆ ಕಡ್ಡಾಯವಾಗಿ ಜಾರಿಯಾಗಿರುವುದರಿಂದ ರಾಜ್ಯಾದ್ಯಂತ ನೂರಾರು ಅಭ್ಯರ್ಥಿಗಳು ನಕಲಿ ಪಿಎಚ್ಡಿ ಅನ್ನು ತಂದಿರುವ ಸಾಧ್ಯತೆ ಹೆಚ್ಚಾಗಿದ್ದು, ಇದರ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಹರಿದಾಡುತ್ತಿದೆ.
ಈಗಿದ್ದಾಗಲೂ ತಾವು ಮೌನ ವಹಿಸಿದರೆ ಉನ್ನತ ಶಿಕ್ಷಣದ ಗುಣಮಟ್ಟ ತಳಮಟ್ಟ ಸೇರುವುದರ ಜೊತೆಗೆ ನೈಜವಾಗಿ UGC ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ತುಂಬಲಾರದ ನಷ್ಟ ಮತ್ತು ಮೋಸವಾಗುತ್ತದೆ. ಆದ್ದರಿಂದ ಇಂತಹ ವಂಚಕರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ, ಇವರನ್ನು ಅತಿಥಿ ಉಪನ್ಯಾಸಕ ವೃತ್ತಿಯ ಆಯ್ಕೆ ಪ್ರಕ್ರಿಯೆಯಿಂದ ಶಾಶ್ವತವಾಗಿ ಕೈ ಬಿಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಿತ್ತೇನೆ.
ಈ ಎಲ್ಲಾ ಮಾಹಿತಿಯನ್ನು ಸವಿನಯದಿಂದ ತಮ್ಮ ಗಮನಕ್ಕೆ ತಂದಿರುತ್ತೇನೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈ ಮನವಿ ಪತ್ರದ ಜೊತೆಗೆ ಲಗತ್ತಿಸಿರುತ್ತೇನೆ. ಆದಾಗ್ಯು ತಾವು ಇವರ ಮೇಲೆ ಯಾವುದೇ ಕ್ರಮವನ್ನು ಜರುಗಿಸದೆ ಹೋದರೆ ಇದಕ್ಕೆ ಸಂಭಂದಪಟ್ಟವರನ್ನೇ ನೇರ ಹೊಣೆಯನ್ನಾಗಿ ಮಾಡಿ ಕಾನೂನು ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ.
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…
ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…