ನವ ದೆಹಲಿ: 07ಜನೆವರಿ.25.ಇಂದು ಚುನಾವಣಾ ಆಯೋಗದಿಂದ ದೆಹಲಿ ವಿಧಾನಸಭಾ ಚುನಾವಣೆಯ ಘೋಷನೇ ಮಾಡ್ಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ್ದು, ಎಲ್ಲಾ 70 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ.
ಚುನಾವಣೆ ದಿನಾಂಕ ಘೋಷಿಸುವ ಮುನ್ನ ಚುನಾವಣಾ ಇಲಾಖೆಯ ಕಳೆದ ವರ್ಷದ ಸಾಧನೆ ಕುರಿತು ಮೆಲುಕು ಹಾಕಿದ ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಈ ಬಾರಿ ದೆಹಲಿ ಚುನಾವಣೆಯಲ್ಲಿ ʼಮನಸ್ಸಿನಿಂದ ಮತಹಾಕಿʼ ಎಂದು ಮತದಾರರಿಗೆ ಕರೆ ನೀಡಿದರು.
ಇನ್ನು ಈ ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದು ಸದ್ಯ ಕುತೂಹಲವನ್ನು ಹುಟ್ಟುಹಾಕಿದೆ.
ಒಟ್ಟು 1.55 ಕೋಟಿ ಮತದಾರರು:
ಪುರುಷ ಮತದಾರರು: 83.49 ಲಕ್ಷ
ಮಹಿಳಾ ಮತದಾರರು: 71.74 ಲಕ್ಷ
ಯುವ ಮತದಾರರು (20-29): 25.89 ಲಕ್ಷ
ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು: 2.08 ಲಕ್ಷ
ಹಿರಿಯ ಮತದಾರರು (85+ ವಯಸ್ಸಿನವರು ): 1.09 ಲಕ್ಷ
ತೃತೀಯಲಿಂಗಿ ಮತದಾರರು: 1,261 ಮತದಾರರು
ಚುನಾವಣಾ ಆಯೋಗದಿಂದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಣೆ ಮಾಡ್ಕಾಗಿದೆ.
ಹೊಸ ದೆಹಲಿ.08.ಜೂನ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) (1) ಜೂನಿಯರ್ ರಿಸರ್ಚ್ ಫೆಲೋಶಿಪ್ ಪ್ರಶಸ್ತಿ ಮತ್ತು ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿ',…
ಬೀದರ.08.ಜೂನ್.25:- ಇಂದು ಮುಂಗಾರು ಮಳೆ ಆರಂಭವಾಗುವ ಈ ದಿನದಂದು ಬೀದರ್ ಜಿಲ್ಲೆಯ ಹಳೆಯ ನಗರ ಮತ್ತು ಹುಮ್ನಾಬಾದ್ ಪಟ್ಟಣದಲ್ಲಿ ಪ್ರತಿ…
ಉತ್ತರಾಖಂಡದ ಗರ್ವಾಲ್‌ನ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾದ ಪಡೆಗಳ ಕಾರ್ಯಾಚರಣೆ ಮತ್ತು ಆಡಳಿತಾತ್ಮಕ ಸನ್ನದ್ಧತೆಯನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ…
ಮಿಥಿ ನದಿ ಹೂಳು ತೆಗೆಯುವ ಹಗರಣಕ್ಕೆ ಸಂಬಂಧಿಸಿದ 65 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಡಿನೋ…
ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು…
ಸಿಕ್ಕಿಂನಲ್ಲಿ, ಇಂದು ವಿಶೇಷ ಹೆಲಿಕಾಪ್ಟರ್ ಹಾರಾಟದ ಮೂಲಕ ಮಂಗನ್ ಜಿಲ್ಲೆಯ ಚಾಟೆನ್‌ನಿಂದ 28 ಜನರನ್ನು ಸ್ಥಳಾಂತರಿಸಲಾಗಿದೆ. ಸಿಕ್ಕಿಂ ಸರ್ಕಾರವು ಸಿಕ್ಕಿಬಿದ್ದ…