20ಡಿಸೆಂಬರ್.24.ಜಿಲ್ಲೆಯ ರೈತರ ಸಮಸ್ಯೆಗಳ ಕುರಿತು ಪರಿಹಾರ ಬಡಗಿಸುವ್ ಸಲಹೆ ಮತ್ತು ಬೇರೆ ಬೇರೆ ಬೆಳೆಗಳ ಬಗ್ಗೆಯೂ ಗಮನ ಹರಿಸಿ ಉತ್ತಮ ಲಾಭವನ್ನು ಪಡೆಯಬೇಕು.
ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಗ್ರವಾದಂತಹ ಮಾಹಿತಿಯನ್ನು ಪಡೆದು ರೈತರಿಗೆ ಸೂಕ್ತವಾದಂತಹ ಸಲಹೆ ಸೂಚನೆಗಳನ್ನು ಒದಗಿಸಬೇಕು ಹಾಗೂ ರೈತರು ಒಂದೇ ಬೆಳೆಯ ಮೇಲೆ ಅವಲಂಬಿತ ಇರಬಾರದು ಅಂದು ಅವರಿಗೆ ಬೇರೆ ಬೇರೆ ಮಾಹಿತಿಯ ಕೊಡೋಕೆ ಕಾರ್ಯಗಾರ ಇಟ್ಕೊಳ್ಲಾಗಿದೆ.
ಅವಲಂಬಿತರಾಗಿರದೇ ಬೇರೆ-ಬೇರೆ ಬೆಳೆಗಳ ಬಗ್ಗೆಯೂ ಗಮನ ಹರಿಸಿ ಉತ್ತಮ ಲಾಭವನ್ನು ಕಂಡುಕೊಳ್ಳಬಹುದಾಗಿದೆ. ರೈತರು ಪಪಾಯ ಬೆಳೆಯನ್ನು ಸಹ ಬೆಳೆದು ಉತ್ತಮ ರೀತಿಯ ಲಾಭವನ್ನು ಗಳಿಸಬಹುದೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಹೇಳಿದರು.
ರೈತರು ಅವರು ಇತ್ತೀಚಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಮತ್ತು ತೋಟಗಾರಿಕೆ ಇಲಾಖೆ ಬೀದರ ಇವರುಗಳ ಸಹಯೊಗದೊಂದಿಗೆ ಬೀದರ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಮೂರನೆ ತ್ರೈ ಮಾಸಿಕ ತೋಟಗಾರಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೈತರು ಮಾವಿನ ಬೆಳೆಯಲ್ಲಿ ಎದುರಿಸುತ್ತಿರುವ ಕೀಟಗಳ ಬಾಧೆಯ ಬಗ್ಗೆ ಚರ್ಚಿಸುತ್ತಾ ಕೀಟ ನಿರ್ವಹಣೆ ಬಗ್ಗೆ ಸಮಗ್ರವಾದಂತಹ ಮಾಹಿತಿಯನ್ನು ರೈತರಿಗೆ ಒದಗಿಸುವಂತೆ ಸಭೆಯಲ್ಲಿದ್ದಂತಹ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು. ಕಸ್ತೂರಿ ಕಲ್ಲಂಗಡಿ ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆಯ ಬಗ್ಗೆ ರೈತರಿಗೆ ಮೌಖಿಕ ಮಾಹಿತಿಯನ್ನು ಒದಗಿಸುವುದು ಅತಿ ಅವಶ್ಯಕವಾಗಿರುತ್ತದೆ ಎಂದು ಹೇಳಿದರು.
ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಬಾಗಲಕೋಟ ಮತ್ತು ತೋಟಗಾರಿಕೆ ಇಲಾಖೆ ಬೀದರ್ ಇವರುಗಳು ಸಹಯೋಗದಲ್ಲಿ ತೋಟಗಾರಿಕೆ ವಿಜ್ಞಾನ ಮಹಾವಿದ್ಯಾಲಯ ಬೀದರ್ ಇಲ್ಲಿ ರೈತರಗೋಸ್ಕರ ಕಸ್ತೂರಿ ಕಲ್ಲಂಗಡಿ ಬೆಳೆಯ ಸಮಗ್ರ ಪೋಷಕಾಂಶ ನಿರ್ವಹಣೆಯ ಬಗ್ಗೆ ರೈತರಿಗೆ ಮೌಖಿಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೀದರ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ವಿಶ್ವನಾಥ ಝಿಳ್ಳೆ, ಬೀದರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕರಾದ ಸುನೀಲ ಗಂಗಶ್ರೀ, ಡಾ.ವಿ.ಪಿ.ಸಿಂಗ್, ಡಾ.ವಿಜಯಮಹಾಂಏಶ, ಡಾ.ಕಡ್ಲಿ ವಿರೇಶ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ.ಪ್ರಶಾಂತ, ಡಾ.ಅಬ್ದುಲ್ ಕರೀಮ್ ಎಂ., ಡಾ.ಅಂಬ್ರೇಷ್, ಡಾ.ವಿ.ಪಿ.ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Source: www.prajaprabhat.com
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…