ತಾರತಮ್ಯವಿಲ್ಲದೇ ಬೇಕಿದೆ ಅತಿಥಿ ಉಪನ್ಯಾಸಕರಿಗೆ “ಘನತೆಯ ಬದುಕು” -ಡಾ.ಗುರುಪ್ರಸಾದ ಎಚ್ ಎಸ್

ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಸುತ್ತಮುತ್ತ ಸುಮಾರು ಒಂದೂವರೆ ಸಾವಿರ ಎಕರೆಯ ಭೂಸ್ವಾಧೀನದ ಆದೇಶವನ್ನು ರದ್ದಾಗಿರುವುದೇ ಸಾಕ್ಷಿ .

ಭೂಸ್ವಾಧೀನದ ಅಂತಿಮ ಪ್ರಕ್ರಿಯೆಗಳು ಮುಗಿದಿದ್ದರೂ ಕೂಡ ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ರೈತಪರ ತೀರ್ಮಾನವೇ ಇದಕ್ಕೆ ತಾಜಾ ಉದಾಹರಣೆ .

ಇಂತಹುದೇ ದೃಢವಾದ ತೀರ್ಮಾನ ಕೇವಲ ತಿಂಗಳಿಗೆ ಸಾವಿರ ರೂಪಾಯಿ, ಹದಿನೈದು ನೂರಕ್ಕೆ ದಶಕಗಳ ಕಾಲ ಸೇವೆ ಮಾಡಿದ ಸರಕಾರಿ ಪ್ರಥಮ‌ದರ್ಜೆ (ಪದವಿ) ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಯುಜಿಸಿ-ನಾನ್ ಯುಜಿಸಿ ಎಂಬ ತಾರತಮ್ಯವಿಲ್ಲದೇ ಘನತೆಯ ಬದುಕು ಬೇಕಿದೆ,
ಅನಿಶ್ಚಿತ ಬದುಕು, ಪ್ರತಿವರ್ಷ ಹತ್ತು ತಿಂಗಳಿಗೊಮ್ಮೆ ಕೌನ್ಸಿಲಿಂಗ್ ಗುಮ್ಮ ಇದರಿಂದ ಅವರಿಗೆ ಬದುಕು ಕಟ್ಟಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ.  ಅತಿಥಿ ಉಪನ್ಯಾಸಕರ ನೇಮಕಾತಿಯ UGC  ಅರ್ಹತೆಯ NET/KSLET /PhD ಜೊತೆಗೆ 8, 10, 15, 20 ವರ್ಷಗಳ ಸೇವಾನುಭವದ NON UGC  ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡದ  ತಾರತಮ್ಯದಿಂದಾಗಿ
ಐದು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೆಲಸ ಕಳೆದುಕೊಳ್ಳುವ, ಅವರ ಮತ್ತು ಕುಟಬದವರ ಬದುಕು ಕತ್ತಲೆಯತ್ತ ಸಾಗಿದೆ. ಅದರಂತೆಯೇ ದೇವನಹಳ್ಳಿ ರೈತರ ಭೂ ಸ್ವಾಧಿನ ಕೈಬಿಟ್ಟು ಅವರ ಬೇಡಿಕೆಯಂತೆ ಸರ್ಕಾರ ತೀರ್ಮಾನ ತೆಗೆದುಕೊಂಡಂತೆ ಅತಿಥಿ ಉಪನ್ಯಾಸಕರ ಘನತೆಯ ಬದುಕಿಗೆ ಬೇಕಿರುವುದು ಸೇವಾ ವಿಲೀನಾತಿ ಒಂದೇ.


ರೈತಪರವಾಗಿ ಜೀವಪರವಾದ ನಿಲುವು ತಳೆದ ಮಾನ್ಯ ಮುಖ್ಯಮಂತ್ರಿ ಗಳು , ಅತಿಥಿ ಉಪನ್ಯಾಸಕರ ಈ ದಶಕಗಳ ಕಾಲದ ಸಮಸ್ಯೆಯನ್ನು, ಸರ್ಕಾರದಿಂದ ಮಾನವೀಯ ಪರಿಹಾರ ನೀಡಲು ಕಷ್ಟ ಸಾಧ್ಯವೇನಲ್ಲ.
ಕಾನೂನಿನ ತೊಡಕು ನಿವಾರಿಸಿ  ಹೊಸ ಮಸೂದೆಯ ಮೂಲಕ ಅತಿಥಿ ಉಪನ್ಯಾಸಕರ ಖಾಯಂ ಮಾಡಿ , ಅವರ ಕುಟುಂಬದವರು ಘನತೆಯಿಂದ ಬದುಕು ಮಾಡಲಿ.

ಆದರೆ ಇಲ್ಲಿ ಬೇಕಿರುವುದು ಅತಿ ಮುಖ್ಯವಾಗಿ  ಅತಿಥಿ ಉಪನ್ಯಾಸಕರು, ಸಂಘಟನೆಗಳು ಮತ್ತು ಸರ್ಕಾರದ ಇಚ್ಛಾ ಶಕ್ತಿ, ಹಿರಿಯ ಹಾಗೂ ಕಿರಿಯ ಉಪನ್ಯಾಸಕರು,
ಮನೆಯೊಂದು ಮೂರು ಬಾಗಿಲನಂತೆ ಇರುವ ಅತಿಥಿ ಉಪನ್ಯಾಸಕ ಸಂಘಟನೆಗಳು ,ನಾಯಕರುಗಳ ಸ್ವಹಿತಾಸಕ್ತಿ, ಹಿಂದೆ ಸಂಘಟನೆ ನಾಯಕರುಗಳು ಆಮಿಷಗಳಿಗೆ ಬಲಿಯಾಗಿರುವುದು, ಒಬ್ಬರಿಗೊಬ್ಬರು ಕಾಲು ಎಳೆಯುವ,
ಶಿಕ್ಷಣ ಕ್ಷೇತ್ರದಿಂದ ಆಯ್ಕೆ ಆದ ಎಂಎಲ್ ಸಿ ಗಳ ನಿರ್ಲಿಪ್ತತೆ, ಉನ್ನತ ಅಧಿಕಾರಿಗಳ
ಮತ್ತು ರಾಜಕಾರಣಿಗಳ ಒಡೆದಾಳುವ ನೀತಿ-
ಆಟಗಳಿಂದಾಗಿ ಎಂದೋ ಆಗಬೇಕಿದ್ದ ಅತಿಥಿ ಉಪನ್ಯಾಸಕರ ಸೇವಾ ವಿಲೀನತೆ ಗ್ರಹಣ ಹಿಡಿಯಿತು.

ರಾಜಕೀಯ ಇಚ್ಛಾಶಕ್ತಿ ಇದ್ದರೆ ತನ್ನದೇ ನಿರ್ಧಾರಗಳನ್ನು ರದ್ದು ಪಡಿಸಲು ಸರ್ಕಾರಕ್ಕೆ ಅಡೆತಡೆಗಳು ಇಲ್ಲವೇ ಇಲ್ಲ ಅಥವಾ ಬಹಳ ಕಡಿಮೆ. ಅದೇ ರೀತಿ, ತಾನೇ ಹೊರಡಿಸಿದ  ಆದೇಶಗಳನ್ನು ಕಾನೂನಿನ ಇನ್ಯಾವುದೋ ತೊಡಕು ನಿವಾರಿಸಿ  ಹೊಸ ಮಸೂದೆಯ ಮೂಲಕ ಹತ್ತು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಖಾಯಂ ಆಗುವಂತೆ ನೋಡಿಕೊಳ್ಳುವುದು, ಈ ಉಪನ್ಯಾಸಕರ ಹೊಟ್ಟೆ ಮೇಲೆ ಬರೆ ಎಳೆಯದಂತೆ ಸರ್ಕಾರ ಜವಾಬ್ದಾರಿಯುತ ಕೆಲಸ ಮಾಡಬೇಕಿದೆ.

prajaprabhat

Recent Posts

ದುಗನೂರು, ಬಿಚ್ಚಾಲಿ, ಗಿಲ್ಲೇಸೂಗೂರ ಗ್ರಾಮಗಳಲ್ಲಿ ಶಾಸಕರಾದ<br>ಬಸನಗೌಡ ದದ್ದಲ್ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…

2 hours ago

ಅತಿಥಿ ಉಪನ್ಯಾಸಕರಿಲ್ಲದೆ ಮಂಗಳೂರು ವಿಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳಿಗೆ ಸಂಕಷ್ಟ: ಮುಖಂಡರ ಆಕ್ರೋಶ

ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…

2 hours ago

Scholarship ಕೋಟಕ್ ಕನ್ಯಾ ಸ್ಕಾಲರ್‌ಷಿಪ್,

ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…

3 hours ago

ಹಿಮಾಚಲ ಪ್ರದೇಶದಾದ್ಯಂತ ಮಾನ್ಸೂನ್ ಮಳೆ ನಿರಂತರವಾಗಿ ಸುರಿಯುತ್ತಿದೆ.

ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…

3 hours ago

ಬಾಗಲಕೋಟೆಯಲ್ಲಿ ಭಾರತೀಯ ರೆಡ್ಡಿ ಸಮಾಜದವರ ಸಮಾವೇಶ ಶೀಘ್ರ – ಪ್ರಭಾಕರರೆಡ್ಡಿ

ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…

4 hours ago

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

13 hours ago